Asianet Suvarna News Asianet Suvarna News

ಅಧಿಕಾರಕ್ಕಾಗಿ ಮೈತ್ರಿಗೆ ಮುಂದಾದ ಕಾಂಗ್ರೆಸ್ : ಬಿಜೆಪಿಯೂ ಮಾಸ್ಟರ್ ಪ್ಲಾನ್

ರಾಜಕೀಯ ಪಕ್ಷಗಳು ಅಧಿಕಾರ ಪಡೆಯುವ ಸಲುವಾಗಿ ವಿವಿಧ ಕಸರತ್ತು ನಡೆಸುತ್ತಿವೆ. ಎಲ್ಲಾ ಪಕ್ಷಗಳಲ್ಲಿಯೂ ರಾಜಕೀಯ ಚಟುವಟಿಕೆ ಗರಿದೆಗರಿದೆ

Political Parties plan For Take Power in Kollegala municipality snr
Author
Bengaluru, First Published Oct 11, 2020, 11:54 AM IST
  • Facebook
  • Twitter
  • Whatsapp

ವರದಿ : ಎನ್‌. ನಾಗೇಂದ್ರ ಸ್ವಾಮಿ

 ಕೊಳ್ಳೇಗಾಲ (ಅ.11):  ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ ಯಾವುದೇ ಬಹುಮತವಿಲ್ಲದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿಯಲ್ಲಿನ ಗೊಂದಲದಿಂದಾಗಿ ನಗರಸಭೆಯಲ್ಲಿ ಗೆದ್ದ ಸದಸ್ಯರು ಅಧಿಕಾರಕ್ಕೆರಲು 1ವರ್ಷಕ್ಕಿಂತ ಹೆಚ್ಚು ಕಾಲ ಕಾದಿದ್ದು, ಈಗ ಎಲ್ಲವೂ ಬಗೆಹರಿದಿದೆ. ಸರ್ಕಾರ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಎಸ್‌ಟಿ ಮಹಿಳೆಗೆ ಮೀಸಲಾಗಿರುವ ಕಾರಣ ಆಕಾಂಕ್ಷಿಗಳಲ್ಲಿ ಹಾಗೂ ವಿವಿಧ ಪಕ್ಷಗಳಲ್ಲಿ ರಾಜಕೀಯ ಮುಖಂಡರಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಕೊಳ್ಳೇಗಾಲ ನಗರಸಭೆಯ 31ವಾರ್ಡ್‌ಗಳ ಪೈಕಿ 11ರಲ್ಲಿ ಕಾಂಗ್ರೆಸ್‌, 4 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು, 9ಸ್ಥಾನದಲ್ಲಿ ಬಿಎಸ್‌ಪಿ ಹಾಗೂ 7ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಎಸ್‌ಪಿ ಶಾಸಕ ಮಹೇಶ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಕಾರಣ 9ಬಿಎಸ್‌ಪಿ ಸದಸ್ಯರ ಪೈಕಿ 7ಮಂದಿ ಶಾಸಕ ಮಹೇಶ್‌ ಜೊತೆ ಹಾಗೂ ಇಬ್ಬರು ಬಿಎಸ್ಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಶಾಸಕ ಮಹೇಶ್‌ ಅವರು ತಮ್ಮ ಜೊತೆಗಿರುವ 7 ಹಾಗೂ ಬಿಜೆಪಿಯ 7ಸದಸ್ಯರು, ಹಾಗೂ ಪಕ್ಷೇತರರೊಬ್ಬರ ಸಹಕಾರ ಪಡೆದು ಸಂಸದರ ಹಾಗೂ ಶಾಸಕರ ಮತ ಸೇರಿ ನಾವೇ ಅಧಿಕಾರ ಹಿಡಿಯುವ ವಿಶ್ವಾಸ ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಜೊತೆ ಕೈ ಜೋಡಿಸಲು ಸಜ್ಜಾದ ಬಿಜೆಪಿ : ಅಚ್ಚರಿ ಹೇಳಿಕೆ? ...

