ಕೋಲಾರ (ಏ.25) : ಕೋಲಾರದಲ್ಲಿ ಪೊಲೀಸ್ ಆಗಬೇಕಿರುವ ಟ್ರೈನಿ ಯುವಕರು ಕೊರೋನಾ  ರೂಲ್ಸ್ ಬ್ರೇಕ್ ಮಾಡಿರುವ ಘಟನೆ  ನಡೆದಿದೆ.  

ಕೊರೋನಾ ವೀಕೆಂಡ್ ಕರ್ಫ್ಯೂ ಇದ್ದರೂ ಡೋಂಟ್ ಕೇರ್ ಎಂದಿರುವ ಪೊಲೀಸ್ ಟ್ರೈನಿಗಳು ನಗರದ ಕವಾಯತು ಮೈದಾನದಲ್ಲಿಂದು ಕ್ರಿಕೆಟ್ ಆಡುತ್ತಾ ಎಂಜಾಯ್ ಮಾಡಿದ್ದಾರೆ. 

ಪೊಲೀಸ್ ಟ್ರೈನಿಂಗ್ ನಲ್ಲಿರುವ ಯುವಕರು ಕ್ರಿಕೆಟ್ ಆಯೋಜನೆ ಮಾಡಿ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವಿಲ್ಲದೆ ರೂಲ್ಸ್ ಬ್ರೇಕ್ ಮಾಡಿದ್ದಾರೆ. 

ಹಿರಿಯೂರು: ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ, ನಾಲ್ವರ ಬಂಧನ .

ಎಸ್ಪಿ ಮನೆಯ ಎದರುಗಡೆಯಲ್ಲೇ  50 ಕ್ಕೂ ಹೆಚ್ಚು ಟ್ರೈನಿಗಳು ಮೈದಾನದಲ್ಲಿ ಸೇರಿ ಕ್ರಿಕೆಟ್ ಆಡಿದ್ದಾರೆ. ಜನಸಾಮಾನ್ಯರ ಅನವಶ್ಯಕ ಓಡಾಟಕ್ಕೆ ಫೈನ್ ಹಾಕುತ್ತಿದ್ದರೆ ಇತ್ತ ನಾಳೆ ದಿನ ಪೊಲೀಸ್ ಆಗಿ ಕಾನೂನು ಕಾಯಬೇಕಿದ್ದವರೆ ರೂಲ್ಸ್ ಬ್ರೇಕ್ ಮಾಡಿದ್ದು, ಬೇಲಿಯೇ ಎದ್ದು ಹೊಲ ಮೇದಂತಾಗಿದೆ. 

ಮಾಧ್ಯಮದವರನ್ನು ಕಂಡ ಬಳಿಕ ಇಲ್ಲಿ ಆಡಲು ಸೇರಿದ್ದ ಪೊಲೀಸ್ ಟ್ರೈನಿ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.  ಜನಸಾಮಾನ್ಯರಿಗೊಂದು ಕಾನೂನು, ಪೊಲೀಸರಿಗೆ ಇನ್ನೊಂದು ಕಾನೂನಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.