Asianet Suvarna News Asianet Suvarna News

Chikkamagaluru: ಕಾಣೆಯಾಗಿದ್ದ ಬಸವನನ್ನು ಹುಡುಕಿ ದೇವಾಲಯಕ್ಕೆ ಒಪ್ಪಿಸಿದ ಪೊಲೀಸರು!

ಗೋ ಕಳ್ಳರ ಪಾಲಾಗಿದ್ದ ಬಸವ (ಎತ್ತು) ಪವಾಡ ಎನ್ನುವ ರೀತಿಯಲ್ಲಿ ಸ್ವಗ್ರಾಮವನ್ನು ಸೇರಿಕೊಂಡಿದೆ. ಕಾಣೆಯಾಗಿದ್ದ ಬಸವ ಮತ್ತೆ ಗ್ರಾಮಕ್ಕೆ ಬಂದ ವೇಳೆಯಲ್ಲಿ ಭಕ್ತರು, ಗ್ರಾಮಸ್ಥರು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ.

police found the missing chikkamagaluru ox and handed it over to the temple gvd
Author
Bangalore, First Published Jul 13, 2022, 10:28 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.13): ಗೋ ಕಳ್ಳರ ಪಾಲಾಗಿದ್ದ ಬಸವ (ಎತ್ತು) ಪವಾಡ ಎನ್ನುವ ರೀತಿಯಲ್ಲಿ ಸ್ವಗ್ರಾಮವನ್ನು ಸೇರಿಕೊಂಡಿದೆ. ಕಾಣೆಯಾಗಿದ್ದ ಬಸವ ಮತ್ತೆ ಗ್ರಾಮಕ್ಕೆ ಬಂದ ವೇಳೆಯಲ್ಲಿ ಭಕ್ತರು, ಗ್ರಾಮಸ್ಥರು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ.

ಮೈಲಾರಲಿಂಗ ಸ್ವಾಮಿಯ ಬಸವನಿಗೆ ಭರ್ಜರಿ ಸ್ವಾಗತ: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರಿನ ಮೈಲಾರಲಿಂಗ ಸ್ವಾಮಿ ದೇವಸ್ಥಾನದಲ್ಲಿಯೇ ಇದ್ದ ಬಸವ (ಎತ್ತು) ಕಳೆದ 10 ದಿನಗಳ ಹಿಂದೆ ಕಾಣೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಆತಂಕಕ್ಕೆ ಒಳಾಗಿದ್ದರು. ಅಲ್ಲದೆ ಬಸವನಿಗಾಗಿ ಹುಡುಕಾಟ ನಡೆಸಿ ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಸವ ಕಾಣೆಯಾಗ್ತಾ ಇದ್ದಂತೆ ಭಕ್ತರಲ್ಲಿ ಆತಂಕ ಮೂಡಿಸಿತ್ತು. ಆದ್ರೆ ಗೋ ಕಳ್ಳರ ಪಾಲಾಗಿದ್ದ ಮೈಲಾರಲಿಂಗ ಸ್ವಾಮಿಯ ಬಸವವನ್ನು ಪೊಲೀಸರು ಹುಡುಕಿ ಕೊಟ್ಟಿದ್ದಾರೆ. ತುಮಕೂರು ಜಿಲ್ಲೆಯ ಅಮೃತೂರಿನಲ್ಲಿ ಗೋ ಕಳ್ಳರ ವಿರುದ್ದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೀರೂರಿನ ಬಸವ ಸಿಕ್ಕಿದೆ. 

ಚಿಕ್ಕಮಗಳೂರು ನೆರೆ ಪ್ರದೇಶಗಳಿಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ: ಪರಿಶೀಲನೆ

