ಧಾರವಾಡ(ಮಾ.09): ಪೊಲೀಸ್‌ ಪೇದೆ ಬಸ್‌ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಟ್ರಾಫಿಕ್ ಕ್ಲೀಯರ್ ಮಾಡುವ ಭರದಲ್ಲಿ ಬಸ್ ಚಾಲಕನ ಮೇಲೆ ಪೊಲೀಸ್ ಪೇದೆ ಲಾಠಿ ಬೀಸಿದ್ದಾರೆ.

ಪೊಲೀಸ್ ಪೇದೆಯಿಂದ ಬಸ್ ಚಾಲಕನ ಮೇಲೆ ಹಲ್ಲೆ ನಡೆದಿದ್ದು, ಲಾಠಿಯಿಂದ ಕೆಎಸ್‌ಆರ್‌ಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಿನ್ನೆ ಘಟನೆ ನಡೆದಿದೆ.

ಬಾಗಲಕೋಟೆಯಲ್ಲಿ ಕೊರೋನಾದಿಂದ 'ಕಾಮಣ್ಣ ಸಾವು'

ಪ್ರಹ್ಲಾದ ಜೋಶಿ ಮಹದಾಯಿ ರೈತರ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿನ್ನೆಲೆ ಟ್ರಾಫಿಕ್ ಕ್ಲೀಯರ್ ಮಾಡುವ ಭರದಲ್ಲಿ ಬಸ್ ಚಾಲಕ ಹಾಗೂ ಬಸ್‌ಗೆ ಲಾಠಿ‌ ಬೀಸಲಾಗಿದೆ.

ಪೊಲೀಸ್ ಲಾಠಿಯ ಹೊಡೆತಕ್ಕೆ ಬಸ್ ಗ್ಲಾಸ್ ಒಡೆದಿದ್ದು, ಬಸ್ ಗ್ಲಾಸ್ ಒಡೆದಿದ್ದಕ್ಕೆ ಬಸ್ ಚಾಲಕ ಪೊಲೀಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಪೊಲೀಸ್ ಹಾಗೂ ಬಸ್ ಚಾಲಕನ ನಡುವೆ ವಾಗ್ದಾಳಿ ನಡೆದಿದೆ.