ಬೆಸ್ಕಾಂ ತಾವರೆಕೆರೆ ಉಪ ವಿಭಾಗ ಹಾಗೂ ಪೀಣ್ಯ ವ್ಯಾಪ್ತಿಯಲ್ಲಿನ ವಿದ್ಯುತ್‌ ಉಪ ಕೇಂದ್ರಗಳಲ್ಲಿ ಜೂ.15 ಹಾಗೂ ಜೂ.16ರಂದು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ವಿವಿಧೆಡೆ ತೀವ್ರ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. 

ಬೆಂಗಳೂರು (ಜೂ.15): ಬೆಸ್ಕಾಂ ತಾವರೆಕೆರೆ ಉಪ ವಿಭಾಗ ಹಾಗೂ ಪೀಣ್ಯ ವ್ಯಾಪ್ತಿಯಲ್ಲಿನ ವಿದ್ಯುತ್‌ ಉಪ ಕೇಂದ್ರಗಳಲ್ಲಿ ಜೂ.15 ಹಾಗೂ ಜೂ.16ರಂದು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ವಿವಿಧೆಡೆ ತೀವ್ರ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ರೆಮ್ಕೊ ವಿದ್ಯುತ್‌ ಕೇಂದ್ರದಲ್ಲಿನ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜೂ.15ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಆರ್.ಆರ್‌.ನಗರ ಹಾಗೂ ಬಾಪೂಜಿನಗರ ಸುತ್ತಮುತ್ತ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಇದರಿಂದ ಬಾಪೂಜಿನಗರ, ಕವಿಕಾ ಲೇಔಟ್‌, ಬ್ಯಾಟರಾಯನಪುರ ಐಯ್ಯಣ್ಣಶೆಟ್ಟಿ ಬಡಾವಣೆ, ಗಣಪತಿನಗರ, ಪ್ರೈಡ್‌ ಅಪಾರ್ಟ್‌ಮೆಂಟ್‌, ದೀಪಾಂಜಲಿನಗರ, ಪಟೇಲ್‌ ಪುಟ್ಟಯ್ಯ ಕೈಗಾರಿಕಾ ಪ್ರದೇಶ, ಬಿಎಚ್‌ಇಎಲ್‌, ಮುತ್ತಾಚಾರಿ ಕೈಗಾರಿಕಾ ಪ್ರದೇಶ, ಜ್ಯೋತಿನಗರ, ಗಂಗೊಂಡನಹಳ್ಳಿ, ಅಜಿತ್‌ ಸೇಠ್‌ ಕೈಗಾರಿಕಾ ಪ್ರದೇಶ, ವಿನಾಯಕ ಬಡಾವಣೆ, ಮೆಟ್ರೋ ಲೇಔಟ್‌, ನಾಯಂಡಹಳ್ಳಿ, ಬ್ಯಾಟರಾಯನಪುರ, ಮೈಸೂರು ರಸ್ತೆ, ಶೋಭಾ ಟೆಂಟ್‌ ರೋಡ್‌, ಗುಡ್ಡದಹಳ್ಳಿ ಎಕ್ಸ್‌ಟೆನ್ಷನ್‌, ಗ್ಲೋಬಲ್‌ ವಿಲೇಜ್ ಟೆಕ್‌ ಪಾರ್ಕ್‌, ಆರ್‌.ಆರ್‌.ನಗರ ಸುತ್ತಮುತ್ತ ವಿದ್ಯುತ್‌ ಸಮಸ್ಯೆಯಾಗಲಿದೆ.

ಬಿಎಸ್‌ವೈ ಕುಟುಂಬ ನಾಶಕ್ಕೆ ಕಾಂಗ್ರೆಸ್‌ ಕುತಂತ್ರ: ಎಚ್‌.ಡಿ.ಕುಮಾರಸ್ವಾಮಿ

ಜೂ.16ರಂದು ವಿವಿದೆಡೆ ವ್ಯತ್ಯಯ: ಇನ್ನು ಜೂ.16ರಂದು ತಾವರೆಕೆರೆ ಉಪ ವಿಭಾಗ ವ್ಯಾಪ್ತಿಯ ಚಂದ್ರಪ್ಪ ಸರ್ಕಲ್‌ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ 10 ಗಂಟೆಯಿಂದ 5 ಗಂಟೆವರೆಗೆ ಚಿಕ್ಕನಹಳ್ಳಿ, ಸೂಲಿವಾರ, ಗೊಲ್ಲಹಳ್ಳಿ, ಚಂದ್ರಪ್ಪ ಸರ್ಕಲ್, ಹುಲವೇನಹಳ್ಳಿ, ಮಾದಾಪಟ್ಟಣ ಸುತ್ತಮುತ್ತಲಿನ ಪ್ರದೇಶ ಕುರುಬರಪಾಳ್ಯ ಮತ್ತು ಸುತ್ತಮುತ್ತಲಿನ ಜೆಲ್ಲಿ ಕ್ರಷರ್‌ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆ ಇರುವುದಿಲ್ಲ.

