ಕ್ವಾರೆಂಟೈನ್ ಸೀಲ್ ಇರೋ ಪೊಲೀಸರು ಕರ್ತವ್ಯಕ್ಕೆ ನಿಯೋಜನೆ
ಸರ್ಕಾರದ ಆದೇಶದ ಪ್ರಕಾರ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಅಗತ್ಯ, ತುರ್ತು ಕೆಲಸಗಳಿಗೆ ಜನರು ಓಡಾಡಲು ಅವಕಾಶ ನೀಡಿದ್ದರೂ ಕ್ವಾರಂಟೈನ್ ಸೀಲ್ ಇರುವ ಪೊಲೀಸರನ್ನು ಕಂಡು ಸಾರ್ವಜನಿಕರು ಮಾರು ದೂರ ಓಡುವಂತಾಗಿದೆ.
ಕಾರವಾರ(ಮೇ 20): ಸರ್ಕಾರದ ಆದೇಶದ ಪ್ರಕಾರ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಅಗತ್ಯ, ತುರ್ತು ಕೆಲಸಗಳಿಗೆ ಜನರು ಓಡಾಡಲು ಅವಕಾಶ ನೀಡಿದ್ದರೂ ಕ್ವಾರಂಟೈನ್ ಸೀಲ್ ಇರುವ ಪೊಲೀಸರನ್ನು ಕಂಡು ಸಾರ್ವಜನಿಕರು ಮಾರು ದೂರ ಓಡುವಂತಾಗಿದೆ.
ಭಟ್ಕಳ ತಾಲೂಕಿನ ವಿವಿಧ ಕಡೆ ಕರ್ತವ್ಯ ನಿರ್ವಹಿಸಿ ವಾಪಸ್ ಬಂದ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ವೈದ್ಯರು ಹೋಮ್ ಕ್ವಾರಂಟೈನ್ ಸೀಲ್ ಹಾಕಿದ್ದಾರೆ. ಮನೆಯಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ. ಆದರೆ, ಹಿರಿಯ ಅಧಿಕಾರಿಗಳು ಕಾರವಾರ ಒಳಗೊಂಡು ವಿವಿಧ ಕಡೆ ಕರ್ತವ್ಯಕ್ಕೆ ಇವರನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಭಯಪಡುವಂತಾಗಿದೆ.
ಯಲ್ಲಾಪುರ ಯುವತಿಗೆ ಕೊರೋನಾ ಪಾಸಿಟಿವ್
14 ದಿನಗಳ ಹೋಂ ಕ್ವಾರಂಟೈನ್ ಇರಬೇಕಿದ್ದ ಸಿಬ್ಬಂದಿ ಹೊರಗಡೆ ಕರ್ತವ್ಯ ಮಾಡುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಸೀಲ್ ಹಾಕಿಸಿಕೊಂಡ ಸಿಬ್ಬಂದಿ ಅಕ್ಕಪಕ್ಕದ ನಿವಾಸಿಗಳು ಕ್ವಾರಂಟೈನ್ ಸೀಲ್ ಇದ್ದರೂ ಏಕೆ ಹೊರಗಡೆ ಓಡಾಡುತ್ತೀರಿ ಎಂದು ಹೇಳುತ್ತಿದ್ದಾರೆ.
ಕೈಗೆ ಸೀಲ್ ಹಾಕಿಸಿಕೊಂಡು ಸಾರ್ವಜನಿಕವಾಗಿ ಓಡಾಡುವವರನ್ನು ಎಚ್ಚರಿಸುತ್ತಿದ್ದ ಪೊಲೀಸರಿಗೆ ತಮ್ಮ ಕೈಯಲ್ಲಿ ಸೀಲ್ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಲು ಮುಜುಗರವಾಗುತ್ತಿದೆ. ಜನರು ಸೀಲ್ ಬಗ್ಗೆ ಪ್ರಶ್ನಿಸಿದರೆ ಉತ್ತರ ನೀಡಲಾಗದೇ ತಬ್ಬಿಬ್ಬಾಗುತ್ತಿದ್ದಾರೆ.
ವೈದ್ಯ ವಿದ್ಯಾರ್ಥಿಗಳ ಫೆಲೋಶಿಪ್ ಹೆಚ್ಚಳ
ಕರ್ತವ್ಯಕ್ಕೆ ಬಂದವರು ಭಟ್ಕಳ ತಾಲೂಕಿನ ಕಂಟೆನ್ಮೆಂಟ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿಲ್ಲ. ಸೀಲ್ ಹಾಕಿದ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.