Asianet Suvarna News Asianet Suvarna News

ಬೆಳ್ತಂಗಡಿ: ಆ್ಯಂಬುಲೆನ್ಸ್‌ನಲ್ಲಿ ಟ್ರಿಪ್‌ ಹೊರಟ ಭೂಪನಿಗೆ ಪೊಲೀಸರಿಂದ ದಂಡ..!

ಆ್ಯಂಬುಲೆನ್ಸ್‌ ಚಾಲಕ ತನ್ನ ಆರು ಮಂದಿ ಗೆಳೆಯರನ್ನು ಆ್ಯಂಬುಲೆನ್ಸ್‌ನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ದೇವಸ್ಥಾನಕ್ಕೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ. ಆದರೆ ಕೊಟ್ಟಿಗೆಹಾರ ಆಗಿ ಉಜಿರೆ ಬರುತ್ತಿದ್ದಂತೆ ಬೆಳ್ತಂಗಡಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ.
 

Police Fine to Person who takes Trip in an Ambulance at Belthangady in Dakshina Kannada grg
Author
First Published Nov 12, 2023, 8:53 AM IST

ಬೆಳ್ತಂಗಡಿ(ನ.11): ಆ್ಯಂಬುಲೆನ್ಸ್ ಇರುವುದು ಗಂಭೀರವಾಗಿರುವ ವ್ಯಕ್ತಿಗಳನ್ನು ವೇಗವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕಾರ್ಯಕ್ಕೆ. ಆದರೆ ಬೆಂಗಳೂರಿನ 7 ಮಂದಿ ಯುವಕರು ಆಂಬುಲೆನ್ಸ್‌ನಲ್ಲಿ ಪ್ರವಾಸ ಮಾಡಿರುವ ವಿಚಿತ್ರ ವಿದ್ಯಮಾನ ನಡೆದಿದ್ದು, ಈ ಯುವಕರನ್ನು ಉಜಿರೆಯಲ್ಲಿ ಪೊಲೀಸರು ಹಿಡಿದು ದಂಡ ಹಾಕಿದ ಘಟನೆ ನಡೆದಿದೆ.

ಆ್ಯಂಬುಲೆನ್ಸ್‌ ಚಾಲಕ ತನ್ನ ಆರು ಮಂದಿ ಗೆಳೆಯರನ್ನು ಆ್ಯಂಬುಲೆನ್ಸ್‌ನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ದೇವಸ್ಥಾನಕ್ಕೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ. ಆದರೆ ಕೊಟ್ಟಿಗೆಹಾರ ಆಗಿ ಉಜಿರೆ ಬರುತ್ತಿದ್ದಂತೆ ಬೆಳ್ತಂಗಡಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ.

ಪುತ್ತಿಲ ಪರಿವಾರ ಮುಖಂಡನ ಕೊಲೆ ಯತ್ನ: ಹಿಂದೂ ಸಂಘಟನೆಯ ದಿನೇಶ್‌ ಸಹಿತ 9 ಮಂದಿ ಬಂಧನ

ಚಿಕ್ಕಮಗಳೂರಿನ ಕೊಟ್ಟಿಗೆಹಾರದಿಂದ ಚಾರ್ಮಾಡಿಯಾಗಿ ಉಜಿರೆ ಕಡೆ ತ್ಯಾಗರಾಜ್ ಎಂಬ ಹೆಸರಿನ ಆ್ಯಂಬುಲೆನ್ಸ್‌ನಲ್ಲಿ ಒಟ್ಟು ಏಳು ಜನ ಬರುತ್ತಿರುವ ಮಾಹಿತಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅರ್ಜುನ್ ಅವರಿಗೆ ಬಂದಿತ್ತು. ತಕ್ಷಣ ತಮ್ಮಠಾಣೆಯ ಸಿಬ್ಬಂದಿ ಸುನಿಲ್ ಉಜಿರೆ ಬೀಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಾಹಿತಿ ನೀಡಿ ವಾಹನ ನಿಲ್ಲಿಸಿ ಠಾಣೆಗೆ ತರಲು ಸೂಚಿಸಿದ್ದಾರೆ. ಅದರಂತೆ ಆ್ಯಂಬುಲೆನ್ಸ್ ಠಾಣೆಗೆ ತಂದು ವಿಚಾರಿಸಿದಾಗ ಆ್ಯಂಬುಲೆನ್ಸ್‌ನಲ್ಲಿ ಗೆಳೆಯರ ಜೊತೆ ದೇವಸ್ಥಾನ ಟ್ರಿಪ್ ಬಗ್ಗೆ ಹೇಳಿದ್ದಾರೆ. ಸಂಚಾರಿ ಪೊಲೀಸರು ಚಾಲಕನಿಗೆ ದಂಡ ಹಾಕಿದ್ದಾರೆ.

Follow Us:
Download App:
  • android
  • ios