ಚಿತ್ರವಿಚಿತ್ರ ಯುವಕರ ಗಡ್ಡಕ್ಕೆ ಪೊಲೀಸರ ಕತ್ತರಿ!

police teach youths how to be disciplined in Kolar
Highlights

ಕೋಲಾರ ಜಿಲ್ಲೆಯಲ್ಲಿ ನಡೆದ ಬಾಲಕಿ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತು ಕೊಂಡ ಮಾಲೂರು ಪೊಲೀಸರು ಠಾಣಾ ವ್ಯಾಪ್ತಿಯಲ್ಲಿದ್ದ ಪುಂಡ ಯುವಕರಿಗೆ ಶಿಸ್ತಿನ ಪಾಠ ಕಲಿಸಲು ಮುಂದಾಗಿದ್ದಾರೆ. ಚಿತ್ರ ವಿಚಿತ್ರ ಗಡ್ಡ ಬಿಟ್ಟವರನ್ನು ಕರೆಯಿಸಿದ ಪೊಲೀಸರು, ಶೇವ್ ಮಾಡಿಕೊಳ್ಳಲೂ ಹೇಳಿದ್ದಾರೆ.

 

 

 

 

 

ಕೋಲಾರ: ಚಿತ್ರ ವಿಚಿತ್ರ ಗಡ್ಡ ಬಿಟ್ಟು, ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತಿದ್ದ ಯುವಕರ ಗಡ್ಡವನ್ನು ಪೊಲೀಸರೇ ಕಟ್ ಮಾಡಿಸಿದ್ದಾರೆ!

ಹೌದು. ಮಾಲೂರು ಪೊಲೀಸರು ಯುವಕರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಪೊಲೀಸರೆ ಯುವಕರಿಗೆ ಹಣ ನೀಡಿ, ಹೇರ್ ಕಟ್, ಶೇವ್ ಮಾಡಿಸಿಕೊಳ್ಳಲು ಹೇಳಿದ್ದಾರೆ. 

ಕಳೆದ ಬುಧವಾರ ಮಾಲೂರು ಪಟ್ಟಣದಲ್ಲಿ ರಕ್ಷಿತಾ ಎಂಬ 15 ವರ್ಷದ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಲಾಗಿತ್ತು. ಇಡಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ರಕ್ಷಿತಾ ಹತ್ಯೆ ಪ್ರಕರಣದಿಂದ ಪೊಲೀಸರು ಮುಖಭಂಗಕ್ಕೆ ಒಳಗಾಗಿದ್ದರು. ಬಾಲಕಿ ಹತ್ಯೆ ಪ್ರಕರಣದಿಂದ ಎಚ್ಚೆತ್ತ ಪೋಲಿಸ್ ಇಲಾಖೆ,

 ಪುಂಡ ಪೋಕರಿಗಳನ್ನು ಮಟ್ಟ ಹಾಕಲು ಹಲವು ಕ್ರಮಗಳಿಗೆ ಕೈ ಹಾಕಿದೆ. 

ರೋಡ್ ರೋಮಿಯೋ, ಬೈಕ್ ವಿಲೀಂಗ್ ಮಾಡುವವರು, ಚಿತ್ರ ವಿಚಿತ್ರ ಗಡ್ಡ, ತಲೆಗೂದಲು ಬಿಟ್ಟ ಯುವಕರನ್ನು ಪತ್ತೆ ಹಚ್ಚಿ ಶಿಸ್ತಿನ ಪಾಠ ಮಾಡಿದ್ದಾರೆ ಪೊಲೀಸರು. ಪೋಲಿಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
 

loader