30ಕ್ಕೂ ಹೆಚ್ಚು ಗ್ರಂಥಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಗೋಗೇರಿ| ಸುಶ್ರಾವ್ಯವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಹಾಸ್ಯಕವಿ| ಕಳೆದ 35 ವರ್ಷಗಳಿಂದ ಹಾಸ್ಯ, ವಿನೋದ, ವ್ಯಂಗ್ಯ ವಿಡಂಬನೆಯ ಲೇಖನಗಳನ್ನು ಬರೆದು ಹೆಸರುವಾಸಿಯಾಗಿದ್ದ ಗೋಗೇರಿ|
ಹುಬ್ಬಳ್ಳಿ(ಏ.26): ಹಾಸ್ಯಕವಿ, ಪ್ರಬಂಧಕಾರ, ನಿವೃತ್ತ ಶಿಕ್ಷಕ ಎಂ.ಡಿ. ಗೋಗೇರಿ (80) ಭಾನುವಾರ ಬೆಳಗಿನ ಜಾವ ಇಲ್ಲಿನ ನವ ಅಯೋಧ್ಯಾನಗರದ ತಮ್ಮ ನಿವಾಸದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ (ಈಗಿನ ಗಜೇಂದ್ರಗಡ ತಾಲೂಕು) ಗೋಗೇರಿ ಗ್ರಾಮದವರು. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಗೋಗೇರಿ ಅವರು ಕಳೆದ ಹಲವಾರು ದಶಕಗಳಿಂದ ನವ ಅಯೋಧ್ಯಾನಗರದಲ್ಲಿ ನೆಲೆಸಿದ್ದರು.
ಕೊರೋನಾ ಸೋಂಕಿನಿಂದ ಸಂಗೀತ ಗಾಯಕ, ಪದ್ಮಭೂಷಣ್ ರಾಜನ್ ಮಿಶ್ರಾ ನಿಧನ!
30ಕ್ಕೂ ಹೆಚ್ಚು ಗ್ರಂಥಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಗೋಗೇರಿ, ಸುಶ್ರಾವ್ಯವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಕಳೆದ 35 ವರ್ಷಗಳಿಂದ ಹಾಸ್ಯ, ವಿನೋದ, ವ್ಯಂಗ್ಯ ವಿಡಂಬನೆಯ ಲೇಖನಗಳನ್ನು ಬರೆದು ಹೆಸರುವಾಸಿಯಾಗಿದ್ದರು.
ಪುರುಷ ಶೋಷಣೆ, ನಮಸ್ಕಾರ, ಪತ್ನಿಯರ ಸಂದರ್ಶನ ಸೇರಿದಂತೆ ಹಲವಾರು ಪ್ರಮುಖ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಭಾವಸಂಗಮ, ಇದೋ ಕರ್ನಾಟಕ, ತಾಯಿಯ ಉಡಿಯಲ್ಲಿ, ದ್ರಾಕ್ಷಿ ಗೊಂಚಲು, ಚುನಾವಣೆಗೆ ನಿಂತ, ನಾವು ಸರ್ವಸ್ವತಂತ್ರರು ಸೇರಿದಂತೆ 13 ಕವನ ಸಂಗ್ರಹಗಳನ್ನು ಪ್ರಕಟಿಸಿದ ಹಿರಿಮೆ ಗೋಗೇರಿ ಅವರದು.
