Asianet Suvarna News Asianet Suvarna News

ಹೋಂ ಕ್ವಾರಂಟೈನ್‌; ಊಟಕ್ಕೂ ಪರ​ದಾಟ

ಕೊ​ರೋನಾ ಪಾಸಿ​ಟಿವ್‌ ಬಂದಿದ್ದ ಹಿನ್ನೆ​ಲೆ​ಯಲ್ಲಿ ತಾಲೂಕು ಆಡ​ಳಿ​ತ​ದಿಂದ ಕಂಟೈ​ನ್‌​ಮೆಂಟ್‌ ಝೋನ್‌​ಗ​ಳನ್ನು ಸೀಲ್‌ಡೌನ್‌ ಮಾಡ​ಲಾ​ಗಿದ್ದು, ಸೋಂಕಿ​ತರ ಸಂಪ​ಕ​ರ್‍ದಲ್ಲಿದ್ದವರನ್ನು ಈಗಾ​ಗಲೇ ಗೃಹ ಬಂಧ​ನ​ಲ್ಲಿ​ಡ​ಲಾ​ಗಿ​ದೆ. ​ಇ​ದ​ರಿಂದ ಒಪ್ಪ​ತ್ತಿನ ಊಟಕ್ಕೂ ಪರ​ದಾಡುವ ಸ್ಥಿತಿ ನಿಮಾ​ರ್‍ಣವಾ​ಗಿದೆ. ​ತಾಲೂಕು ಆಡ​ಳಿತ ಸ್ಪಂದಿ​ಸು​ತ್ತಿ​ಲ್ಲ​ವೆಂದು ಕ್ವಾರಂಟೈ​ನ​ಲ್ಲಿದ್ದ ಹಲ​ವಾರು ಬಡ ಕುಟುಂಬ​ದ ಸದಸ್ಯರು ಅಳಲು ತೋಡಿ​ಕೊಂಡಿ​ದ್ದಾ​ರೆ.

Poeple face problem to get lunch as they were home quarantined
Author
Bangalore, First Published Jun 28, 2020, 10:05 AM IST

ಪಾವ​ಗಡ(ಜೂ.28): ಕೊ​ರೋನಾ ಪಾಸಿ​ಟಿವ್‌ ಬಂದಿದ್ದ ಹಿನ್ನೆ​ಲೆ​ಯಲ್ಲಿ ತಾಲೂಕು ಆಡ​ಳಿ​ತ​ದಿಂದ ಕಂಟೈ​ನ್‌​ಮೆಂಟ್‌ ಝೋನ್‌​ಗ​ಳನ್ನು ಸೀಲ್‌ಡೌನ್‌ ಮಾಡ​ಲಾ​ಗಿದ್ದು, ಸೋಂಕಿ​ತರ ಸಂಪ​ಕ​ರ್‍ದಲ್ಲಿದ್ದವರನ್ನು ಈಗಾ​ಗಲೇ ಗೃಹ ಬಂಧ​ನ​ಲ್ಲಿ​ಡ​ಲಾ​ಗಿ​ದೆ. ​ಇ​ದ​ರಿಂದ ಒಪ್ಪ​ತ್ತಿನ ಊಟಕ್ಕೂ ಪರ​ದಾಡುವ ಸ್ಥಿತಿ ನಿಮಾ​ರ್‍ಣವಾ​ಗಿದೆ. ​ತಾಲೂಕು ಆಡ​ಳಿತ ಸ್ಪಂದಿ​ಸು​ತ್ತಿ​ಲ್ಲ​ವೆಂದು ಕ್ವಾರಂಟೈ​ನ​ಲ್ಲಿದ್ದ ಹಲ​ವಾರು ಬಡ ಕುಟುಂಬ​ದ ಸದಸ್ಯರು ಅಳಲು ತೋಡಿ​ಕೊಂಡಿ​ದ್ದಾ​ರೆ.

