ಚಾಮರಾಜನಗರ (ಡಿ.08): ಭಾರತ್ ಬಂದ್ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಹೆದ್ದಾರಿ ತಡೆದು ಬಸ್ ಸಂಚರಿಸಿದಂತೆ ಪ್ರತಿಭಟಿಸುತ್ತಿದ್ದ ವೇಳೆ ಬಸ್ ಗಾಗಿ ಕಾಯುತ್ತಿದ್ದ ಹೃದಯ ಸಂಬಂಧಿ ರೋಗಿಯೋರ್ವ ಕುಸಿದು ಬಿದ್ದ ಘಟನೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆಯಿತು.

ಕೂಡಲೇ ಎಚ್ಚೆತ್ತ ಪಟ್ಟಣ ಠಾಣೆ ಪಿಐ ಮಹೇಶ್ ತಮ್ಮ ಜೀಪಿನಲ್ಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಭಾರತ್ ಬಂದ್ : ಮೆಜೆಸ್ಟಿಕ್‌ನಲ್ಲಿ ಬಂದ್ ಬಿಸಿ ಹೇಗಿದೆ? ನೋಡೋಣ ಬನ್ನಿ! ...

 ಇನ್ನು, ಕುಸಿದುಬಿದ್ದ ವ್ಯಕ್ತಿ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದವರಾಗಿದ್ದು ಜಯದೇವ ಆಸ್ಪತ್ರೆಗೆ ತೆರಳಬೇಕಿತ್ತು ಎಂದು ತಿಳಿದುಬಂದಿದೆ.

ಇನ್ನು, ರೈತ ಹೋರಾಟಗಾರರು ಬಸ್ ಸಂಚಾರ ಆರಂಭಿಸದಂತೆ ಪಟ್ಟು ಹಿಡಿದು ನಿಲ್ದಾಣದ ದ್ವಾರದಲ್ಲೇ ಕುಳಿತು ಪ್ರತಿಭಟಿಸುತ್ತಿದ್ದಾರೆ.

ದೇಶದಲ್ಲಿ ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ವಿವಿಧ ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.