ನೆಲಮಂಗಲ (ಡಿ.30): ವಾಹನ ಸವಾರರೇ ಎಚ್ಚರ ಎಚ್ಚರ ! ನಿಮ್ಮ ವಾಹನಗಳ ನಂಬರ್ ಪ್ಲೇಟ್ ಮೇಲೆ ಹೆಸರು ಹಾಕಿದ್ರೆ ಭಾರೀ ದಂಡ ಬೀಳುತ್ತೆ. 

ಈ ನಿಟ್ಟಿನಲ್ಲಿ ನೆಲಮಂಗಲ ಡಿ ಆರ್ ಡಿ ಒ ಅಧಿಕಾರಿ ಡಾ. ಒಡೆಯರ್ ನೇತೃಥ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು,  ನಂಬರ್ ಪ್ಲೇಟ್ ಮೇಲೆ ವಾಹನದ ನಂಬರ್ ಬಿಟ್ಟು ಇನ್ಯಾವುದೇ ರೀತಿಯ ಚಿನ್ಹೆ ಹಾಗೂ ಹೆಸರ ಹಾಕಿದ್ರೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.  

ವಾಹನಗಳಲ್ಲಿನ ಅನಧಿಕೃತ ನಂಬರ್ ಪ್ಲೇಟ್ ಗಳನ್ನು ತೆರವು ಮಾಡುತ್ತಿದ್ದು, ನಿಯಮ ಉಲ್ಲಂಘಿಸಿದ್ದವರಿಗೆ ದಂಡ ವಿಧಿಸಿದ್ದಾರೆ. ಅಲ್ಲದೇ ಈಗಾಗಲೇ ನೂರಕ್ಕೂ ಹೆಚ್ಚು ನಂಬರ್ ಪ್ಲೇಟ್ ತೆರವು ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಂಬರ್ ಪ್ಲೇಟ್ ಮೇಲೆ ಹೆಸರು ಹಾಗೂ ವಿಚಿತ್ರ ಚಿತ್ರಗಳನ್ನು ಹಾಕಿಕೊಳ್ಳೋದು, ಸ್ಟೈಲಿಶ್ ಆಗಿ ನಂಬರ್ ಬರೆಸೋದು ಮಾಡಿದರೆ ಫೈನ್ ಹಾಕಲಾಗುತ್ತೆ ಎಂದು ಸಾರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.