ಆದರೆ ಕಾಂಗ್ರೆಸ್‌ ಪಕ್ಷ ಈಗಾಗಲೇ 4ಪಕ್ಷೇತರರು, 11ಮಂದಿ ಕಾಂಗ್ರೆಸ್‌ ಸದಸ್ಯರು ಹಾಗೂ ಇಬ್ಬರು ಬಿಎಸ್‌ಪಿ ಸದಸ್ಯರ ಮತ ಸೇರಿ ತಾವೇ ಅಧಿಕಾರಕ್ಕೇರುವ ಅಭಿಲಾಷೆ ಹಾಗೂ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೇಲ್ನೋಟಕ್ಕೆ ಕೈ ಪಾಳೆಯ ಅಧಿಕಾರಕ್ಕೆರುವ ಎಲ್ಲ ಸಾಧ್ಯತೆಗಳಿದ್ದರೂ ಬಿಜೆಪಿ ಹಾಗೂ ಶಾಸಕರ ನಡೆಯನ್ನೂ ಸಹಾ ಅಲ್ಲಗೆಳೆಯುವಂತಿಲ್ಲ, ಏತನ್ಮಧ್ಯೆ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವ ನಾಲ್ಕು ಪಕ್ಷೇತರರ ಪೈಕಿ ಸತ್ಯನಾರಾಯಣ ಗುಪ್ತ ಎಂಬುವರು ಕೈಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಮುಂದಾಗುವ ಬೆಳವಣಿಗೆ ಕಾದು ನೋಡಬೇಕಿದೆ

ಅಧಿಕಾರಕ್ಕಾಗಿ ಹಾಲಿ, ಮಾಜಿಗಳ ಸಮಾಗಮ, ಚರ್ಚೆಗೆ ಗ್ರಾಸ:

ಕೊಳ್ಳೇಗಾಲ ಶಾಸಕ ಮಹೇಶ್‌ ಅವರು ಈಗಾಗಲೇ ಬಿಎಸ್‌ಪಿಯಿಂದ ಉಚ್ಚಾಟಿತಗೊಂಡಿರುವ ಕಾರಣ ತಮ್ಮ ರಾಜಕೀಯ ಬೆಳವಣಿಗೆ ಹಾಗೂ ಇನ್ನಿತರೆ ಕಾರಣಗಳಿಗಾಗಿ ಅನ್ಯ ಪಕ್ಷ ಅವಲಂಬಿಸಬೇಕಿದ್ದು ಈಗಾಗಲೇ ಬಿಜೆಪಿ ಜೊತೆ ಸಖ್ಯಹೊಂದಿರುವ ವಿಚಾರ ಗುಟ್ಟಾಗೇನು ಉಳಿದಿಲ್ಲ. ಏತನ್ಮದ್ಯೆ ಶಾಸಕರೇ ನಾನು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು ಎಂಬ ಸೂಚನೆ ಸಹಾ ನೀಡಿದ್ದಾರೆ. ಖುದ್ದು ಶಾಸಕರೇ ಈಗ ಬಿಜೆಪಿ ಜೊತೆ ಸೇರಿ ಅಧಿಕಾರ ಹಿಡಿಯುವ ವಿಶ್ವಾಸ ಸಹಾ ವ್ಯಕ್ತಪಡಿಸಿದ್ದು ಇದಕ್ಕೆ ಮಾಜಿ ಶಾಸಕ ಜಿ ಎನ್‌ ನಂಜುಂಡಸ್ವಾಮಿ ಯಾವ ರೀತಿ ಒಲವು ತೋರುತ್ತಾರೆ ಎಂಬುದರ ಕುರಿತು ಸಹಾ ನಾನಾ ರೀತಿಯ ಚರ್ಚೆ ಏರ್ಪಟ್ಟಿದೆ. ಈಗಾಗಲೇ ಶಾಸಕ ಮಹೇಶ್‌ ಅವರ ಬಗ್ಗೆ ಮೆಧು ದೋರಣೆ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಏತನ್ಮದ್ಯೆ ಮುಂದಿನ ಚುನಾವಣೆಯಲ್ಲಿ ಅವರಿಗೆ ಪಕ್ಷ ಒಲವು ತೋರಿದರೆ ನನ್ನ ಗತಿ ಏನು ಎಂಬ ಕುರಿತು ಸಹಾ ನಂಜುಂಡಸ್ವಾಮಿಯವರ ಆಪ್ತರಲ್ಲಿ ಚರ್ಚೆಗಳು ಈಗಾಗಲೇ ಪ್ರಾರಂಭವಾಗಿವೆ. ಹಾಗಾಗಿ ಇಲ್ಲಿ ಬಿಜೆಪಿ ಹಾಗೂ ಶಾಸಕರ ಬೆಂಬಲಿಗರು ನಗರಸಭೆ ಅಧಿಕಾರಕ್ಕೆರಬೇಕಾದರೆ ಶಾಸಕ ಮಹೇಶ್‌ ಹಾಗೂ

