Asianet Suvarna News Asianet Suvarna News

ಲಸಿಕೆ ಹಾಕಿಸಿದ ತೋಳಿಂದ ಬಂತು ವಿದ್ಯುತ್‌..!

* ಹುಬ್ಬಳ್ಳಿ ನಗರದಲ್ಲಿ ನಡೆದ ಘಟನೆ
* ಏನಾದರೂ ಸೈಡ್‌ ಎಫೆಕ್ಟ್ ಆಗಬಹುದೆ ಎಂದು ಕುಟುಂಬಸ್ಥರ ಆತಂಕ
* ಸಂಜೆ ಬಳಿಕ ಪುನಃ ಬಲ್ಬ್‌ ಹಿಡಿದಾಗ ಅದು ಬೆಳಗಲಿಲ್ಲ 

Power Came From Corona Vaccinated Arm in Hubballi grg
Author
Bengaluru, First Published Jun 9, 2021, 10:26 AM IST

ಹುಬ್ಬಳ್ಳಿ(ಜೂ.09): ಲಸಿಕೆ ಹಾಕಿಸಿಕೊಂಡವರಲ್ಲಿ ಪ್ರವಹಿಸಿದ ವಿದ್ಯುತ್‌. ಹೌದು! ಹೀಗೊಂದು ವಿಸ್ಮಯ ಕಂಡುಬಂದಿದ್ದು ಹುಬ್ಬಳ್ಳಿಯಲ್ಲಿ. ವ್ಯಾಕ್ಸಿನೇಶನ್‌ ಮಾಡಿಸಿಕೊಂಡು ಬಂದ ಯುವಕ, ಯುವತಿಯ ತೋಳಿಗೆ ಬಲ್ಬ್‌ ಹಿಡಿದಾದ ಅದು ಬೆಳಗಿದ ವಿದ್ಯಮಾನ ಇಲ್ಲಿನ ಗೋಕುಲ ರಸ್ತೆಯ ವಸ್ತ್ರದ ಕುಟುಂಬದವರಲ್ಲಿ ಕಂಡುಬಂದಿದೆ. ಇದು ಅಚ್ಚರಿಗೆ ಕಾರಣವಾಗಿದ್ದು ಒಂದು ಕಡೆಯಾದರೆ, ಏನಾದರೂ ಸೈಡ್‌ ಎಫೆಕ್ಟ್ ಆಗಬಹುದೆ ಎಂದು ಕುಟುಂಬಸ್ಥರು ಚಿಂತಿತರಾಗಿದ್ದಾರೆ.

ದೀಕ್ಷಾ ಕುಲಕರ್ಣಿ ಹಾಗೂ ವಸ್ತ್ರದ ಅವರ ಸ್ನೇಹಿತರ ಮಗ ಸುಮಂತ ಎಂಬವರು ಮಂಗಳವಾರ ಬೆಳಗ್ಗೆ ಇಂಡಿಪಂಪ್‌ ಬಳಿಯ ಪಿಎಚ್‌ಸಿ ಸೆಂಟರ್‌ನಲ್ಲಿ ಲಸಿಕೆ ಹಾಕಿಸಿಕೊಂಡು ಬಂದಿದ್ದರು. ಮನೆಯಲ್ಲಿ ಸುಮ್ಮನೆ ಕುತೂಹಲಕ್ಕೆ ಬಲ್ಬನ್ನು ತೋಳಿಗೆ ಹಿಡಿದಾಗ ಅದು ಬೆಳಗಿದೆ. ಇದನ್ನು ಕಂಡು ಮೊದಲು ವಿಸ್ಮಯಗೊಂಡಿದ್ದಾರೆ. ಇದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದು, ವೈರಲ್‌ ಆಗಿದೆ. ಬಳಿಕ ಈ ಬಗ್ಗೆ ಕೊಂಚ ಆತಂಕಗೊಂಡ ಮನೆಯವರು ತಕ್ಷಣ ಸಚಿವ ಜಗದೀಶ ಶೆಟ್ಟರ್‌, ಡಿಎಚ್‌ಒ ಡಾ. ಯಶವಂತ ಮದೀನಕರ ಅವರ ಗಮನಕ್ಕೆ ತಂದರು.

ನವಲಗುಂದ: ಕೋವಿಡ್‌ಗೆ ತಂದೆ- ಮಗ ಸಾವು

‘ಕಿಮ್ಸ್‌ನಿಂದ ಡಾ. ಸಂಪತ್‌ಕುಮಾರ ಎಂಬವರು ಮಧ್ಯಾಹ್ನ ಮನೆಗೆ ಬಂದು ನೋಡಿಕೊಂಡು ಹೋಗಿದ್ದಾರೆ. ಅವರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಕುಟುಂಬಸ್ಥರಾದ ನವೀನ್‌ ವಸ್ತ್ರದ ಹೇಳಿದರು. ಬಳಿಕ ಗೋಕುಲ ರಸ್ತೆ ಪೊಲೀಸರು ಕೂಡ ಮನೆಗೆ ಬಂದು ನೋಡಿದ್ದಾರೆ. ಲಸಿಕೆಯಿಂದ ಯಾವುದೆ ಅಡ್ಡ ಪರಿಣಾಮ ಆಗದಿದ್ದರೆ ಅಷ್ಟೇ ಸಾಕು. ತಮಾಷೆಗೆ ವಿಡಿಯೋ ಮಾಡಿದ್ದಲ್ಲ, ಸುಮ್ಮನೆ ನೋಡಿದಾಗ ವಿದ್ಯುತ್‌ ಪ್ರವಹಿಸಿದ್ದು ಕಂಡುಬಂದಿದೆ. ಆದರೆ ಸಂಜೆ ಬಳಿಕ ಪುನಃ ಬಲ್ಬ್‌ ಹಿಡಿದಾಗ ಅದು ಬೆಳಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ವೀರೇಶ ಸಂಗಳದ ಹೇಳಿದರು.
 

Follow Us:
Download App:
  • android
  • ios