ಚಾಮರಾಜನಗರ ದುರಂತಕ್ಕೆ 100 ದಿನ : ಪ್ರತಿಭಾವಂತ ವಿದ್ಯಾರ್ಥಿಯನ್ನು ಕೂಲಿಗೆ ದೂಡಿದ ಕರಾಳತೆ

  • ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಸಂಭವಿಸಿ  ನೂರು ದಿನ 
  • ಕಣ್ಣೀರಲ್ಲೇ ಕೈ ತೊಳೆಯುತ್ತಿವೆ ಅನೇಕ ಕುಟುಂಬಗಳು
  • ಪ್ರತಿಭಾವಂತ ವಿದ್ಯಾರ್ಥಿಯನ್ನು ಕೂಲಿಗೆ ದೂಡಿದ ಕರಾಳ ದುರಂತ
Post Oxygen Tragedy Chamarajnagar Student Compelled To Take Up Coolie Job snr

 ಚಾಮರಾಜನಗರ (ಆ.12): ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಸಂಭವಿಸಿದ ನೂರು ದಿನಗಳು ಕಳೆದಿದೆ. ಮೇ 2 ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಜನ ಮೃತಪಟ್ಟಿದ್ದರು.

ಈ ದುರ್ಘಟನೆಯಾಗಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಇನ್ನೂ ಕೂಡ ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಅನೇಕರು ಜೀವನ ಸಾಗಿಸುವುದೆ ದುಸ್ಥರ ಎನ್ನುವಂತಾದೆ.  

ಈ ಘಟನೆ ಬಳಿಕ ಪ್ರತಿಭಾವಂತ ವಿದ್ಯಾರ್ಥಿಯೋರ್ವ ತಂದೆ ಕಂಡಿದ್ದ ಕನಸು ನನಸು ಮಾಡಲಾಗದೆ ವಿದ್ಯಾಭ್ಯಾಸ ಮೊಟಕುಗೊಳಿಸಿ  ಜೀವನೋಪಾಯಕ್ಕೆ ದಾರಿ ಇಲ್ಲದೆ ಕೂಲಿ ಕೆಲಸಕ್ಕೆ ಹೋಗಲು ನಿರ್ಧಾರ ಮಾಡಿದ್ದಾನೆ. ಈತನ ತಂದೆ ದೊಡ್ಡಯ್ಯ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು. ಮಂಗಲಹೊಸೂರು ಗ್ರಾಮದ ಈತ ಮಗನನ್ನು ಮೆಡಿಕಲ್ ಇಲ್ಲವೇ ಏರೋನಾಟಿಕಲ್ ಇಂಜಿನಿಯರ್ ಮಾಡುವ ಕನಸು ಕಂಡಿದ್ದ.  ಕ್ರಷರ್ ಘಟಕದಲ್ಲಿ ಕೂಲಿ ಕೆಲಸ  ಮಾಡಿಕೊಂಡು ಮಗನನ್ನು ಓದಿಸುವ ಕನಸು ಕಂಡಿದ್ದ. ಅದರೆ ವಿಧಿ ಇದಕ್ಕೆ ಅವಕಾಶ  ನೀಡದೆ  ದೊಡ್ಡಯ್ಯ ಮೃತಪಟ್ಟಿದ್ದ.

ಚಾಮರಾಮನಗರ ಆಕ್ಸಿಜನ್ ದುರಂತ: ಮೃತ ಕುಟುಂಬಗಳಿಗೆ ಕೆಪಿಸಿಸಿ ನೆರವು

 ಈಗ ಶೇ. 94 ಅಂಕಗಳೊಂದಿಗೆ ಅತ್ಯುನ್ನತ ದರ್ಜೆಯಲ್ಲಿ ಪಿಯುಸಿ ಉತ್ತೀರ್ಣನಾಗಿದ್ದ ಮಗ ಶಶಾಂಕ್ ತಂದೆ ಸಾವಿನಿಂದ  ಸಿಇಟಿ, ನೀಟ್ ಪರೀಕ್ಷೆ ತೆಗೆದುಕೊಳ್ಳಲಾಗಲಿಲ್ಲ.  ಓದುವ ವಯಸ್ಸಿನಲ್ಲಿ ಕೂಲಿ ಕೆಲಸ ಮಾಡಿ ಸಂಸಾರದ ರಥ ಎಳೆಯುವ ಅನಿವಾರ್ಯತೆ ಈತನಿಗೆ ಎದುರಾಗಿದೆ. 

ದೊಡ್ಡಯ್ಯ ನಿಧನದಿಂದ  ಕುಟುಂಬ   ಕಂಗಾಲಾಗಿದ್ದು, ಪರಿಹಾರದ ಹಣದಲ್ಲಿ ಸಾಲ ತೀರಿಸಿ ಬರಿಗೈ ಆಗಿದೆ. ನ್ಯಾಯಾಲಯದ ಆದೇಶದಂತೆ ಸರ್ಕಾರ ನೀಡಿದ್ದ 2 ಲಕ್ಷ ರೂ ಪರಿಹಾರವನ್ನು ಸಾಲಕ್ಕೆ ಬಳಸಿಕೊಳ್ಳಲಾಗಿದೆ. 

ಅನ್ಯದಾರಿ ಕಾಣದೆ ಸದ್ಯಕ್ಕೆ ಅಜ್ಜಿ ಮನೆಯಲ್ಲಿ ಆಶ್ರಯ ಪಡೆದಿದ್ದು, ದೊಡ್ಡಯ್ಯ ಅವರ ಮಗಳು ಸ್ನೇಹಲತಾ ಕೂಡ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಆಲೆ  ನೋವಿನಲ್ಲೂ ಪರೀಕ್ಷೆ ಬರೆದು ಇದೀಗ ಎಸ್. ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಶೇ. 89 ಅಂಕ ಪಡೆದಿದ್ದಾಳೆ. ಸದ್ಯ ಈ ಕುಟುಂಬಕ್ಕೆ ದಾನಿಗಳ ನೆರವು ಬೇಕಿದೆ.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Latest Videos
Follow Us:
Download App:
  • android
  • ios