ಪೂಜಾ ತರಬೇತಿ ಶಾಲೆ ಶೀಘ್ರ ಆರಂಭ: ಕೆ.ಎಸ್‌. ಈಶ್ವರಪ್ಪ

ಕುಷ್ಟಗಿ, ಸಿಗಂದೂರು, ಅಥಣಿ ತಾಲೂಕಿನ ಕವಲೆದುರ್ಗ ಈ ಮೂರು ಪಟ್ಟಣಗಳಲ್ಲಿ ಪೂಜಾರಿಕೆ ಪದ್ಧತಿ ಮತ್ತು ಧಾರ್ಮಿಕ ವಿಚಾರಗಳನ್ನು ತಿಳಿಸಿಕೊಡಲಿದ್ದಾರೆ. ಈ ನಿಟ್ಟಿನಲ್ಲಿ ಸೆಪ್ಟಂಬರ್‌ 17ರಂದು ಹುಬ್ಬಳ್ಳಿಯಲ್ಲಿ ಈ ಮೂರು ಸೆಂಟರ್‌ ವ್ಯಾಪ್ತಿಯಲ್ಲಿ ಬರುವ 120 ಮಂದಿಯೊಂದಿಗೆ ಬೃಹತ್‌ ಕಾರ್ಯಕ್ರಮ ನಡೆಯಲಿದೆ. ವಿನೂತನ ಪಾಠಶಾಲೆ ಕಾರ್ಯಕ್ರಮವನ್ನು ಸೆಪ್ಟಂಬರ್‌ 17ರಂದು ಹುಬ್ಬಳ್ಳಿಯಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಉದ್ಘಾಟಿಸಲಿದ್ದಾರೆ: ಕೆ.ಎಸ್‌. ಈಶ್ವರಪ್ಪ  

Pooja Training School to Start Soon Says KS Eshwarappa grg

ಕುಷ್ಟಗಿ(ಆ.05):  ದೇವಸ್ಥಾನಗಳಲ್ಲಿ ಯಾವ ವಿಧಾನಗಳಲ್ಲಿ ಪೂಜೆ ಮಾಡಬೇಕು ಎಂದು ತಿಳಿದುಕೊಳ್ಳುವ ಉದ್ದೇಶದಿಂದ ತರಬೇತಿ ಶಾಲೆ ಆರಂಭಿಸಲಾಗುತ್ತಿದೆ ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.
ಸುಧರ್ಮ ಸೇವಾ ಟ್ರಸ್ಟ್‌ ಹಾಗೂ ಹಾಲುಮತ ಸಮಾಜದಿಂದ ಮಕ್ಕಳಿಗೆ ಪಾಠಶಾಲೆ ಆರಂಭಿಸುವ ಕುರಿತು ಪಟ್ಟಣದ ಅಂಜನಾದ್ರಿಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ದೇವಸ್ಥಾನಗಳಲ್ಲಿ ಪೂಜಾರಿಕೆ ಮಾಡುವವರು ಪರಿಶುದ್ಧವಾಗಿರಬೇಕು. ಸಿಗರೇಟ್‌ ಸೇದುವುದು, ಬಟ್ಟೆ ಧರಿಸದೇ ಇರುವುದು ಈ ರೀತಿಯಾಗಿ ಹಲವಾರು ವಿಚಾರಗಳು ನಮ್ಮ ಕಣ್ಮುಂದೆ ಬಂದಿದ್ದು, ಪ್ರತಿಯೊಬ್ಬ ಪೂಜಾರಿಗಳು ಒಳ್ಳೆಯ ಸಂಸ್ಕಾರ ಒದಗಿಸಿಕೊಡಬೇಕೆಂಬ ಉದ್ದೇಶದಿಂದಾಗಿ ತರಬೇತಿ ಶಾಲೆ ಆರಂಭಿಸಲಾಗುತ್ತಿದೆ ಎಂದರು.

ಕೊಪ್ಪಳ: ಹುಲಿಗೆಮ್ಮನ ದರ್ಶನ ಪಡೆದು ವಾಪಸ್‌ ಬರೋ ವೇಳೆ ಬೈಕ್‌ಗೆ ಬಸ್‌ ಡಿಕ್ಕಿ, ಇಬ್ಬರು ಭಕ್ತರ ದುರ್ಮರಣ