ಇನ್ನು ಪೀಣ್ಯ ಕೇಂದ್ರದಲ್ಲಿ ಫೀಡರ್‌ಗಳ ನಿರ್ವಹಣೆ ಹಿನ್ನೆಲೆಯಲ್ಲಿ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಎಚ್ಎಂಟಿ ರಸ್ತೆ, ಆರ್‌ಎನ್‌ಎಸ್‌ ಅಪಾರ್ಟ್‌ಮೆಂಟ್‌, ಬೋರ್‌ಲಿಂಗಪ್ಪ ಗಾರ್ಡನ್‌, ಪೀಣ್ಯ ಪೊಲೀಸ್‌ ಠಾಣೆ ರಸ್ತೆ, ಟೆಲಿಫೋನ್‌ ಎಕ್ಸ್‌ಚೇಂಜ್‌, ವೈಷ್ಣವಿ ಮಾಲ್, ಕಾವೇರಿ ಮಾಲ್‌, ಗಣಪತಿನಗರ ಮುಖ್ಯರಸ್ತೆ, ಕೆಎಚ್‌ಬಿ ಬಡಾವಣೆ, ರಾಜೇಶ್ವರಿನಗರ, ಭೈರೇಶ್ವರನಗರ, ರಾಜಗೋಪಾಲನಗರ, ಕಸ್ತೂರಿ ಬಡಾವಣೆ, ಇಎಸ್‌ಐ ಆಸ್ಪತ್ರೆ, ಜಿಕೆಡಬ್ಲ್ಯೂ ಬಡಾವಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಉತ್ತ ವೃತ್ತದ ಅಧೀಕ್ಷಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಡಿಯೂರಪ್ಪ ಬಂಧಿಸಲು ಹೊರಟಿದ್ದ ಸಿಐಡಿಗೆ ಹಿನ್ನಡೆ!

ಮಾಚೋಹಳ್ಳಿ ಸುತ್ತ ವಿದ್ಯುತ್‌ ಇರಲ್ಲ: ಮಾಚೋಹಳ್ಳಿ ಶಾಖೆಯ 11 ಕೆ.ವಿ. ಮಾರ್ಗಗಳ ನಿರ್ವಹಣೆ ಹಿನ್ನೆಲೆಯಲ್ಲಿ ಜೂ.16ರಂದು ಬೆಳಗ್ಗೆ 10 ರಿಂದ 5 ಗಂಟೆವರೆಗೆ ಮಾಚೋಹಳ್ಳಿ ಸುತ್ತಮುತ್ತ ವಿದ್ಯುತ್‌ ಸಮಸ್ಯೆಯಾಗಲಿದೆ. ಮಾಚೋಹಳ್ಳಿ ಕೈಗಾರಿಕಾ ಪ್ರದೇಶ, ಕಾಚೋಹಳ್ಳಿ, ಫಾರೆಸ್ಟ್‌ ಗೇಟ್‌, ಬೈಯಂಡನಹಳ್ಳಿ, ಸೀಗೆಹಳ್ಳಿ, ರಾಶಿ ರೆಸಿಡೆನ್ಸಿ, ಕಡಬಗೆರೆ, ಬೈಲಾಕೋನೆನಹಳ್ಳಿ, ಕಡಬಗೆರೆ, ಮಹಿಮಣ್ಣನಪಾಳ್ಯ, ಗಿಡ್ಡೇನಹಳ್ಳಿ, ರಾಘವೇಂದ್ರ ಬಡಾವಣೆ, ಉತ್ತರಹಳ್ಳಿ, ವರ್ಮ ಬಡಾವಣೆ, ಮುನೇಶ್ವರ ಬಡಾವಣೆ, ಸ್ಫೂರ್ತಿ ಬಡಾವಣೆ, ವಿನಾಯಕ ಬಡಾವಣೆ, ರಾಶಿ ಬಡಾವಣೆ, ಪೂಜಾ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.