ಹುಬ್ಬಳ್ಳಿ(ಸೆ.03): ಹುಬ್ಬಳ್ಳಿ-ಧಾರವಾಡ ಕಮೀಷನರೇಟ್‌ ವ್ಯಾಪ್ತಿಯಲ್ಲಿನ ಹಿರಿಯ ಪೊಲೀಸ್‌ ಅಧಿಕಾರಿಯೋರ್ವರು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆಂಬ ಗುಲ್ಲು ಇಲಾಖೆಯಲ್ಲಿ ಹಬ್ಬಿದೆ. ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳಿಗೆ ಆ ಮಹಿಳೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಆದರೆ, ಈ ಬಗ್ಗೆ ಕೇಳಿದರೆ ಡಿಜಿಪಿ ಪ್ರವೀಣ ಸೂದ್‌ ಅವರು ಬುಧವಾರ ಸಭೆ ನಡೆಸಿದ ಮೇಲೆ ಮಾತನಾಡಿ, ಆ ರೀತಿ ಯಾವುದೇ ಬಗೆಯ ಆರೋಪ ಕೇಳಿ ಬಂದಿಲ್ಲ. ಆದರೆ, ಆರೋಪ ಬಂದರೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅತಿಥಿ ಕುಲಪತಿಗಳೇ ಗತಿ! 

ಪೊಲೀಸ್‌ ಮಹಾನಿರ್ದೇಶಕರು ಯಾವುದೇ ಬಗೆಯ ಆರೋಪ ಕೇಳಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಇಲಾಖೆಯಲ್ಲಿ ಮಾತ್ರ ಗುಲ್ಲು ಬಲು ಜೋರಾಗಿ ಹಬ್ಬಿದೆ.