ಜೆಸಿಬಿ’ ಪಕ್ಷಗಳ ಆಡಳಿತ ಸರಿಯಾಗಿದ್ದಿದ್ದರೆ ಆಪ್ ಅಗತ್ಯ ಇರಲಿಲ್ಲ
‘ಜೆಸಿಬಿ’ ಪಕ್ಷಗಳ ಆಡಳಿತ ಸರಿಯಾಗಿದ್ದಿದ್ದರೆ ಆಪ್ ಅಗತ್ಯ ಇರಲಿಲ್ಲ. ಮೂಲಭೂತವಾದದಿಂದ ದ.ಕ. ಪ್ರಗತಿ ಕುಂಠಿತ. ಮಂಗಳೂರಲ್ಲಿ ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ಮೂರು ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳೂರು (ಜು.27) : ಜೆಡಿಎಸ್, ಕಾಂಗ್ರೆಸ್, ಬಿಜೆಪಿ (ಜೆಸಿಬಿ) ಪಕ್ಷಗಳ ಆಡಳಿತವು ಸರಿ ಇದ್ದಿದ್ದರೆ ಆಮ್ ಆದ್ಮಿ ಪಕ್ಷದ ಅಗತ್ಯವೇ ಇರಲಿಲ್ಲ. ಈ ಪಕ್ಷಗಳಿಗೆ ಜನರು ಅನೇಕ ಬಾರಿ ಅಧಿಕಾರ ನೀಡಿದರೂ ಜನರ ಏಳಿಗೆಗಾಗಿ ಏನೂ ಮಾಡಿಲ್ಲ ಎಂದು ಆಮ್ ಆದ್ಮಿ ರಾಜ್ಯ ಉಪಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಜೆಸಿಬಿ(JDS Congress BJP)’ ಪಕ್ಷಗಳ ವೈಫಲ್ಯದಿಂದಾಗಿ ಜನರಿಗಾಗಿ ಕೆಲಸ ಮಾಡಬಲ್ಲ ಎಎಪಿ(AAP) ಪಕ್ಷ ಹುಟ್ಟಿದ್ದು, ಯಶಸ್ವಿಯಾಗಿ ಆಡಳಿತವನ್ನೂ ಮಾಡಿ ತೋರಿಸಿಕೊಟ್ಟಿದೆ. ರಾಜ್ಯದಲ್ಲಿ ಕೂಡ ಮುಂದಿನ ಎಲ್ಲ ಚುನಾವಣೆಗಳ ಹಿನ್ನೆಲೆಯಲ್ಲಿ ತುಂಬ ವೇಗವಾಗಿ ಪಕ್ಷವನ್ನು ಕಟ್ಟಲಿದ್ದೇವೆ ಎಂದರು.
PSI SCAM : ಹಗರಣದ ವಾಸನೆ ನನಗೆ ಮೊದಲೇ ಸಿಕ್ಕಿತ್ತು- ಮಾಜಿ ಕಮಿಷನರ್ ಭಾಸ್ಕರ್ ರಾವ್
ಮೂಲಭೂತವಾದ ಮತ್ತು ಮತೀಯ ಧ್ರುವೀಕರಣದ ನಡುವೆ ದಕ್ಷಿಣ ಕನ್ನಡ ಜಿಲ್ಲೆ ಬಳಲುತ್ತಿದೆ. ಈ ಎರಡೂ ಸಿದ್ಧಾಂತಗಳಿಂದಾಗಿ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೂಡಿಕೆದಾರರು ಬರಲು ಮುಂದಾಗುತ್ತಿಲ್ಲ. ಇಲ್ಲದಿದ್ದರೆ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಗಾಧ ಮಟ್ಟದಲ್ಲಿ ಬೆಳೆಸಬಹುದಿತ್ತು. ಆದರೆ ಇವೆರಡು ಮಾನಸಿಕತೆಯಿಂದಾಗಿ ಯುವ ಜನರ ಜೀವನ ಹಾಳಾಗುತ್ತಿದೆ, ಭಯದ ವಾತಾವರಣ ಸೃಷ್ಟಿಯಾಗಿದೆ. ಇಂಥ ಮಾನಸಿಕತೆ ಬೆಳೆಯಲು ಅವಕಾಶ ಮಾಡಿಕೊಡಬಾರದು. ಅದಕ್ಕಾಗಿ ರಾಜ್ಯದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಮತ್ತು ಹಿಂದೂ, ಮುಸ್ಲಿಂ ತಾರತಮ್ಯ ಹೋಗಲಾಡಿಸಲು ಆಪ್ ಪಕ್ಷ ಮುಂದಾಗಲಿದೆ ಎಂದು ಭಾಸ್ಕರ ರಾವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ದ.ಕ.ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಕರಾವಳಿ ಪ್ರಾಂತ್ಯದ ಅಧ್ಯಕ್ಷ ಜಯಪ್ರಕಾಶ್, ರಾಷ್ಟ್ರೀಯ ನಾಯಕ ವಿವೇಕಾನಂದ ಸನಿಲ್, ಮಾಧ್ಯಮ ಸಂಚಾಲಕ ವೆಂಕಟೇಶ್ ಬಾಳಿಗ, ಮುಖಂಡ ವೇಣುಗೋಪಾಲ ಇದ್ದರು.
