Asianet Suvarna News Asianet Suvarna News

ಇಂದು ಬೆಂಗ್ಳೂರಿನ ಬಹುತೇಕ ಕಡೆ ಸಂಜೆವರೆಗೂ ಕರೆಂಟ್‌ ಇರಲ್ಲ..!

66/11ಕೆವಿ ಆಸ್ಟಿನ್ ಟೌನ್ ಸ್ಟೇಷನ್ ಹಾಗೂ ಹೆಚ್.ಬಿ.ಆರ್ ಬಡಾವಣೆಯಲ್ಲಿ ತುರ್ತುನಿರ್ವಹಣಾ ಕಾರ್ಯ ಹಿನ್ನಲೆಯಲ್ಲಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದ ಬೆಸ್ಕಾಂ 

Power Outage in Most of Parts of Bengaluru on June 20th 2024 grg
Author
First Published Jun 20, 2024, 8:17 AM IST

ಬೆಂಗಳೂರು(ಜೂ.20): ಇಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಹೌದು, 66/11ಕೆವಿ ಆಸ್ಟಿನ್ ಟೌನ್ ಸ್ಟೇಷನ್ ಹಾಗೂ ಹೆಚ್.ಬಿ.ಆರ್ ಬಡಾವಣೆಯಲ್ಲಿ ತುರ್ತುನಿರ್ವಹಣಾ ಕಾರ್ಯ ಹಿನ್ನಲೆಯಲ್ಲಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. 

ಇಂದು(ಗುರುವಾರ) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 4ಗಂಟೆಯವರೆಗೆ ವಿದ್ಯುತ್ ಸ್ಥಗಿತವಾಗಲಿದೆ. 

Power Cut: ಇಂದು, ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!

ಆಸ್ಟಿನ್ ಟೌನ್‌ನಲ್ಲಿ ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು: 

ರಿಚ್ಚಂಡ್ ರಸ್ತೆ, ಸಿಲ್ವರ್ ಲೇಕ್ ಅಪಾರ್ಟ್‌ಮೆಂಟ್, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ವಿಜಯ ಬ್ಯಾಂಕ್, ಬ್ರಿಗೇಡ್ ರಸ್ತೆ, ಕ್ಯಾಸಲ್ ಸ್ಟ್ರೀಟ್, ಟಾಟಾ ಲೇನ್, ಉದಯ ಟಿವಿ, ಐಟಿಸಿ, ಫೋರ್ ಸೀಸನ್ ಅಪಾರ್ಟ್‌ ಮೆಂಟ್, ಕೆಎಸ್‌ಆರ್‌ಪಿ, ರಿಚ್‌ಮಂಡ್ ರಸ್ತೆ ರತ್ನ ಅವೆನ್ಯೂ, ಹೇಮ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಬ್ರಿಗೇಡ್ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ವುಡ್ ಸ್ಟ್ರೀಟ್, ಮಾಗ್ರತ್ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಕಾನ್ವೆಂಟ್ ರಸ್ತೆ.  ಎಂಬಸ್ಸಿ ಕಚೇರಿ, ಕಮಿಸಿರೇಟ್ ರಸ್ತೆ, ಗರುಡಾ ಮಾಲ್, ಅಶೋಕನಗರ, ಪೀರನ್, ಮಾರ್ಕ್ಸ್ಮ್ ರಸ್ತೆ, ಬೋವೀ ಲೇನ್, ಮ್ಯೂಸಿಯಂ ರಸ್ತೆ, ಮದ್ರಾಸ್ ಬ್ಯಾಂಕ್ ರಸ್ತೆ ಮತ್ತು ಸುತ್ತಮುತ್ತಲಿನ ರಸ್ತೆ ಪ್ರದೇಶ. 

