Asianet Suvarna News Asianet Suvarna News

ಹಾವೇರಿ: ಕಳಪೆ ಮೊಟ್ಟೆಗೆ ಇನ್ನೂ ಬಿದ್ದಿಲ್ಲ ಬ್ರೇಕ್, ಅಂಗನವಾಡಿ ಕಳಪೆ ಮೊಟ್ಟೆ ಹಾವಳಿಗೆ ಜನ ಕಂಗಾಲು..!

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನೂಕಾಪುರ ತಾಂಡಾದ ಅಂಗನವಾಡಿ ಕೇಂದ್ರದಲ್ಲಿ ಮತ್ತೆ ಕಳಪೆ ಮೊಟ್ಟೆ ಕಂಡು ಬಂದಿವೆ. ಅಡುಗೆ ಸಿಬ್ಬಂದಿ ಮೊಟ್ಟೆಯನ್ನು ಬೇಯಿಸಿದಾಗ ಮೊಟ್ಟೆ ಕೆಟ್ಟಿರುವುದು ಗೊತ್ತಾಗಿದೆ.

Poor Egg Supply in Anganwadi at Ranebennuru in Haveri grg
Author
First Published Jul 19, 2023, 9:28 PM IST

ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ(ಜು.19): ಅಂಗನವಾಡಿಗಳಿಗೆ ಕಳಪೆ ಮೊಟ್ಟೆ ಪೂರೈಕೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಹಲವು ಬಾರಿ ವರದಿ ಪ್ರಸಾರ ಮಾಡಿ ಸರ್ಕಾರದ ಗಮನ ಸೆಳೆದಿದೆ. ಅದರೆ ಕಳಪೆ ಮೊಟ್ಟೆ ಹಾವಳಿ ಮಾತ್ರ ನಿಲ್ತಿಲ್ಲ. ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನೂಕಾಪುರ ತಾಂಡಾದ ಅಂಗನವಾಡಿ ಕೇಂದ್ರದಲ್ಲಿ ಮತ್ತೆ ಕಳಪೆ ಮೊಟ್ಟೆ ಕಂಡು ಬಂದಿವೆ. ಅಡುಗೆ ಸಿಬ್ಬಂದಿ ಮೊಟ್ಟೆಯನ್ನು ಬೇಯಿಸಿದಾಗ ಮೊಟ್ಟೆ ಕೆಟ್ಟಿರುವುದು ಗೊತ್ತಾಗಿದೆ.

ನೂಕಾಪುರ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರು, ರೈತರು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಪೌಷ್ಟಿಕತೆ ಹೋಗಲಾಡಿಸಬೇಕಾದ ಕೋಳಿಮೊಟ್ಟೆಗಳು, ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಕುತ್ತು ತರುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಶಾಲಾ ಮಕ್ಕಳಿಗೆ ಕಳಪೆ ಮೊಟ್ಟೆ: ರಾಜ್ಯಾದ್ಯಂತ ತನಿಖೆಗೆ ಆದೇಶ

ಕಳಪೆ ಮೊಟ್ಟೆ ಪೂರೈಕೆ ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸಿಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಇನ್ನೂ ಕಳಪೆ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. 

Follow Us:
Download App:
  • android
  • ios