ನಮ್ಮ ಸರ್ಕಾರದ ಧರ್ಮವನ್ನು ನೆನಪಿಸಿದ್ದಕ್ಕೆ ಗಲ್ಫ್ ರಾಷ್ಟ್ರಗಳಿಗೆ ಥ್ಯಾಂಕ್ಸ್ ಎಂದ ಸ್ವರ ಭಾಸ್ಕರ್
ಅನೈತಿಕ ಪೊಲೀಸ್‌ಗಿರಿಗೆ ರಾಜಕೀಯ ಬೆಂಬಲ:
ಜಿಲ್ಲೆಯಲ್ಲಿ ಪಬ್ ಘಟನಪೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಾಸ್ಕರ ರಾವ್, ರಾಜಕೀಯ(Politics) ಪಕ್ಷಗಳ ಬೆಂಬಲ ಇದ್ದರೆ ಮಾತ್ರ ಅನೈತಿಕ ಪೊಲೀಸ್‌ಗಿರಿ ಮಾಡಲು ಸಾಧ್ಯ. ಅಂತಹ ಪೊಲೀಸ್‌ಗಿರಿಯ ವಿರುದ್ಧ ಕ್ರಮ ಕೈಗೊಂಡರೆ ಅಂಥ ಅಧಿಕಾರಿಗಳಿಗೆ ವರ್ಗಾವಣೆ ಕಟ್ಟಿಟ್ಟಬುತ್ತಿ. ಕಾನೂನು ಸುವ್ಯವಸ್ಥೆಗೆ ಬೆದರಿಕೆ ಹಾಕುವ ಯಾವುದೇ ಶಕ್ತಿಯನ್ನು ಮಟ್ಟಹಾಕಬೇಕಿದೆ. ಸತ್ಯವನ್ನು ಹೇಳಲಾಗದಂತಹ ವಾತಾವರಣದಲ್ಲಿ ಅಧಿಕಾರಿಗಳು ಇದ್ದಾರೆ. ಆದರೂ ಸತ್ಯ ಹೇಳುವಂತಹ ಧೈರ್ಯವನ್ನು ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದರು.
ಕೆಎಸ್‌ಆರ್‌ಟಿಸಿ ಆಸ್ಪತ್ರೆ ನಿರ್ವಹಣೆ ಖಾಸಗಿಯವರಿಗೆ; ಎಎಪಿ ವಿರೋಧ:
ಜಯನಗರದಲ್ಲಿರುವ ಕೆಎಸ್‌ಆರ್‌ಟಿಸಿ ಆಸ್ಪತೆಯನ್ನು ನಿರ್ವಹಣೆ ಮಾಡಲು ಖಾಸಗಿಯವರಿಗೆ ನೀಡಲು ಸಂಸದ ತೇಜಸ್ವಿ ಸೂರ್ಯ ಒತ್ತಡ ಹೇರಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಆರೋಪಿಸಿದೆ.
ಈ ಸಂಬಂಧ ಮಾತನಾಡಿರುವ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ಹಲವು ವರ್ಷಗಳಿಂದ ಕೆಎಸ್‌ಆರ್‌ಟಿಸಿ ಆಸ್ಪತ್ರೆಯಲ್ಲಿ ಕೆಎಸ್‌ಆರ್‌ಟಿಸಿ ನೌಕರರು ಅಗತ್ಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ. ಸಾರಿಗೆ ನೌಕರರಿಗೆ ಇರುವ ಏಕೈಕ ಆಸ್ಪತ್ರೆ ಇದಾಗಿದ್ದು, ಇನ್ನೂ ಒಂದು ಆಸ್ಪತ್ರೆ ತೆರೆದು ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರ ಯೋಚಿಸಬೇಕು. ಆದರೆ, ಸಂಸದ ತೇಜಸ್ವಿ ಸೂರ್ಯ ಅವರು ಈಗಿರುವ ಆಸ್ಪತ್ರೆಯನ್ನೂ ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ. ಈ ಬೆಳವಣಿಗೆಯಿಂದ ಸಾರಿಗೆ ನೌಕರರು ಸಣ್ಣಪುಟ್ಟಚಿಕಿತ್ಸೆಗೂ ದುಬಾರಿ ಬೆಲೆ ತೆರಬೇಕಾದ ಸ್ಥಿತಿ ಎದುರಾಗಲಿದೆ ಎಂದು ತಿಳಿಸಿದರು.