ಗದಗ [ಸೆ.10] : ಸದ್ಯ ದೇಶದಲ್ಲಿ ಎಲ್ಲೆಡೆ ಟ್ರಾಫಿಕ್ ರೀಲ್ಸ್ ದಂಡದ್ದೇ ಸುದ್ದಿ. ವಾಹನ ಸವಾರರ ಎದೆಯಲ್ಲಿ ಟ್ರಾಫಿಕ್ ದಂಡದ ಮೊತ್ತ ನಡುಕ ಹುಟ್ಟಿಸುತ್ತಿದೆ. 

ಆದರೆ ಗದಗದಲ್ಲಿ ಪೊಲೀಸರೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವ ಸುದ್ದಿ ಈಗ ಸಖತ್ ವೈರಲ್ ಆಗಿದೆ. ಇಲ್ಲಿ ಭೂರೆಡ್ಡಿ ವೃತ್ತದಲ್ಲಿ ಪೊಲೀಸರು ತ್ರಿಬಲ್ ರೈಡಿಂಗ್ ಹೋಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 
 
ಟ್ರಾಫಿಕ್ ರೂಲ್ಸ್  ಬ್ರೇಕ್ ಮಾಡಿದ ಪೊಲೀಸ್ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು, ಜನರಿಗೆ ಒಂದು ನಿಯಮ, ಪೊಲೀಸರಿಗೆ ಒಂದು ನಿಯಮವೇ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಇವರು ನಿಯಮ ಮುರಿದರೆ ದಂಡ ಹಾಕುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.