ಗೋವಾದ ವಾಸ್ಕೋಡಿಗಾಮಾ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ| ಸಿಸಿ ಕ್ಯಾಮೆರಾದಲ್ಲಿ ಪ್ರಯಾಣಿಕನ ರಕ್ಷಿಸುವ ದೃಶ್ಯಗಳು ಸೆರೆ| ಪ್ರಯಾಣಿಕನ ಪ್ರಾಣ ಕಾಪಾಡಿದ ಆರ್‌ಪಿಎಫ್‌ ಮುಖ್ಯಪೇದೆ ಕೆ.ಎಂ. ಪಾಟೀಲ| 

ಹುಬ್ಬಳ್ಳಿ(ಮಾ.12): ಚಲಿಸುವ ರೈಲನ್ನು ಹತ್ತುವ ವೇಳೆ ಕಾಲು ಜಾರಿ ಹಳಿಗೆ ಬಿದ್ದಿದ್ದ ಪ್ರಯಾಣಿಕನನ್ನು ಆರ್‌ಪಿಎಫ್‌ ಮುಖ್ಯಪೇದೆಯೊಬ್ಬರು ಜೀವದ ಹಂಗನ್ನು ತೊರೆದು ರಕ್ಷಿಸಿದ್ದಾರೆ.

ಗೋವಾದ ವಾಸ್ಕೋಡಿಗಾಮಾ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ಗುರುವಾರ ನಡೆದಿದ್ದು, ಸಿಸಿ ಕ್ಯಾಮೆರಾದಲ್ಲಿ ಪ್ರಯಾಣಿಕನನ್ನು ರಕ್ಷಿಸುವ ದೃಶ್ಯಗಳು ಸೆರೆಯಾಗಿವೆ.

ಹುಬ್ಬಳ್ಳಿ: ಮಾ. 12 ರಂದು ಸಿದ್ಧಾರೂಢರ ಸಾಂಕೇತಿಕ ರಥೋತ್ಸವ

ವಾಸ್ಕೋ ಡಿಗಾಮಾ - ಪಾಟ್ನಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಫ್ಲಾಟ್‌ ಫಾರಂ ನಂ. 1ರಲ್ಲಿ ನಿಂತಿತ್ತು. ಬಳಿಕ ಅದು ಚಲಿಸಲು ಪ್ರಾರಂಭವಾದ ಬಳಿಕ ಪ್ರಯಾಣಿಕರೊಬ್ಬರು ಅದನ್ನು ಹತ್ತಲು ಪ್ರಯತ್ನಿಸಿದರು. ಈ ವೇಳೆ ಕಾಲು ಜಾರಿ ಹಳಿಗೆ ಬಿದ್ದರು. ಸಮೀಪದಲ್ಲಿದ್ದ ಆರ್‌ಪಿಎಫ್‌ ಮುಖ್ಯಪೇದೆ ಕೆ.ಎಂ. ಪಾಟೀಲ ಓಡಿ ಹೋಗಿ ಪ್ರಯಾಣಿಕನ ಕೈಯನ್ನು ಹಿಡಿದು ಎಳೆದರು. ಇದರಿಂದ ಪ್ರಯಾಣಿಕನ ಜೀವ ಉಳಿದಿದೆ. ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡ ಮುಖ್ಯಪೇದೆ ಕೆ.ಎಂ.ಪಾಟೀಲರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.