ಕಳೆದ 10 ದಿನಗಳ ಹಿಂದೆ ಬೀರೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯ ಶ್ರೀ ಮೈಲಾರ ಲಿಂಗಸ್ವಾಮಿಗೆ ಬಿಟ್ಟಿದ್ದ ಬಸವಣ್ಣನನ್ನು ಬೀರೂರು ಪೋಲಿಸರು ದೇವಾಲಯ ಸಮಿತಿಗೆ ಹಸ್ತಾಂತರಿಸಿದರು. ಬಸವಣ್ಣ ಕಾಣೆಯಾಗಿ, ನಂತರ ಕುಣಿಗಲ್ ತಾಲ್ಲೂಕಿನ ಅಮೃತೂರಿನಲ್ಲಿ ಪತ್ತೆಯಾಗಿತ್ತು. ಪತ್ತೆಯಾಗಿದ್ದ ಬಸವಣ್ಣನನ್ನು ಅಮೃತ್ತೂರು ಪೊಲೀಸರು ಮೈಸೂರಿನ ಪಿಂಜಾರಪೋಲ್ ಗೋಶಾಲೆಗೆ ಬಿಟ್ಟಿದ್ದರು .ಪೊಲೀಸ್ ಮಾಹಿತಿ ಮೇರೆಗೆ ದೇವಾಲಯ ಸಮಿತಿಯವರು ಬಸವಣ್ಣನ್ನನು ಕರೆ ತರಲು ಮೈಸೂರಿಗೆ ತೆರಳಿ ಮಂಗಳವಾರ ಫಿಕಪ್ ಮೂಲಕ ಬೀರೂರಿಗೆ ಆಗಮಿಸಿದ್ದಾರೆ.

ಭಕ್ತರಿಂದ ಅದ್ದೂರಿ ಪುಷ್ಪಾರ್ಚನೆಗೈದು ಸ್ವಾಗತ: ಬಸವ ಪಟ್ಟಣಕ್ಕೆ ಬರುತ್ತಿದ್ದಂತೆ ಭಕ್ತಧಿಗಳು ಹೂಮಳೆಗೈದು ಬಸವಣ್ಣನಿಗೆ ಗೋಪುರ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ದೇವಾಲದ ಬಳಿ ಬಂದಾಗ ಪೂಜಾರರು, ಭಕ್ತಾಧಿಗಳು ಆರತಿ ಎತ್ತಿ ಬರ ಮಾಡಿಕೊಂಡರು.ಬೀರೂರು ಪೊಲೀಸ್ ಠಾಣೆ ಅಪರಾದ ವಿಭಾಗದ ಪಿಎಸೈ ಬಸವರಾಜಪ್ಪ ಬಸವಣ್ಣನ್ನು ಕಾನೂನಿನ ಪ್ರಕಾರ ದೇವಾಲದ ಕಮಿಟಿಗೆ ಒಪ್ಪಿಸಿದ ಅವರು ಜಾನುವಾರು, ಬಸವಣ್ಣಗಳನ್ನು ಸಾಕುವವರು ಅವುಗಳ ಹಾರೈಕೆ ಮತ್ತು ಜವಾಬ್ದಾರಿ ಮಾಲೀಕನಿಗೆ ಬಿಟ್ಟದ್ದು. 

Chikkamagaluru ಐತಿಹಾಸಕ ಅಯ್ಯನ ಕೆರೆ ಕೋಡಿ : ಬಯಲು ಸೀಮೆ ರೈತರಲ್ಲಿ ಸಂತಸ

ಬಸವಣ್ಣ ಕಳೆದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿ ಏನೋ ಭಗವಂತನ ದಯೆಯಿಂದಾ ಸಿಕ್ಕಿದೆ. ಇನ್ನು ಈ ಬಸವಣ್ಣನ ಪೋಷಣೆಯ ಸಂಪೂರ್ಣ ಜವಾಬ್ದಾರಿ ದೇವಾಲಯ ಕಮಿಟಿಯವದ್ದಾಗಿರುತ್ತದೆ. ಈ ಸಂದರ್ಭದಲ್ಲಿ ದೇವಾಲಯ ಕಮಿಟಿಯ ಕರಿಯಪ್ಪ, ವಿಶ್ವೆಶ್ವರಾಚಾರ್, ಶಿವಣ್ಣ. ಪುರಸಭಾ ಸದಸ್ಯ ಲೋಕೇಶಪ್ಪ, ಬಿ.ಜಿ.ಮೈಲಾರಪ್ಪ.ಹಾಲಪ್ಪ, ಎ.ಎಸೈ ಸುರೇಶ್, ಪೇದೆಗಳಾದ ಮಧು, ಸೇರಿದಂತೆ ನೂರಾರು ಭಕ್ತಾಧಿಗಳು ಇದ್ದರು.

Follow Us:
Download App:
  • android
  • ios