Asianet Suvarna News Asianet Suvarna News

ಕವಿತೆಗಳು ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತದೆ : ಲೇಖಕಿ ಡಾ.ಶೈಲಾನಾಗರಾಜು

ಕವಿತೆ ನಮ್ಮೊಳಗಿನ ಬೆಳಕಾಗಬೇಕು ಮನುಷ್ಯತ್ವದ ಸೆಲೆಯಾದಾಗ ಬರೆಯುವ ಕವಿತೆಗಳಿಗೆ ಮಹತ್ವ ಬರುತ್ತದೆ. ನಮ್ಮಲ್ಲಿರುವ ತವಕ ತಲ್ಲಣಗಳಿಗೆ ಅಕ್ಷರರೂಪ ನೀಡಿದಾಗ ಮನಸ್ಸು ನಿರಾಳವಾಗುತ್ತದೆ. ಕವಿತೆಗಳು ಕತ್ತಲೆಯನ್ನು ಕಳೆದು ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ಎಂದು ಲೇಖಕಿ ಡಾ.ಶೈಲಾನಾಗರಾಜು ಹೇಳಿದರು.

Poems take us to the light : Author Dr. Shailanagaraju snr
Author
First Published Oct 21, 2023, 8:24 AM IST

  ಶಿರಾ:  ಕವಿತೆ ನಮ್ಮೊಳಗಿನ ಬೆಳಕಾಗಬೇಕು ಮನುಷ್ಯತ್ವದ ಸೆಲೆಯಾದಾಗ ಬರೆಯುವ ಕವಿತೆಗಳಿಗೆ ಮಹತ್ವ ಬರುತ್ತದೆ. ನಮ್ಮಲ್ಲಿರುವ ತವಕ ತಲ್ಲಣಗಳಿಗೆ ಅಕ್ಷರರೂಪ ನೀಡಿದಾಗ ಮನಸ್ಸು ನಿರಾಳವಾಗುತ್ತದೆ. ಕವಿತೆಗಳು ಕತ್ತಲೆಯನ್ನು ಕಳೆದು ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ಎಂದು ಲೇಖಕಿ ಡಾ.ಶೈಲಾನಾಗರಾಜು ಹೇಳಿದರು.

ಅವರು ನಾಡೋಜ ಬರಗೂರು ಮೇಷ್ಟ್ರು ಬಳಗ ಹಾಗೂ ಶಿರಾ ತಾಲೂಕು ಕಸಾಪ ವತಿಯಿಂದ ನಗರದ ಆರ್.ಮುದ್ದುರಂಗೇಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರೊ. ನಾಡೋಜ ಬರಗೂರು ರಾಮಚಂದ್ರಪ್ಪ ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಮಾತನಾಡಿದರು. ಕವಿತೆಗಳು ಬದುಕಿನ ಮೌಲ್ಯಗಳನ್ನು ತೆರೆದಿಡುತ್ತವೆ. ಸಾರ್ವಜನಿಕ ಬದುಕಿನ ಎಲ್ಲಾ ಮಜಲುಗಳನ್ನು ಕವನಗಳಲ್ಲಿ ಹಿಡಿದಿಡುವ ಮೂಲಕ ಸಾಮಾಜಿಕ ಬದಲಾವಣೆಯ ಸಂದೇಶ ನೀಡುವ ಬದ್ಧತೆಯನ್ನು ಕವಿಗಳು ತೋರಬೇಕು ಎಂದರು.

ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಮಾತನಾಡಿ, ಬರದ ನಾಡಿನಲ್ಲಿ ಜನಿಸಿದ ಬರಗೂರು ರಾಮಚಂದ್ರಪ್ಪ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದ್ದರೂ ನೆಲಮುಟ್ಟಿದ ನಿಜದ ಪ್ರೀತಿಯ ಮನುಷ್ಯ ಅವರು ಬೆವರು ನನ್ನದೇವರು ಎಂದು ಹೇಳುತ್ತಲೇ ಕಾಗೆ ಕಾರುಣ್ಯದ ಕಣ್ಣು ಎನ್ನುವ ಮೂಲಕ ಕಾಗೆಗಿರುವ ಮಹತ್ವ ತಿಳಿಸಿ ನಮ್ಮೆಲ್ಲರೊಳಗೆ ಅರಿವಿನ ಪ್ರಜ್ಞೆ ಬೆಳಗಿಸಿ ಎಲ್ಲರ ಮನದಾಳದಲ್ಲಿ ಪ್ರೀತಿವಿಶ್ವಾಸವನ್ನು ಗಳಿಸಿದ ಹೆಮ್ಮೆಯ ಮೇಷ್ಟ್ರು ಬರಗೂರು ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಡಾ. ತಿಮ್ಮನಹಳ್ಳಿ ವೇಣು ಗೋಪಾಲ್ ಮಾತನಾಡಿ, ಕವಿಗಳು ಸಾರ್ವಜನಿಕ ಬದುಕಿನ ಆಗುಹೋಗು ಗ್ರಹಿಸಿ ವೈಯಕ್ತಿಕ ಬದುಕು ಮತ್ತು ಸಾರ್ವಜನಿಕ ಬದುಕು ಹಸನಾಗುವಲ್ಲಿ ಕವಿತೆಗಳನ್ನ ರಚಿಸಬೇಕಾಗುತ್ತದೆ. ಆಗ ಮಾನವೀಯ ಮೌಲ್ಯಗಳನ್ನು ಉಳಿಸಿದಂತಾಗುತ್ತದೆ ಎಂದರು.

ಆರ್.ಮುದ್ದುರಂಗೇಗೌಡ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಎಂ.ರಂಗನಾಥ್ ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರು ಈ ನಾಡು ಕಂಡ ಹೆಸರಾಂತ ಸಾಹಿತಿಗಳು, ಸಾಂಸ್ಕೃತಿಕ ರಾಯಭಾರಿಗಳು. ಸಾಹಿತ್ಯ ಹಾಗೂ ಚಲನಚಿತ್ರಗಳ ಮೂಲಕ ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಬರಗೂರರು ನೂರಾರು ವರ್ಷ ಬಾಳಲಿ ಅವರ 101ನೇ ವರ್ಷದ ಜನ್ಮದಿನವನ್ನುನಮ್ಮ ಶಿಕ್ಷಣ ಸಂಸ್ಥೆಯಲ್ಲಿಯೇ ಅವರೊಟ್ಟಿಗೆ ಆಚರಿಸೋಣ ಎಂದರು.

ಕಾರ್ಯಕ್ರಮದಲ್ಲಿ 21 ಜನ ಕವಿಗಳು ಭಾಗವಹಿಸಿ ತಮ್ಮ ಕವಿತೆಗಳನ್ನು ವಾಚಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ಪಿ.ಹೆಚ್. ಮಹೇಂದ್ರಪ್ಪ, ಮಾಜಿ ಕಸಾಪ ಅಧ್ಯಕ್ಷ ವೈ. ನರೇಶ್‌ ಬಾಬು, ಪಾಂಡುರಂಗಪ್ಪ ಬಿ.ಎಸ್., ಬರಗೂರು ಮೇಷ್ಟ್ರು ಬಳಗದ ರೂಪೇಶ್‌ ಕೃಷ್ಣಯ್ಯ, ಜಯರಾಮಕೃಷ್ಣಪ್ಪ, ಶಿವಣ್ಣ ಹೆಂದೊರೆ, ಮುಖ್ಯಶಿಕ್ಷಕಿ ಪುಟ್ಟತಾಯಮ್ಮ, ರಂಗರಾಜು, ಧರಣಿಕುಮಾರ್, ಸಕ್ಕರೆ ನಾಗರಾಜು, ಡಿ.ಎಸ್.ಕೃಷ್ಣಮೂರ್ತಿ, ರೇವಣಸಿದ್ದಪ್ಪ, ಉಪನ್ಯಾಸಕ ರವಿಚಂದ್ರ.ಸಿ. ಹಾಗೂ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

Follow Us:
Download App:
  • android
  • ios