ವೇಶ್ಯಾವಾಟಿಕೆ ಮಾಡಿಸುವವರಿಂದಲೂ ಪೊಲೀಸರು ಹಣ ವಸೂಲಿ ಮಾಡ್ತಾರೆ: ಶಾಸಕ ಅರವಿಂದ ಬೆಲ್ಲದ

ಪೊಲೀಸ್ ಅಧಿಕಾರಿಗಳು ಕಳ್ಳ, ಕಾಕರಿಂದ, ಬಡ್ಡಿ ದಂಧೆಕೋರರಿಂದ ಹಾಗೂ ವೇಶ್ಯಾವಾಟಿಕೆ ಮಾಡಿಸುವವರಿಂದಲೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. 

Police also collect money from prostitutes Says  MLA Arvind Bellad gvd

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಆ.22): ಜಿಲ್ಲೆಯ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಒಟ್ಟು 25 ಬಡ್ಡಿ ದಂಧೆಕೋರರನ್ನ ಪೊಲೀಸ್ ಕಮಿಷನರ್ ಅವರು ಬಂಧಿಸಿದ್ದಾರೆ. ಧಾರವಾಡದಲ್ಲಿ ಕಳೆದ ಮೂರು ದಿನಗಳ ಹಿಂದೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದನ್ನ ಪೋಲಿಸರು ಬೆನ್ನತ್ತಿದ್ದಾಗ ಸುಮಾರು 25 ಜನರನ್ನ ಪೊಲೀಸ್ ಕಮಿಷನರ್ ಅವರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇನ್ನು ಧಾರವಾಡದ ಉಪನಗರ ಪೊಲೀಸ್ ಠಾಣೆ, ಧಾರವಾಡ ಶಹರ ಪೊಲೀಸ್ ಠಾಣೆ, ವಿದ್ಯಾಗಿರಿ ಪೊಲೀಸ್ ಠಾಣೆ, ಬೆಂಡಿಗೇರಿ ಪೊಲೀಸ್ ಠಾಣೆ ಸೇರಿದಂತೆ ನಾಲ್ಕು ಠಾಣೆಗಳಲ್ಲಿ ಬರೊಬ್ಬರು 25 ಜನರನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.. ಹಣ ಕೊಟ್ಟು ವರ್ಗಾವಣೆ ಮಾಡಿಕೊಂಡು ಬಂದ ಪೊಲೀಸ್ ಅಧಿಕಾರಿಗಳು ಕಳ್ಳ, ಕಾಕರಿಂದ, ಬಡ್ಡಿ ದಂಧೆಕೋರರಿಂದ ಹಾಗೂ ವೇಶ್ಯಾವಾಟಿಕೆ ಮಾಡಿಸುವವರಿಂದಲೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ಧಾರವಾಡದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಅಪರಾಧ ಕೃತ್ಯಗಳು ಆಗಲು ಎರಡು ಕಾರಣಗಳಿವೆ. ಒಬ್ಬರು ಹುಟ್ಟುತ್ತಲೇ ಕ್ರೈಂ ಮಾಡಿಕೊಂಡು ಬಂದವರು ಮತ್ತೊಬ್ಬರು ಬಡ್ಡಿ ದಂಧೆಕೋರರಿಂದ ಕ್ರೈಂಗಳು ಆಗುತ್ತಿವೆ ಬಡ್ಡಿ ದಂಧೆ ಮಾಡುವವರು ಫೈನಾನ್ಸ್ ಕಂಪೆನಿಯಿಂದ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಫೈನಾನ್ಸ್ ಕಂಪೆನಿಗಳು ಸರ್ಕಾರದಿಂದ ಇಂತಿಷ್ಟೆ ಬಡ್ಡಿ ವಸೂಲಿ ಮಾಡಬೇಕು ಎಂಬ ನಿಯಮ ಹೇರುತ್ತದೆ. ಆದರೆ ಅವಳಿನಗರದಲ್ಲಿ ಕಾನೂನು ಬಾಹಿರ ಬಡ್ಡಿ ದಂಧೆ ನಡೆಯುತ್ತಿದೆ ಎಂದರು. ಪೊಲೀಸರು ಕೂಡ ಬಡ್ಡಿ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ. ದಂಧೆಕೋರರು ಬಡ್ಡಿ, ಚಕ್ರಬಡ್ಡಿ ಸಹಿತ ಸುಲಿಗೆ ಮಾಡುತ್ತಿದ್ದಾರೆ.

ಸಿದ್ದರಾಮಯ್ಯನವರೇ 40 ವರ್ಷದ ನಿಮ್ಮ ರಾಜಕೀಯ ಜೀವನದ ಕಪ್ಪುಚುಕ್ಕೆಯನ್ನು ವೈಟ್ನರ್ ಅಳಿಸೀತಾ?: ಎಚ್‌ಡಿಕೆ

ಸಾಲ ಕೊಟ್ಟವರು ಸಾಲ ವಸೂಲಿ ಮಾಡಲು ಅಟ್ಯಾಕ್ ಮಾಡುವ ಕೆಲಸಕ್ಕೆ ಇಳಿಯುತ್ತಾರೆ. ಡ್ರಗ್ಸ್ ಸೇವಿಸಿ ಕೊಲೆ, ಸುಲಿಗೆ ಮಾಡಲು ಇಳಿಯುತ್ತಿದ್ದಾರೆ ಎಂದರು. ಪೊಲೀಸ್ ಇಲಾಖೆ ಇದನ್ನು ತಡೆಗಟ್ಟುವ ಕೆಲಸವನ್ನು ಸಮರ್ಪಕವಾಗಿ ಮಾಡಬೇಕು. ಸರ್ಕಾರ ಪೊಲೀಸ್ ಅಧಿಕಾರಿಗಳಿಂದ ದುಡ್ಡು ಪಡೆದು ವರ್ಗಾವಣೆ ಮಾಡಿದರೆ, ಪೊಲೀಸರು ಕಳ್ಳರು, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರಿಂದ, ಬಡ್ಡಿ ದಂಧೆಕೋರರ ಕಡೆಯಿಂದ, ವೇಶ್ಯಾವಾಟಿಕೆ ಮಾಡಿಸುವವರಿಂದ ಹಣ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗಳಲ್ಲೂ ಜನ ವಿರೋಧಿ ಕೆಲಸಗಳು ಹೆಚ್ಚಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣವೇ ವರ್ಗಾವಣೆ ದಂಧೆ ಎಂದರು.

Latest Videos
Follow Us:
Download App:
  • android
  • ios