ಸಿಎಂ ಕ್ಷೇತ್ರದಲ್ಲಿಯೇ ಕಳಪೆ ಕಾಮಗಾರಿ: ಗುತ್ತಿಗೆದಾರನ ಮೇಲೆ ಸೋಮಣ್ಣ ಗರಂ

 'ಏನ್ ಮಣ್ಣು ಹಾಕಿದಿಯಾ ನಿನ್ನ ಮುಖ' ಕಳಪೆ ಕಾಮಗಾರಿ ಎಸಗಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ವಸತಿ ಸಚಿವ ವಿ‌.ಸೋಮಣ್ಣ ಇಂದು ಕೆಂಡಾಮಂಡಲರಾದರು. 

Poor work in the CM constituency Somanna scold on the contractor at shiggavi rav

ವರದಿ- ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ

ಹಾವೇರಿ(ನ. 25):  'ಏನ್ ಮಣ್ಣು ಹಾಕಿದಿಯಾ ನಿನ್ನ ಮುಖ' ಕಳಪೆ ಕಾಮಗಾರಿ ಎಸಗಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ವಸತಿ ಸಚಿವ ವಿ‌.ಸೋಮಣ್ಣ ಇಂದು ಕೆಂಡಾಮಂಡಲರಾದರು.  ವಸತಿ ಯೋಜನೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣವಾಗ್ತಿರೋ ಮನೆಗಳ ಪರಿಶೀಲನೆಗೆ ವಿ.ಸೋಮಣ್ಣ ಆಗಮಿಸಿದ್ರು. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಬಂಕಾಪುರ ಪಟ್ಟಣದಲ್ಲಿ ನಿರ್ಮಾಣ ವಾಗ್ತಿರೋ ಮನೆಗಳ ಪರಿಶೀಲನೆ ನಡೆಸಿದರು. 

ಈ ವೇಳೆ ಮನೆಗಳ ನಿರ್ಮಾಣದಲ್ಲಿ ಆಗಿರುವ ಕಳಪೆ ಕೆಲಸ ಹಾಗೂ ರಸ್ತೆಗಳ ಕಾಂಕ್ರೀಟ್ ಕಿತ್ತು ಹೋಗಿದ್ದು ನೋಡಿ ವಿ‌.ಸೋಮಣ್ಣ ಸಿಟ್ಟಾದರು. ಮನೆಗಳ ಪಕ್ಕದ ಚರಂಡಿ ಬಳಿ ಮಣ್ಣು ಹಾಕುವ ವಿಚಾರಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 'ಏನ್ ಮಣ್ಣು ಹಾಕಿದಿಯಾ ನಿನ್ನ ಮುಖ' ಎಂದು ಗದರಿದರು. ಕಟ್ಟಡದ ಬಳಿಯ ನೀರು ಮನೆಯ ಮುಂದೆ ನಿಂತಿರೋದು ನೋಡಿ  ಏನಯ್ಯ ಕೆಲಸ ಮಾಡಿದಿರಾ? ಇದು ಸಿಎಂ ಅವರ ಕ್ಷೇತ್ರ. ಸಿಎಂ ಅವರು ಟೆಕ್ನಿಕಲಿ ಇಂಜನಿಯರ್. ಇದನ್ನೆಲ್ಲಾ ನೋಡಿ ನಾನು ಸುಮ್ಮನಿರಬಹುದು. ಆದರೆ ಸಿಎಂ ನೋಡಿದರೆ ಏನಾಗುತ್ತೆ? ಅಂತ ಗುತ್ತಿಗೆದಾರ ಶ್ರೀನಿವಾಸ್ ಅವರನ್ನು ಪ್ರಶ್ನೆ ಮಾಡಿದರು.ಯೋಜನೆಯಲ್ಲಿ ಕಳಪೆ ಮಾಡಬಾರದು. ನಿನಗೆ ಲಾಸ್ ಆಗುತ್ತೆ ಅಂದರೆ ಬಿಟ್ಟು ಬಿಡು ಎಂದು ಹರಿಹಾಯ್ದರು.

ರೈತರ ವಿದ್ಯುತ್‌ ಬಿಲ್‌ ಬಾಕಿ ಮನ್ನಾ: ಸೋಮಣ್ಣ ಭರವಸೆ

Latest Videos
Follow Us:
Download App:
  • android
  • ios