ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಮೂರು ಪಕ್ಷಗಳು ಜಾತಿ ವ್ಯವಸ್ಥೆಯನ್ನು ಅಳಿಸಬೇಕಿದೆ ಎಂದು ರಾಜಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಾಪುರಿ ಸ್ವಾಮಿಗಳು ಆಗ್ರಹಿಸಿದರು.

 ಕನಕಗಿರಿ (ಜ. 06 ): ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಮೂರು ಪಕ್ಷಗಳು ಜಾತಿ ವ್ಯವಸ್ಥೆಯನ್ನು ಅಳಿಸಬೇಕಿದೆ ಎಂದು ರಾಜಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಾಪುರಿ ಸ್ವಾಮಿಗಳು ಆಗ್ರಹಿಸಿದರು.

ಪಟ್ಟಣದ ಎಪಿಎಂಸಿ ಸಮುದಾಯ ಭವನದಲ್ಲಿ ಗುರುವಾರ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ ಹಾಗೂ ಪ.ಜಾ. ಹಾಗೂ ಪ.ಪಂ. ಜನ ಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ದಲಿತರ ಮತ ಪಡೆದು, ಪ್ರಬಲ ಸಮುದಾಯಗಳ ನಾಯಕರು ಮಾತ್ರ ಮುಖ್ಯಮಂತ್ರಿಯಾಗುತ್ತಿದ್ದು, ಹಲವು ವರ್ಷಗಳಿಂದ ದಲಿತರನ್ನು ಮುಖ್ಯಮಂತ್ರಿಯಾಗಲು ಬಿಡದೆ ತುಳಿಯುತ್ತಿದ್ದಾರೆ. ರಾಜ್ಯದಲ್ಲಿ ಜಾತಿ ವ್ಯವಸ್ಥೆ ಅಳಿಯಬೇಕಾದರೆ ದಲಿತರನ್ನೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದರು.

ರಾಜ್ಯದ ವಾಲ್ಮೀಕಿ ಜನಾಂಗಕ್ಕಿರುವ ಇತಿಹಾಸ ಹಾಗೂ ಚರಿತ್ರೆಯನ್ನು ಮೆಲುಕು ಹಾಕುವುದಕ್ಕಾಗಿಯೇ ವಾಲ್ಮೀಕಿ ಜಾತ್ರೆಯನ್ನು ನಡೆಸಲಾಗುತ್ತಿದ್ದು, ಈ ಜಾತ್ರೆಯು ವೈಚಾರಿಕ ಜಾತ್ರೆಯಾಗಿರುತ್ತದೆ. ರಾಜ್ಯದಲ್ಲಿ ಜಾತಿಯೇ ಮುಖ್ಯವಾಗಿದ್ದು, ಜಾತಿಯಿಂದಲೇ ಎಲ್ಲವೂ ನಡೆಯುತ್ತಿದ್ದು, ಜಾತಿಗಳಲ್ಲಿ ಸಾಮರಸ್ಯ ಭಾವ ಮೂಡಬೇಕಾಗಿದೆ. ಮಾಜಿ ಸಿಎಂ ಬಿಎಸ್‌ವೈ ಪರವಾಗಿ ಮಠಾಧೀಶರು ಬೀದಿಗಿಳಿದು ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಸಬಾರದೆಂದು ಹೈಕಮಾಂಡ್‌ಗೆ ಒತ್ತಡ ಹೇರಿದ್ದರು. ಇಂತಹ ಸಂದರ್ಭದಲ್ಲಿ ದಲಿತರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕಿತ್ತು. ಆದರೆ ಜಾತಿಯಲ್ಲಿನ ಭೇದಭಾವದಿಂದಾಗಿ ದಲಿತರನ್ನು ಪ್ರಬಲ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಇನ್ನೂ ಎಸ್‌ಸಿ ಹಾಗೂ ಎಸ್‌ಟಿ ಜನಾಂಗಕ್ಕೆ ಮೀಸಲು ಸರ್ಕಾರಗಳು ವಿಳಂಬ ಧೋರಣೆ ಅನುಸರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ.ಜಾ., ಪ.ಪಂ ವರ್ಗಕ್ಕೆ ಮೀಸಲು ಹೆಚ್ಚಳಕ್ಕೆ ಕಾರಣಿಕರ್ತರಾದ ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಫೆ. 8 ಹಾಗೂ 9ರಂದು ನಡೆಯುವ ಜಾತ್ರೆಯಲ್ಲಿ ಅಭಿನಂದನೆ ಸಲ್ಲಿಸಿ ಗೌರವಿಸಲಾಗುವುದು. ಅಲ್ಲದೇ ರಾಜ್ಯದಲ್ಲಿ ನಾನಾ ಜಾತಿಗಳು ಎಸ್‌ಟಿಗೆ ಸೇರಿಸಲು ಒತ್ತಾಯಿಸುತ್ತಿದ್ದು, ಸಂವಿಧಾನಬದ್ಧವಾಗಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಎಸ್‌ಟಿಗೆ ಸೇರಿಸಿದರೆ ಯಾವುದೇ ಅಭ್ಯಂತರವಿಲ್ಲ. ಕ.ಕ. ಭಾಗದಲ್ಲಿ ತಳವಾರ ಹಾಗೂ ಪರಿವಾರದ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಪಡೆಯುತ್ತಿದ್ದು, ಈ ಬಗ್ಗೆ ಸರ್ಕಾರ ಎಚ್ಚರವಹಿಸಬೇಕಿದೆ ಎಂದರು.

