ಮೈಸೂರು(ಡಿ.15): ಯುಪಿಎಸ್‌ಸಿ ಮೂಲಕ ನೇಮಕವಾಗು ತ್ತಿದ್ದ ಡಿಜಿ ಮತ್ತು ಐಜಿಪಿ ಹುದ್ದೆಗಳಿಗೆ ಇನ್ನು ಮುಂದೆ ಕೇಂದ್ರ ಸರ್ಕಾರ ಕಳುಹಿಸಿಕೊಟ್ಟ ಹೆಸರನ್ನೇ ಭರ್ತಿ ಮಾಡುವ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಅಂದರೆ ವಲಯ ಪ್ರಕಾರದ ಡೈರೆಕ್ಟರ್ ಜನರಲ್ (ಡಿಜಿ) ಮತ್ತು ಇನ್‌ಸ್ಪೆಕ್ಟರ್ ಜನ ರಲ್ ಆಫ್ ಪೊಲೀಸ್ (ಐಜಿಪಿ) ಇತ್ಯಾದಿ ಹುದ್ದೆಗಳಿಗೆ ನೇಮಕಾತಿಗಳನ್ನು ಯುಪಿಎಸ್‌ಸಿ ಮಾಡುತ್ತದೆ.

JDS ಭದ್ರಕೋಟೆ ಭೇದಿಸಿದ ಕೆಸಿಎನ್‌ಗೆ ಅಬಕಾರಿ ಖಾತೆ ಗಿಫ್ಟ್‌..?

ಜ್ಯೇಷ್ಠತೆ ಆಧಾರದ ಮೇರೆಗೆ ನೇಮಕಾತಿಯನ್ನು ನಿಷ್ಪಕ್ಷಪಾತವಾಗಿ ನಡೆಸಲಾಗುತ್ತಿತ್ತು. ಇನ್ನು ಮುಂದೆ ಈ ಹುದ್ದೆಗಳಿಗಾಗಿ ಕೇಂದ್ರ ಸರ್ಕಾರ ಕೆಲವೊಂದು ಹೆಸರು ಕಳಿಸಿದ್ದು, ಅದರಲ್ಲಿ ಕೇಂದ್ರದ ಪೂರ್ತಿ ಹಸ್ತಕ್ಷೇಪವಾಗಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.

ಇಂತವರ ಹೆಸರ ಪಟ್ಟಿಯಲ್ಲಿ ಪ್ರಸಕ್ತ ಭೂ ಸೇನಾ ಮಹಾ ದಂಡನಾಯಕ ರಾವತ್ ಹೆಸರಿದೆ. ಇವರ ಹಿಂದಿನ ಭಾಷಣದಲ್ಲಿ ಮೋದಿಯವರ ಮಾತುಗಳಿರುವುದು ಸ್ಮರಿಸಬಹುದು ಎಂದಿದ್ದಾರೆ.  

ಮಂಗಳೂರು: ಫಾಸ್ಟ್‌ಟ್ಯಾಗ್ ಇಲ್ಲದೆಯೂ ನೀವಿಲ್ಲಿ ಸಂಚರಿಸಬಹುದು..!