ಇತ್ತೀ​ಚೆ​ಗಷ್ಟೆವಿಷಮ ಶೀತ ಜ್ವರ (ಐಎ​ಲ್‌ಐ) ಹಾಗೂ ಉಸಿ​ರಾ​ಟದ ತೊಂದರೆ (ಸಾರಿ) ಸಮಸ್ಯೆ ಹಿನ್ನೆ​ಲೆ​ಯಲ್ಲಿ ಇಲ್ಲಿನ ಸಕಾ​ರ್‍ರಿ ಆಸ್ಪ​ತ್ರೆಗೆ ತೆರಳಿ ಚಿಕಿತ್ಸೆ ಪಡೆ​ದಿದ್ದ ತಾಲೂ​ಕಿನ ಕಣಿ​ವೇ​ನ​ಹಳ್ಳಿ ತಾಂಡ, ಮದ್ದಿ​ಬಂಡೆ ಶಾಂತಿ ಮತ್ತು ವಿನಾ​ಯಕ ನಗ​ರ​ಗಳ ವಾಸಿ ಸೇರಿ​ದಂತೆ ತಾಲೂ​ಕಿನ ನಾಲ್ಕು ಮಂದಿಗೆ ಪ್ರಾಥ​ಮಿಕ ವರ​ದಿ​ಯಲ್ಲಿ ಕೊರೋನಾ ಪಾಸಿ​ಟಿವ್‌ ಲಕ್ಷಣ ಕಂಡು ಬಂದಿ​ದೆ.

ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸ್ಫೋಟ: ಬೆಚ್ಚಿಬಿದ್ದ ಜನತೆ

ಈ ಹಿನ್ನೆ​ಲೆ​ಯಲ್ಲಿ ಜಿಲ್ಲಾ​ಧಿ​ಕಾ​ರಿ​ಗಳ ಸೂಚನೆ ಮೇರೆಗೆ ಸಜ್ಜಾದ ತಾಲೂಕು ಆಡ​ಳಿತ ಜೂ.26ರಂದು ಈ ನಾಲ್ಕು ಮಂದಿ ಸೋಂಕಿ​ತ​ರನ್ನು ಪತ್ತೆ ಹಚ್ಚಿ ಹೆಚ್ಚಿನ ಚಿಕಿ​ತ್ಸೆ​ಗಾಗಿ ತುಮ​ಕೂರು ಕೊವಿಡ್‌ ಆಸ್ಪ​ತ್ರೆಗೆ ಸಾಗಿ​ಸ​ಲಾ​ಯಿ​ತು. ​ಬ​ಳಿಕ ಸೋಂಕಿ​ತರು ವಾಸ​ವಿ​ದ್ದ ಪ್ರದೇ​ಶ​ಗ​ಳನ್ನು ಗುತಿ​ರ್‍ಸಿ ಕಂಟೈ​ನ್‌​ಮೆಂಟ್‌ ಝೋನ್‌​ಗ​ಳಿಗೆ ಸೀಲ್‌ಡೌನ್‌ ಮಾಡ​ಲಾ​ಗಿದೆ.

ಇವರ ಟ್ರಾವೆ​ಲಿಂಗ್‌ ಇಸ್ಟ​ರಿ ಕಲೆ​ಹಾಕಿದ್ದಾರೆ. ಪಟ್ಟ​ಣದ 11ನೇ ವಾಡ್‌​ರ್‍ ಸೋಂಕಿ​ತನ ಮನೆ ಹಾಗೂ ಸುತ್ತಮುತ್ತ ಪ್ರದೇಶ ಸಂಪೂ​ಣ​ರ್‍ ಸೀಲ್‌ಡೌನ್‌ ಮಾಡಿದ್ದು, ಪಟ್ಟಣದ ಶಾಂತಿ ನಗರ ಹಾಗೂ ಅಪ್‌​ಬಂಡೆ ಸೇರಿ​ದಂತೆ ಕಣಿ​ವೇ​ನ​ಹಳ್ಳಿ ತಾಂಡ ಮತ್ತು ಮದ್ದಿ​ಬಂಡೆ ಗ್ರಾಮದ ಕಂಟೈನ್‌ಮೆಂಟ್‌ ಪ್ರದೇ​ಶ​ಗ​ಳಿಗೆ ಬೇಲಿ ಹಾಕಲಾಗಿದೆ.