ಶಾಸಕ ಬಸವರಾಜ ದಢೇಸೂಗುರು ಮಾತನಾಡಿ, ಪ್ರಸನ್ನಾನಂದಾಪುರಿ ಶ್ರೀಗಳು 252 ದಿನಗಳ ಕಾಲ ಚಳಿ, ಮಳೆ, ಗಾಳಿ ಎನ್ನದೆ ನಡೆಸಿದ ಹೋರಾಟದ ಫಲವಾಗಿ ಸರ್ಕಾರ 151 ಸಮುದಾಯಗಳಿಗೆ ನ್ಯಾಯ ದೊರಕಿದೆ. ಮೀಸಲಾತಿ ಜಾರಿಗೆ ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಶೀಘ್ರವೇ ಅವು ಬಗೆಹರಿದು ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ನ್ಯಾಯ ದೊರಕಲಿದೆ ಎಂದರು.

ಎಸ್‌ಸಿ, ಎಸ್‌ಟಿ ತಾಲೂಕು ಕ್ರಿಯಾ ಸಮಿತಿ ಅಧ್ಯಕ್ಷ ಸಣ್ಣ ಕನಕಪ್ಪ, ಬೆಟ್ಟಪ್ಪ ಜೀರಾಳ, ರಾಮನಗೌಡ ಬುನ್ನಟ್ಟಿ, ವೆಂಕಟೇಶ ಗೋಡಿನಾಳ, ನಿಂಗಪ್ಪ ನವಲಿ, ಮುದಿಯಪ್ಪ ಮಲ್ಲಿಗೆವಾಡ, ನಾಗರಾಜ ತೆಗ್ಯಾಳ, ರಂಗಪ್ಪ ಕೊರಗಟಗಿ, ಸಿದ್ದೇಶ ಹಿರೆಖೇಡ, ಶೇಷಪ್ಪ ಪೂಜಾರ, ನಾಗೇಶಪ್ಪ ವಾಲ್ಮೀಕಿ, ನಾಗೇಂದ್ರ ನಾಯಕ, ಶರಣಪ್ಪ ಸೋಮಸಾಗರ ಇತರರಿದ್ದರು.

ಕಾಂಗ್ರೆಸ್‌ಗೆ ಮಾತ್ರ ಸಾಧ್ಯ

ರಾಮನಗರ (ಡಿ.04): ಮಹಾ​ರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ ದಲಿ​ತ ನಾಯ​ಕ​ರನ್ನು ಮುಖ್ಯ​ಮಂತ್ರಿಯನ್ನಾಗಿ ಮಾಡಿತು. ಕರ್ನಾ​ಟ​ಕ​ದ​ಲ್ಲಿ ದಲಿ​ತ​ರೊ​ಬ್ಬ​ರಿಗೆ ಮುಂದೊಂದು ದಿನ ಮುಖ್ಯಮಂತ್ರಿ ಅವ​ಕಾಶ ಕಲ್ಪಿ​ಸುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಸಂಸದ ಡಿ.ಕೆ.​ಸು​ರೇಶ್‌ ಪ್ರತಿ​ಪಾ​ದಿ​ಸಿ​ದರು. ನಗ​ರದ ಜಿಲ್ಲಾ ಕಾಂಗ್ರೆಸ್‌ ಕಚೇ​ರಿ​ಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪರಿ​ಶಿಷ್ಟಜಾತಿ ವಿಭಾ​ಗದ ಜಿಲ್ಲಾ ಪದಾ​ಧಿ​ಕಾ​ರಿ​ಗಳು ಮತ್ತು ಬ್ಲಾಕ್‌ ಅಧ್ಯ​ಕ್ಷ​ರಿಗೆ ಪದವಿ ಪ್ರಮಾಣ ಪತ್ರ ವಿತ​ರಣಾ ಸಮಾ​ರಂಭ​ ಉದ್ಘಾ​ಟಿ​ಸಿ ಮಾತ​ನಾ​ಡಿ​ದ ಅವರು, ಮಹಾರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್‌ ಮಾಡಿತು. 