ಗ್ರಾಹಕರೇ ಗಮನಿಸಿ: ವಾಟ್ಸ್‌ ಆ್ಯಪ್‌ನಲ್ಲಿಯೂ ಬೆಸ್ಕಾಂಗೆ ವಿದ್ಯುತ್ ಸಮಸ್ಯೆ ಬಗ್ಗೆ ದೂರು ನೀಡಿ

ಹೆಚ್.ಬಿ.ಆರ್' ಬಡಾವಣೆ ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು

ಹೆಚ್.ಬಿ.ಆರ್. 1ನೇ ಬ್ಲಾಕ್, 2ನೇ ಬ್ಲಾಕ್, ಯಾಸಿನ್‌ನಗರ, ಸುಭಾಶ್ ಲೇಔಟ್, ರಾಮ ದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಲೇಔಟ್, ಟೀಚರ್ಸ್ ಕಾಲೋನಿ, ಹೆಚ್.ಬಿ.ಆರ್. 3ನೇ ಬ್ಲಾಕ್, ಶಿವರಾಮಯ್ಯ ಲೇಔಟ್, ರಿಂಗ್ ರಸ್ತೆ, ಸರ್ವೀಸ್ ರಸ್ತೆ, ಕೆ.ಕೆ. ಹಳ್ಳಿ ಗ್ರಾಮ. ಸಿ.ಎಂ.ಆರ್.ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಲೇಔಟ್, ಲಿಂಗರಾಜಪುರ, ಜಾನಕೀರಾಮ್ ಲೇಔಟ್, ಕನಕದಾಸ ಲೇಔಟ್, ಗೋವಿಂದಪುರ ಮುಖ್ಯರಸ್ತೆ, ರಶದ್‌ನಗರ, ಫರೀದಾ ಶೂ ಫ್ಯಾಕ್ಟರಿ, ಆರೇಬಿಕ್ ಕಾಲೇಜ್, ಕೆ.ಜಿ.ಹಳ್ಳಿ, ಗೋವಿಂದಪುರ ಗ್ರಾಮ, ಕೆ.ಜಿ.ಹಳ್ಳಿ, ವಿನೋಬನಗರ, ಬಿ.ಎಂ.ಲೇಔಟ್, ಆರೋಗ್ಯಮ್ಮ ಲೇಔಟ್, ಕಾವೇರಿ ಗಾರ್ಡನ್ ಮತ್ತು ಸುತ್ತಲಿನ ಪ್ರದೇಶ. ಹೆಚ್.ಬಿ.ಆರ್. ಲೇಔಟ್ 4ನೇ ಬ್ಲಾಕ್, ಯಾಸಿನ್‌ನಗರ, 5ನೇ ಬ್ಲಾಕ್, ಹೆಚ್.ಬಿ.ಆರ್. ನಾಗವಾರ ಮುಖ್ಯರಸ್ತೆ, ನಾಗವಾರ, ಎನ್.ಜೆ.ಕೆ. ಗಾರ್ಮೆಂಟ್ಸ್, ಬೈರನಕುಂಟೆ, ಕುಪ್ಪುಸ್ವಾಮಿ ಲೇಔಟ್, ಹೆಚ್.ಕೆ.ಬಿ.ಕೆ ಕಾಲೇಜ್, 4ನೇ ಮತ್ತು 5ನೇ ಹೆಚ್.ಬಿ.ಆರ್. ಲೇಔಟ್, ವಿದ್ಯಾ ಸಾಗರ, ಥಣಿಸಂದ್ರ, ಆರ್.ಕೆ. ಹೆಗಡೆನಗರ, ಕೆ.ನಾರಾಯಣಪುರ.

ಎನ್.ಎನ್.ಹಳ್ಳಿ, ಬಾಲಾಜಿ ಲೇಔಟ್, ಫೇಸ್ 1 ರಿಂದ 3. ರೈಲ್ವೆ ಮೆನ್ಸ್ ಲೇಔಟ್, ಬಿ.ಡಿ.ಎಸ್. ಲೇಔಟ್, ಸೆಂಟ್ರಲ್ ಎಕ್ಸೆಸ್. ಕೆ.ಕೆ. ಹಳ್ಳಿ ಹೆಣ್ಣೂರು ಮುಖ್ಯರಸ್ತೆ, ಹೆಚ್.ಆರ್.ಜಿ.ಆರ್. 3ನೇ ಬ್ಲಾಕ್,ಆಯಿಲ್ ಮಿಲ್ ರಸ್ತೆ, ಅರವಿಂದನಗರ, ನೆಹರು ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಬೆಥೆಲ್ ಸ್ಟ್ರೀಟ್, ಎ.ಕೆ.ಕಾಲೋನಿ, ಹೆಚ್.ಆರ್.ಬಿ.ಆರ್. 1ನೇ ಬ್ಲಾಕ್, 80 ಅಡಿರಸ್ತೆ, ಸಿ.ಎಂ.ಆರ್. ರಸ್ತೆ, ಕಾರ್ಲೆ, ಹೆಗಡೆನಗರ, ನಾಗೇನಹಳ್ಳಿ, ಪೊಲೀಸ್ ಕ್ವಾರ್ಟ ಕೆಂಪೇಗೌಡ ಲೇಔಟ್, ಶಬರೀನಗರ, ಕೆ.ಎಂ.ಟಿ. ಲೇಔಟ್, ಭಾರತೀಯ ಸಿಟಿ ನೂರ್ ನಗರ ಭಾರತ ಮಾತ ಲೇಔಟ್, ಭಾರತ ಮಾತ ಲೇಔಟ್, ಹಿದಾಯತ್ ನಗರ, ಲಿಡ್ಕರ್ ಕಾಲೋನಿ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ. 

Latest Videos
Follow Us:
Download App:
  • android
  • ios