ಬಳ್ಳಾರಿ: ಕೊರೋನಾಗೆ ಮತ್ತೊಂದು ಬಲಿ, ಒಂದೇ ದಿನ ಹೊಸ 47 ಪಾಸಿಟಿವ್‌ ಕೇಸ್‌

ಸೋಂಕಿ​ತರ ಸಂಪ​ಕ​ರ್‍ದಲ್ಲಿದ್ದ ಕುಟುಂಬ​ಗ​ಳನ್ನು ಹೋಂ ಕ್ವಾರಂಟೈನ್‌ ಮಾಡ​ಲಾ​ಗಿದೆ.​ಕೂಲಿ​ ಮಾಡಿ ಹೊಟ್ಟೆತುಂಬಿ​ಸಿ​ಕೊ​ಳ್ಳು​ತ್ತಿದ್ದ ಕುಟುಂಬ​ಗ​ಳನ್ನು ಗೃಹ ಬಂಧ​ನ​ದ​ಲ್ಲಿ​ರಿ​ಸುವ ಕಾರಣ ಜೀವ​ನೋ​ಪ​ಯ​ಕ್ಕಾಗಿ ತೀವ್ರ ಪರ​ದಾಟ ನಡೆ​ಸುವ ಅನಿ​ವಾ​ರ್‍ತೆ ಸೃಷ್ಟಿ​ಯಾ​ಗಿ​ದೆ. ಇದ​ರಿಂದ ಹಲ​ವಾರು ಬಾರಿ ಮನವಿ ಮಾಡಿ​ಕೊಂಡರೂ ನೀವು ಹಣ ನೀಡಿ​ದರೆ ಮಾತ್ರ ನಿಮಗೆ ಅಗತ್ಯ ವಸ್ತು​ಗಳ ಪೂರೈ​ಕೆಗೆ ಅವ​ಕಾ​ಶ​ವಿದೆ ಎಂದು ಹೇಳಿ ತಾಲೂಕು ಆಡಳಿತ ಕೈಚೆ​ಲ್ಲಿ​ರು​ವು​ದಾಗಿ ಅಳಲು ತೋಡಿ​ಕೊಂಡಿ​ದ್ದಾ​ರೆ.

ಈ ಕುರಿತು ಕಣಿ​ವೇ​ನ​ಹಳ್ಳಿ ತಾಂಡದ ಶಂಕ​ರ​ನಾ​ಯಕ್‌ ಮಾತ​ನಾಡಿ, ಗ್ರಾಮದಲ್ಲಿ 20ಕ್ಕೂ ಹೆಚ್ಚು ಕುಟುಂಬ​ಗ​ಳನ್ನು ಹೋಂ ಕ್ವಾರಂಟೈನ್‌ ಮಾಡ​ಲಾ​ಗಿ​ದೆ. ಈ ಎಲ್ಲಾ ಕುಟುಂಬ​ಗಳು ಕೂಲಿ​ಯಿಂದ ಜೀವನ ಸಾಗಿ​ಸು​ತ್ತಿದ್ದು, ಕ್ವಾರಂಟೈನ್‌ ಮಾಡಿದ ಕಾರಣ ಒಪ್ಪ​ತ್ತಿನ ಊಟ ಮತ್ತು ಇತರೆ ದಿನ​ವಾಹಿ ಕೃಷಿಯಂತ ಚಟ​ವ​ಟಿಕೆ ನಿವಾ​ರ​ಣೆಗೆ ಸಮ​ಸ್ಯೆ​ಯಾ​ಗಿ​ದೆ ಎಂದರು.

Follow Us:
Download App:
  • android
  • ios