ಆನಂತರ ಆ ರಾಜ್ಯಗಳಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಕಾಂಗ್ರೆಸ್‌ ಗೆ ಅಧಿಕಾರ ಮುಖ್ಯವಲ್ಲ, ಶೋಷಿತ ವರ್ಗಗಳಿಗೆ ರಾಜಕೀಯ ಅವಕಾಶ ಕಲ್ಪಿಸಿಕೊಡುವುದೇ ಮುಖ್ಯ. ರಾಜ್ಯದಲ್ಲಿಯೂ ಮುಂದೊಂದು ದಿನ ದಲಿತರೊಬ್ಬರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಕಲ್ಪಿಸಲು ಕಾಂಗ್ರೆಸ್‌ ನಿಂದ ಮಾತ್ರ ಸಾಧ್ಯ ಎಂದರು. ಕಾಂಗ್ರೆಸ್‌ ಪಕ್ಷ ತನ್ನ ಆಡ​ಳಿ​ತದ ಅವ​ಧಿ​ಯಲ್ಲಿ ಪ್ರಜಾ​ಪ್ರ​ಭುತ್ವ ಗಟ್ಟಿ​ಗೊ​ಳಿ​ಸುವುದರ ಜತೆಗೆ ಜಾತ್ಯ​ತೀತ ಕಾರ್ಯ​ಕ್ರ​ಮ​ಗ​ಳನ್ನು ನೀಡಿತು. ಅಧಿ​ಕಾರ ವಿಕೇಂದ್ರೀ​ಕ​ರಣ ಮಾಡಿತು. ಪ್ರತಿ​ಯೊಂದು ನಿರ್ಣಯಗಳು, ನಿಲುವುಗಳು ಶೋಷಿತರು ಮತ್ತು ಬಡವರ ಪರವಾಗಿದ್ದವು.

ನಾವು ಜಾತಿ, ಧರ್ಮಕ್ಕೆ ಸೀಮಿತವಲ್ಲ: ನಿಖಿಲ್‌ ಕುಮಾರಸ್ವಾಮಿ

ಆದರೆ, ಇಂದು ಬಿಜೆ​ಪಿ​ಯೊಂದಿಗೆ ಕೈ ಜೋಡಿ​ಸಿ​ರುವ ಬಂಡವಾಳ ಶಾಹಿಗಳು ಬಂಡ​ವಾಳ ಹೂಡಿ ಕಾಂಗ್ರೆಸ್‌ ಅನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದೆ. ಭಾವಾನಾತ್ಮಕವಾಗಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡು​ತ್ತಿದೆ ಎಂದು ಕಿಡಿ​ಕಾ​ರಿ​ದ​ರು. ಕಾಂಗ್ರೆಸ್‌ ನ ಉಳಿ​ವಿ​ಗಾಗಿ ಬೆಂಬಲ ಬೇಕಿಲ್ಲ. ಪ್ರಜಾ​ಪ್ರ​ಭುತ್ವ ಉಳಿ​ಸಲು ಹೋರಾಟ ಮಾಡ​ಬೇ​ಕಿದೆ. ಅದು ಕಾಂಗ್ರೆಸ್‌ ಪಕ್ಷ​ದಿಂದ ಮಾತ್ರ ಸಾಧ್ಯ. ಪ್ರಜಾಪ್ರಭುತ್ವದ ರಕ್ಷಣೆ, ಉತ್ತಮ ಆಡಳಿತ , ಬಲಿಷ್ಠರ ಕೈಗೆ ಎಲ್ಲಾ ವ್ಯವಸ್ಥೆಗಳು ಸಿಗದಿರಲು, ಜಾತ್ಯಾತೀತ ತತ್ವಗಳ ಪ್ರತಿಪಾದನೆ ಹಾಗೂ ಸಮಾಜದಲ್ಲಿ ಸಮಾನತೆ ಕಾಣಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷ​ವನ್ನು ಸಂಘ​ಟಿ​ಸು​ವಂತೆ ಕರೆ ನೀಡಿ​ದರು