ಮಂಗಳೂರು(ಜ.05): ಪ್ರಧಾನಿ ನರೇಂದ್ರ ಮೋದಿ ಆನ್ ಲೈನ್ ಮೂಲಕ ಕೊಚ್ಚಿ ಮಂಗಳೂರು ನೈಸರ್ಗಿಕ ಅನಿಲ ಸರಬರಾಜು ಯೋಜನೆ ಲೋಕಾರ್ಪಣೆ ಮಾಡಿದ್ದಾರೆ. ಮಂಗಳೂರಿನ ರಸಗೊಬ್ಬರ ಕಾರ್ಖಾನೆ ಎಂ.ಸಿ.ಎಫ್ ನಲ್ಲಿಯು ಕಾರ್ಯಕ್ರಮ ನಡೆದಿದೆ.

ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು. ಸದ್ಯ ಮಂಗಳೂರಿನಲ್ಲಿ ಎಂ.ಸಿ.ಎಫ್ ಕಾರ್ಖಾನೆ ಗ್ಯಾಸ್ ಸಂಪರ್ಕ ಪಡೆದುಕೊಂಡಿದ್ದು ಮುಂದೆ ಎಂ.ಆರ್.ಪಿ‌ಎಲ್ ಮತ್ತು ಒ.ಎಂ.ಪಿ.ಎಲ್ ಗೂ ಗ್ಯಾಸ್ ಸಂಪರ್ಕ ಸಿಗಲಿದೆ.

5150 ಶಿಕ್ಷಕರಿಗೆ ಕೊರೊನಾ ಟೆಸ್ಟ್:18 ಜನಕ್ಕೆ ಪಾಸೆಟಿವ್, ಕಡೋಲಿ ಸರ್ಕಾರಿ ಶಾಲೆ ಬಂದ್

ಒಟ್ಟು 450 ಕಿ.ಮೀ ಉದ್ದದ ಪೈಪ್ ಲೈನ್ ಕಾಮಗಾರಿ ನಡೆದಿದ್ದು, ಕೇರಳದ ಕೊಚ್ಚಿಯಿಂದ ಕರ್ನಾಟಕದ ಮಂಗಳೂರುವರೆಗೆ ಗ್ಯಾಸ್ ಪೈಪ್ ಲೈನ್ ಮಾಡಲಾಗಿದೆ. ಇದು ಸುಮಾರು 3000 ಕೋಟಿ ರೂ ವೆಚ್ಚದ ಯೋಜನೆಯಾಗಿದೆ.

ಪ್ರತಿನಿತ್ಯ 12ದಶಲಕ್ಷ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ಅನಿಲ ಸಾಗಿಸುವ ಸಾಮಾರ್ಥ್ಯ ಹೊಂದಿದ್ದು, ವರ್ಷಾಂತ್ಯದೊಳಗೆ ನಗರದ ಮನೆ ಮನೆಗಳಿಗೆ ಅಡುಗೆ ಅನಿಲ‌ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