ಹಿಂದೆ ಕೆಲಸ ಮಾಡುತ್ತಿದ್ದ ಇಲಾಖೆ ಅಧಿ​ಕಾ​ರಿ​ಗ​ಳು ಒಂದು ವರ್ಷ​ದಿಂದ ರಿಲೀವಿಂಗ್‌ ಆರ್ಡರ್‌ ಲೆಟರ್‌(ಬಿಡುಗಡೆ ಆದೇಶಪತ್ರ) ನೀಡದೆ ನಿರ್ಲಕ್ಷ್ಯ ತೋರಿ​ದ್ದ​ರಿಂದ ಬೇಸತ್ತು ಮೀಸಲು ಪಡೆ ಪೊಲೀಸ್‌ವೊಬ್ಬರು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ.

ರಾಯಚೂರು(ಆ.02): ಹಿಂದೆ ಕೆಲಸ ಮಾಡುತ್ತಿದ್ದ ಇಲಾಖೆ ಅಧಿ​ಕಾ​ರಿ​ಗ​ಳು ಒಂದು ವರ್ಷ​ದಿಂದ ರಿಲೀವಿಂಗ್‌ ಆರ್ಡರ್‌ ಲೆಟರ್‌(ಬಿಡುಗಡೆ ಆದೇಶಪತ್ರ) ನೀಡದೆ ನಿರ್ಲಕ್ಷ್ಯ ತೋರಿ​ದ್ದ​ರಿಂದ ಬೇಸತ್ತು ಮೀಸಲು ಪಡೆ ಪೊಲೀಸ್‌ವೊಬ್ಬರು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ.

ಇಂಡಿಯನ್‌ ರಿಸವ್‌ರ್‍ ಬೆಟಾಲಿಯನ್‌ನಲ್ಲಿ ಪೊಲೀಸ್‌ ಆಗಿರುವ ಶರಣಪ್ಪ ಮೇಟಿ ಆತ್ಮಹತ್ಯೆಗೆ ಪ್ರಯತ್ನಿಸಿದವರು. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬಯ್ಯಾಪುರ ವಸತಿ ನಿಲಯದಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಶರಣಪ್ಪ ಮೇಟಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಇಂಡಿಯನ್‌ ರಿಸವ್‌ರ್‍ ಬಟಾಲಿಯನ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು.

ಆನ್‌ಲೈನ್‌ನಲ್ಲೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

ಆದರೆ ಹಳೇ ಕೆಲಸದಿಂದ ಬಿಡುಗಡೆ ದೃಢೀಕರಣ ಪತ್ರ ಪಡೆಯುವುದಕ್ಕಾಗಿ ವರ್ಷದಿಂದ ಸಮಾಜ ಕಲ್ಯಾಣ ಇಲಾಖೆಗೆ ತಿರುಗಾಡಿ ಸುಸ್ತಾಗಿದ್ದರು. ಇದರಿಂದ ಮನನೊಂದಿದ್ದ ಶರಣಪ್ಪ ಕೊನೆಗೆ ಇಲಾಖೆ ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಕಚೇರಿ ಸಿಬ್ಬಂದಿ ಅವರನ್ನು ತಡೆದಿದ್ದರಿಂದ ಅನಾ​ಹು​ತ​ವೊಂದು ತಪ್ಪಿ​ದಂತಾ​ಯಿ​ತು.