ಸುಧರ್ಮ ಜಾಗೃತಿ ಸೇವಾ ಟ್ರಸ್ವ್‌ ಬೆಂಗಳೂರು ಹಾಗೂ ಹಾಲುಮತ ಸಮಾಜದಿಂದ ಗುರುವಿನವರು, ಒಡೆಯರು, ಗ್ಯಾನಪ್ಪಯ್ಯನವರು ಹಾಗೂ ಪೂಜಾರಿ ಬಂಧುಗಳಿಗೆ ದೇವಸ್ಥಾನಗಳಲ್ಲಿ ಧರ್ಮ ಸಂಸ್ಕಾರದ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಪೂಜಾ ಪದ್ಧತಿಗಳ ಬಗ್ಗೆ ತಿಳಿಸಿಕೊಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಕ್ಷೇತ್ರಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ದೇವಸ್ಥಾನಗಳಲ್ಲಿ ಪರಿಶುದ್ಧತೆ, ಧಾರ್ಮಿಕತೆ ಮತ್ತು ಸಂಸ್ಕಾರದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ. ಈ ಮೂಲಕ ಸನಾತನ ಧರ್ಮವನ್ನು ಎತ್ತಿ ಹಿಡಿಯುವ ಉದ್ದೇಶವಿದೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಕುಷ್ಟಗಿಯಿಂದ 40, ಸಿಗಂದೂರು ಕ್ಷೇತ್ರದಿಂದ 40, ಕವಲೆದುರ್ಗದಿಂದ 40 ಜನರಂತೆ ಒಟ್ಟು 120 ಜನರಿಗೆ ಆಯಾ ತರಬೇತಿ ಸೆಂಟರ್‌ನಲ್ಲಿ ಪೂಜಾ ವಿಧಾನಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ ಎಂದರು.

ಹಿಂದು-ಮುಸ್ಲಿಂ ಭಾವೈಕ್ಯತೆ ಹಬ್ಬ ಮೊಹರಂಗೆ ತೆರೆ, ಹೊಳೆಗೆ ಹೋದ ಅಲಾಯಿ ದೇವರುಗಳು

ರಾಜ್ಯಪಾಲರಿಂದ ಉದ್ಘಾಟನೆ:

ಕುಷ್ಟಗಿ, ಸಿಗಂದೂರು, ಅಥಣಿ ತಾಲೂಕಿನ ಕವಲೆದುರ್ಗ ಈ ಮೂರು ಪಟ್ಟಣಗಳಲ್ಲಿ ಪೂಜಾರಿಕೆ ಪದ್ಧತಿ ಮತ್ತು ಧಾರ್ಮಿಕ ವಿಚಾರಗಳನ್ನು ತಿಳಿಸಿಕೊಡಲಿದ್ದಾರೆ. ಈ ನಿಟ್ಟಿನಲ್ಲಿ ಸೆಪ್ಟಂಬರ್‌ 17ರಂದು ಹುಬ್ಬಳ್ಳಿಯಲ್ಲಿ ಈ ಮೂರು ಸೆಂಟರ್‌ ವ್ಯಾಪ್ತಿಯಲ್ಲಿ ಬರುವ 120 ಮಂದಿಯೊಂದಿಗೆ ಬೃಹತ್‌ ಕಾರ್ಯಕ್ರಮ ನಡೆಯಲಿದೆ. ವಿನೂತನ ಪಾಠಶಾಲೆ ಕಾರ್ಯಕ್ರಮವನ್ನು ಸೆಪ್ಟಂಬರ್‌ 17ರಂದು ಹುಬ್ಬಳ್ಳಿಯಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಉದ್ಘಾಟಿಸಲಿದ್ದಾರೆ ಎಂದರು.

ಸಭೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್‌ ಮಾತನಾಡಿದರು. ಈ ವೇಳೆ ಮಾಜಿ ಶಾಸಕ ಕೆ.ಶರಣಪ್ಪ, ಫಕೀರಪ್ಪ ಚಳಗೇರಿ, ಬಸವರಾಜ ಹಳ್ಳೂರು, ಮಲ್ಲಣ್ಣ ಪಲ್ಲೇದ, ಮರಸಣ್ಣ ತಾಳದ, ದೇವೇಂದ್ರಪ್ಪ ಬಳೂಟಗಿ, ಪ್ರಭಾಕರ ಚಿಣಿ, ಕೆ.ಮಹೇಶ, ವಿಜಯ್‌ಕುಮಾರ ಹಿರೇಮಠ, ಸಂಗನಗೌಡ, ಮರಸಣ್ಣ ತಾಳದ, ವಿನಯ್‌ಕುಮಾರ ಮೇಲಿನಮನಿ, ಉಮೇಶ್‌ ನಾಯಕ, ಉಮೇಶ್‌ ಯಾದವ್‌, ದೊಡ್ಡಬಸವ ಸುಂಕದ ಇನ್ನಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios