ಮಂಡ್ಯ(ಆ.27): ಪೊಲೀಸ್ ಪೇದೆಯೊಬ್ಬನ ಜೊತೆ ಗೃಹಿಣಿಯೋರ್ವಳು ಪರಾರಿಯಾಗಿದ್ದು, ಆಕೆಯನ್ನು ಪತ್ತೆ ಮಾಡಿಕೊಡುವಂತೆ ಪತಿರಾಯನೊಬ್ಬ ಪೊಲೀಸರಿಗೆ ದೂರು ನೀಡಿರುವ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮುಳ್ಳೂರು ಗ್ರಾಮದ ನಿವಾಸಿ ದೂರು ನೀಡಿದ್ದಾರೆ.

ಏನಾಯ್ತು..? ಮಳವಳ್ಳಿ ತಾಲೂಕಿನ ಹಲಗೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯನಿರ್ವಹಿಸುತ್ತಿರುವ ಕೊಳ್ಳೆಗಾಲ ಮೂಲದವ ಇಲ್ಲಿನ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದ. ಆಕೆಯೊಂದಿಗೆ ಸಲುಗೆ ಬೆಳೆದು ಇಬ್ಬರ ನಡುವೆ ಅನೈತಿಕ ಸಂಬಂಧ ಏರ್ಪಟ್ಟಿತ್ತು ಎಂದು ಹೇಳಲಾಗಿದೆ.

ಆತನೊಬ್ಬ ಹುಡುಗಿಯರ ಹುಚ್ಚ, ಐದು ವರ್ಷದ ಪ್ರೀತಿ, ಫೇಸ್ ಬುಕ್ ಪೋಸ್ಟ್!...

ಇಬ್ಬರೂ ಈ ಹಿಂದೆ ಎರಡು ಬಾರಿ ಪರಾರಿಯಾಗಿದ್ದರು. ನಂತರದ ದಿನಗಳಲ್ಲಿ ಅವರನ್ನು ಕರೆಸಿ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿ ಗಂಡನೊಂದಿಗೆ ಕಳಿಸಲಾಗಿತ್ತು. ಆದರೂ ಪೇದೆ ಮತ್ತು ಮಹಿಳೆ ತಮ್ಮ ಚಾಳಿ ಬಿಟ್ಟಿರಲಿಲ್ಲ. ಮತ್ತೆ ಮೂರನೇ ಬಾರಿ ಮನೆಯಿಂದ ಪರಾರಿಯಾಗಿದ್ದಾರೆ. 

ಜೇವರ್ಗಿ: ಕುಡಿದ ನಶೆಯಲ್ಲಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ.

ನಿಮ್ಮದೇ ಇಲಾಖೆಯಲ್ಲಿ ಕೆಲಸ ಮಾಡುವ ಪೇದೆಯ ವಿರುದ್ಧ ಕ್ರಮ ಕೈಗೊಂಡು ನನ್ನ ಪತ್ನಿಯನ್ನು ಹುಡುಕಿ ಕೊಡಿ ಎಂದು ಪತಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಪತ್ನಿಯೊಂದಿಗೆ ಇದ್ದ ಫೋಟೊ ಹಾಗೂ ವಿಡಿಯೋಗಳು ತನ್ನ ಬಳಿ ಇದೆ ಎಂದು ಬೆದರಿಸಿ ತನ್ನೊಂದಿಗೆ ಕರೆದೊಯ್ದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಚೇಂಬರ್‌ಲ್ಲೇ ಸಹೋದ್ಯೋಗಿಯೊಂದಿಗೆ ರೊಮ್ಯಾನ್ಸ್, ತಹಶೀಲ್ದಾರ್ ಕಿಸ್ಸಿಂಗ್ ವಿಡಿಯೋ ವೈರಲ್

"