ಬೆಳಗಾವಿ(ಡಿ.28): ಗ್ರಾಮ ಪಂಚಾಯತಿ ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ್ದ ಡಿಎಆರ್‌ ಪೊಲೀಸ್‌ ಸಿಬ್ಬಂದಿಯೊಬ್ಬರು ಕಬ್ಬಿನ ಗದ್ದೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿ, ರೈತರ ಪಾಲಿಗೆ ಅಪದ್ಬಾಂಧವ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಂಗನೊಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. 

ಡಿಎಆರ್‌ ಪೊಲೀಸ್‌ ರಿಯಾಜ್‌ ಎಂ ನದಾಫ್‌ (ಪಿಸಿ ನಂ.2934) ಎಂಬವರೇ ಕಬ್ಬಿನ ಗದ್ದೆಗೆ ತಗುಲಿದ್ದ ಬೆಂಕಿಯನ್ನು ಗಮನಿಸಿ, ಅದನ್ನು ಸ್ಥಳೀಯ ಯುವಕರ ನೆರವಿನಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಪ್ರಶಂಸೆಗೆ ಕಾರಣವಾಗಿದ್ದಾರೆ. 

ಬೆಳಗಾವಿ: ಕಿತ್ತೂರು ಅರಣ್ಯದಲ್ಲಿ ವನ್ಯಹಂತಕರ ಸೆರೆ, ಜೀವಂತ ಗುಂಡು ವಶ

ಚುನಾವಣಾ ಕರ್ತವ್ಯದ ಮೇರೆಗೆ ಕೊಂಗನೊಳ್ಳಿ ಗ್ರಾಮಕ್ಕೆ ರಿಯಾಜ್‌ ನದಾಫ್‌ ಆಗಮಿಸಿದ್ದರು. ಸುಮಾರು 10 ಎಕರೆ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡಿತ್ತು. ಇದನ್ನು ಗಮನಿಸಿದ ಅವರು, ಕೂಡಲೇ ಸ್ಥಳೀಯ ಯುವಕರ ನೆರವನ್ನು ಪಡೆದರು. ತಾವೇ ಕೈಯಲ್ಲಿ ಕುಡಗೋಲು ಹಿಡಿದು ಬೆಂಕಿ ಹತ್ತಿದ್ದ ಕಬ್ಬುಗಳನ್ನು ಕಡಿಯುವ ಮೂಲಕ ಬೆಂಕಿಯನ್ನು ನಂದಿಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.