ಜಿ .ಎನ್‌. ನಂಜುಂಡಸ್ವಾಮಿ ಸಹಾ ಮಾತುಕತೆ ನಡೆಸಬೇಕಿದೆ ( ಸಖ್ಯ ಬೆಳಸಬೇಕಿದೆ) ಹಾಗಾಗಿ ಶಾಸಕ ಮಹೇಶ್‌ ಅವರು ಅಂದುಕೊಂಡಂತೆ ನಡೆದರೆ ಮಾಜಿ ಶಾಸಕ ಹಾಗೂ ಹಾಲಿ ಶಾಸಕರ ಸಮಾಗಮವಾಗುವುದರಲ್ಲಿ ಸಂದೇಹವಿಲ್ಲ ಎನ್ನಲಾಗುತ್ತಿದೆ .
 
ಕೈ ಪಾಳೆಯದಲ್ಲೂ ಕಸರತ್ತು

ಶತಾಯ ಗತಾಯ ನಗರಸಭೆ ಅಧಿಕಾರಕ್ಕೆರಲು ಕೈಪಾಳೇಯ ಸಹಾ ನಾನಾ ರೀತಿಯ ಕಸರತ್ತು ಪ್ರಾರಂಭಿಸಿದ್ದು ಈಗಗಾಲೇ 2ಸಭೆಗಳನ್ನು ನಡೆಸಿದೆ. ಮಾಜಿ ಸಂಸದ ಆರ್‌ ಧ್ರುವನಾರಾಯಣ, ಮಾಜಿ ಶಾಸಕರುಗಳಾದ ಜಯಣ್ಣ, ಕೃಷ್ಣಮೂರ್ತಿ ಹಾಗೂ ಎಸ್‌ ಬಾಲರಾಜು ಅವರಿಗೂ ಸಹಾ ಅಧಿಕಾರದ ಚುಕ್ಕಾಣಿ ಹಿಡಿಯುವುದು ಪ್ರತಿಷ್ಠೆಯೆ ಆಗಿದೆ. ಆಡಳಿತರೂಡ ಸರ್ಕಾರಕ್ಕೆ ಮುಖಭಂಗವಾಗಿರುವ ಉದ್ದೇಶದಿಂದಾಗಿ ಹೇಗಾದರೂ ಸರಿ ಅಧಿಕಾರಕ್ಕೆರಲು ಕೈ ನಾಯಕರು ತಂತ್ರಗಾರಿಕೆ ಪ್ರಾರಂಭಿಸಿರುವುದು ಸಹಾ ಗುಟ್ಟಾಗೇನು ಉಳಿದಿಲ್ಲ

"

Follow Us:
Download App:
  • android
  • ios