‘ಐ ಲವ್ ತಾಲಿಬಾನ್’ ಎಂದವನ ಹೆಡೆಮುರಿ ಕಟ್ಟಿದ ಪೊಲೀಸರು
* ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದ್ದ ಘಟನೆ
* ಪೋಸ್ಟ್ ಬಳಿಕ ಪರಾರಿಯಾಗಿದ್ದ ಆರೋಪಿ
* ಆರೋಪಿ ವಿರುದ್ಧ ಮತೀಯಗಲಭೆ ಮತ್ತು ಪ್ರಚಾರ ಪ್ರಕರಣ ದಾಖಲು
ಜಮಖಂಡಿ(ಆ.21): ಆಷ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಹಿಂಸಾಚಾರ ನಡೆಸುತ್ತಿರುವ ತಾಲಿಬಾನ್ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಶುಕ್ರವಾರ ನಡೆದಿದೆ.
"
ಜಮಖಂಡಿಯ ಆಶೀಫ್ ಗಲಗಲಿ ಬಂಧಿತ ಆರೋಪಿ. ಈತ ‘ತಾಲಿಬಾನ್ ಐ ಲವ್’ ಎಂದು ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ. ಇದು ಜಾಲತಾಣದಲ್ಲಿ ಹರಿದಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆಶೀಫ್ ತಾಲಿಬಾನ್ ಪರ ಹಾಕಿದ್ದ ಪೋಸ್ಟ್ ಜನಾಕ್ರೋಶಕ್ಕೆ ಕಾರಣವಾಗಿದ್ದು ಆತನನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದರು.
ಐ ಲವ್ ಯು ತಾಲಿಬಾನ್: ಫೇಸ್‌ಬುಕ್‌ನಲ್ಲಿ ಉಗ್ರರ ಪರ ಪೋಸ್ಟ್ ಮಾಡಿದ ಜಮಖಂಡಿ ಯುವಕ
ಶುಕ್ರವಾರ ಬೆಳಗ್ಗೆಯಿಂದ ಆರೋಪಿ ಪರಾರಿಯಾಗಿದ್ದ. ನಂತರ ಪೊಲೀಸರು ಆರೋಪಿಯನ್ನು ಸಂಜೆ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಈತನ ವಿರುದ್ಧ ಜಮಖಂಡಿ ಶಹರ ಪೊಲೀಸ್ ಠಾಣೆಯಲ್ಲಿ 295(ಎ), 505(2) ಮತೀಯಗಲಭೆ ಮತ್ತು ಪ್ರಚಾರ ಪ್ರಕರಣ ದಾಖಲಾಗಿದೆ.