ದಾವಣಗೆರೆ (ಫೆ.17): ದಾವಣಗೆರೆಯ ಮಹಾ ನಗರ ಪಾಲಿಕೆಯ ಮೇಯರ್‌ ಚುನಾವಣೆ ಮಾತ್ರ ಈ ಬಾರಿ ಟಿ-20 ಕ್ರಿಕೆಟ್‌ ಪಂದ್ಯದಂತಾದರೂ ಅಚ್ಚರಿ ಇಲ್ಲ. ಸದ್ಯದ ಮಟ್ಟಿಗೆ ಚುನಾವಣೆ ಬಗ್ಗೆ ಆಸಕ್ತಿ ಇಲ್ಲದಂತೆ ಮೇಲ್ನೋಟಕ್ಕೆ ಕಾಂಗ್ರೆಸ್‌ ತೋರಿಸಿಕೊಂಡರೂ ಒಳಗೊಳಗೆ ಎಲ್ಲಾ ತಂತ್ರಗಳನ್ನೂ ಹೆಣೆದಿದೆ. 

ಕಳೆದ ಸಲ ಮೇಯರ್‌ ಪಟ್ಟತಪ್ಪಲು ಬಿಜೆಪಿ ತಂತ್ರಗಾರಿಕೆ ಕಾರಣವಾಗಿತ್ತು. ಈಗ ಅದೇ ತಂತ್ರವನ್ನು ಬಿಜೆಪಿ ಮೇಲೆ ತಿರುಮಂತ್ರವಾಗಿ ಪ್ರಯೋಗಿಸಲು ಕಾಂಗ್ರೆಸ್‌ ಸಜ್ಜಾಗಿದೆ. ಕಳೆದ ಬಾರಿ ಕಾಂಗ್ರೆಸ್ಸಿನ ಕೆಲ ಸದಸ್ಯರು ಮೇಯರ್‌ ಚುನಾವಣೆ ವೇಳೆ ಗೈರಾಗಿದ್ದರು. ಅದೇ ಆಟವನ್ನು ಈ ಬಾರಿ ಕಾಂಗ್ರೆಸ್‌ ಆಡಿಸಿದರೂ ಅಚ್ಚರಿ ಇಲ್ಲ. 

ಮೀಸಲಾತಿ ಹೋರಾಟಕ್ಕೆ ಸಾಥ್ ಕೊಟ್ಟ ಬಿಜೆಪಿ ಶಾಸಕರು, ಸಚಿವರಿಗೆ ಸಂಕಷ್ಟ ಎದುರಾಗುತ್ತಾ? .

ಚುನಾವಣೆ ದಿನದಂದು ಮೇಯರ ಸ್ಥಾನದ ಆಕಾಂಕ್ಷಿ ಇದ್ದವರಿಗೆ, ಅತೃಪ್ತ ಪಕ್ಷೇತರರಿಗೆ, ಆಮಿಷಕ್ಕೆ ಒಳಗಾಗುವ ಮನಸ್ಥಿತಿಯ ಪಕ್ಷೇತರರಿಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆ. 

ಗೈರು ಹಾಜರಾಗುವುದು, ತಟಸ್ಥವಾಗಿರುವುದು ಹೀಗೆ ಆಡಳಿತ ಮತ್ತು ವಿಪಕ್ಷಗಳು ಅಧಿಕಾರದ ಗದ್ದುಗೆಯೇರಲು ತಂತ್ರ ಪ್ರತಿತಂತ್ರ ಹೆಣೆದಿವೆ. ವಿಪ್‌ ಉಲ್ಲಂಘನೆ ಆಗಬಾರದು, ನಾಯಕರಿಗೆ ಬಿಸಿ ಸಹ ಮುಟ್ಟಿಸಬೇಕು, ತಮಗೆ ಅವಕಾಶ ನೀಡದಿದ್ದರೆ ಏನಾಗುತ್ತದೆಂಬುದನ್ನೂ ತೋರಿಸಬೇಕು ಹೀಗೆ ನಾನಾ ರೀತಿ ಸುಳಿ, ಒಳ ಸುಳಿಗಳ ಮಾತು ಕೇಳಿ ಬರುತ್ತಿವೆ.