ತುಮಕೂರು(ಆ.30): ಚಿಕಿ​ತ್ಸೆ​ಗಾಗಿ ಆಸ್ಪ​ತ್ರೆಗೆ ತ್ರಿಬಲ್‌ ರೈಡಿಂಗ್‌ನಲ್ಲಿ ತೆರ​ಳು​ತ್ತಿದ್ದಾಗ ನಡು​ ರ​ಸ್ತೆ​ಯ​ಲ್ಲಿಯೆ ಪೊಲೀಸ್‌ ಅಧಿಕಾರಿಯೊಬ್ಬರು ಕಾಲಿನಿಂದ ಒದ್ದು ಥಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಥಳಿತದ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ ಪತ್ರಕರ್ತನಿಗೂ ಅವಾಚ್ಯ ಶಬ್ದಗಳಿಂದ ಪೊಲೀಸ್‌ ಅಧಿಕಾರಿ ನಿಂದಿಸಿದ್ದಾರೆ ಎನ್ನಲಾದ ಘಟನೆ ಪಾವಗಡ ಪಟ್ಟಣದಲ್ಲಿ ನಡೆದಿದೆ.

ಪಾವ​ಗಡ ವೈ.ಇ.​ರಂಗಯ್ಯ ಶೆಟ್ಟಿಸಕಾ​ರ್‍ರಿ ಪ್ರಥಮ ದಜೆ​ರ್‍ ಕಾಲೇ​ಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡು​ತ್ತಿದ್ದ ತಾಲೂ​ಕಿನ ಶ್ರೀರಂಗ​ಪು​ರದ ಹೇಮಂತ್‌ ​ಕು​ಮಾರ್‌, ಸಂದೀಪ್‌ ಹಾಗೂ ಫಣಿ​ರಾಜ್‌ ಈ ಮೂರು ಮಂದಿ ವಿದ್ಯಾ​ರ್ಥಿಗಳು ಆನಾ​ರೋ​ಗ್ಯಕ್ಕೆ ತುತ್ತಾದ ಸ್ನೇಹಿತ ಸಂದೀಪ್‌ಗೆ ಚಿಕಿತ್ಸೆ ಕೂಡಿ​ಸುವ ಸಲು​ವಾಗಿ ತ್ರಿಬಲ್‌ ರೈಡಿಂಗ್‌ನಲ್ಲಿ ಹೋಗುತ್ತಿದ್ದರು.

ಪಟ್ಟ​ಣದ ಚಳ್ಳ​ಕರೆ ಕ್ರಾಸ್‌​ನಿಂದ ಆಸ್ಪ​ತ್ರೆಗೆ ಆಗ​ಮಿ​ಸು​ತ್ತಿ​ರುವ ವೇಳೆ ಪೊಲೀಸ್‌ ಜೀಪು ಕಣ್ಣಿಗೆ ಬಿದ್ದಿ​ದೆ. ಕೂಡಲೇ ​ಭ​ಯಭೀತ​ರಾದ ವಿದ್ಯಾ​ಥಿ​ರ್‍ಗಳು ಬೈಕ್‌​ನಲ್ಲಿ ಪರಾ​ರಿ​ಯಾ​ಗಿ​ದ್ದಾ​ರೆ. ಇದ​ರಿಂದ ಸಂಶ​ಯ​ಗೊಂಡ ಪೊಲೀಸ್‌ ಅಧಿಕಾರಿ ಈ ವಿದ್ಯಾ​ಥಿ​ರ್‍ಗಳ​ನ್ನು ಹಿಂಬಾ​ಲಿಸಿ ಹಿಡಿ​ದಿ​ದ್ದಾ​ರೆ. ​ನಂತರ ಕಾಲಿ​ನಲ್ಲಿ ತಿಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸ್ದಿದಾರೆ.

ತುಮಕೂರು : ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

ಈ ಘಟನೆ ಪತ್ರ​ಕ​ರ್ತ ಇಮ್ರಾನ್‌ ಕಣ್ಣಿಗೆ ಬಿದ್ದಿ​ದೆ. ​ತಕ್ಷಣ ಆತ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದನ್ನು ನೋಡಿದ ಪೊಲೀಸ್‌ ಅಧಿಕಾರಿ ನೀನು ಯಾರು, ಯಾಕೆ ವಿಡಿಯೋ ಮಾಡು​ತ್ತಿ​ರುವೆ ಎಂದು ಪ್ರಶ್ನಿ​ಸಿ​ದ್ದಾರೆ. ನಾನು ಪತ್ರ​ಕ​ರ್ತ ಎಂದು ಗುರುತಿನ ಚೀಟಿ ತೋರಿ​ಸಿ​ದ್ದರೂ ​ಲೆಕ್ಕಿ​ಸದ ಅವರು, ವಿಡಿಯೋ ಮಾಡ​ಬೇ​ಡ. ​ವಿ​ಡಿಯೋ ಮಾಡಿ​ದರೆ ಪರಿ​ಣಾಮ ಎದು​ರಿ​ಸ​ಬೇ​ಕಾಗುತ್ತೆ. ನಿ​ವೇ​ನಿ​ದ್ದರೂ ಠಾಣೆಗೆ ಬಂದು ಮಾಹಿತಿ ಪಡೆ​ದು​ಕೊಳ್ಳಿ ಎಂದು ಅವಾಚ್ಯ ಶಬ್ದಗಳಿಂದ ಗದರಿಸಿದ್ದಾರೆ ಎಂದು ಪತ್ರಕರ್ತ ಆರೋಪಿಸಿದ್ದಾರೆ.

ಈ ಬಗ್ಗೆ ನ್ಯಾಯ ಕಲ್ಪಿ​ಸು​ವಂತೆ ಆಗ್ರ​ಹಿಸಿ ಕರ್ನಾಟಕ ಕಾರ್ಯನಿರತ ಪತ್ರ​ಕ​ರ್ತರ ಸಂಘಕ್ಕೆ ಮತ್ತು ಜಿಲ್ಲಾ​ಧಿ​ಕಾರಿ, ಜಿಲ್ಲಾ ಪೊಲೀಸ್‌ ವರಿ​ಷ್ಠಾಧಿ​ಕಾ​ರಿ​ಗ​ಳಿಗೆ ದೂರು ಸಲ್ಲಿ​ಸುವುದಾಗಿ ಪತ್ರ​ಕ​ರ್ತ ಇಮ್ರಾನ್‌ ತಿ​ಳಿ​ಸಿ​ದ್ದಾ​ರೆ.