ಪ್ರಧಾನಿ ಮೋದಿಯಿಂದ ಜ.1ರಂದು ಧಾರವಾಡ ಐಐಟಿ ಉದ್ಘಾಟನೆ: ಪ್ರಲ್ಹಾದ ಜೋಶಿ
ಧಾರವಾಡದಲ್ಲಿ ನಿರ್ಮಿಸಲಾಗಿರುವ ಐಐಟಿ ನೂತನ ಕಟ್ಟಡವನ್ನು ಜನವರಿ 1 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲು ಅಗತ್ಯ ಸಿದ್ದತೆ ಮಾಡಕೊಳ್ಳಲಾಗುತ್ತಿದೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾ ನೆಟ್ ಸುವರ್ಣ ನ್ಯೂಸ್
ಧಾರವಾಡ (ಡಿ.10) : ಧಾರವಾಡದಲ್ಲಿ ನಿರ್ಮಿಸಲಾಗಿರುವ ಐಐಟಿ ನೂತನ ಕಟ್ಟಡವನ್ನು ಜನವರಿ 1 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲು ಅಗತ್ಯ ಸಿದ್ದತೆ ಮಾಡಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಗಣಿ, ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿರುವ ಧಾರವಾಡ ಐಐಟಿ ನೂತನ ಕಟ್ಟಡದ ಕಾಮಗಾರಿಯನ್ನು ಇಂದು ಮಧ್ಯಾಹ್ನ ಪರಿಶೀಲನೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಪ್ರಧಾನಮಂತ್ರಿ ಮೋದಿ ಅವರನ್ನು ಧಾರವಾಡ ಐಐಟಿ ನೂತನ ಕಟ್ಟಡ ಉದ್ಘಾಟನೆಗೆ ಆಹ್ವಾನಿಸುವ ಕುರಿತು ಈಗಾಗಲೇ ಚರ್ಚಿಸಲಾಗಿದೆ. ಇದಕ್ಕೆ ಪ್ರಧಾನಿಗಳು ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ವಾರ ಇನ್ನೊಮ್ಮೆ ಕಟ್ಟಡ ಕಾಮಗಾರಿ ನೋಡಿಕೊಂಡು ಉದ್ಘಾಟನೆ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಜನವರಿ ತಿಂಗಳಲ್ಲಿ ಪ್ರಧಾನಮಂತ್ರಿ ಮೋದಿ ಅವರು ರಾಜ್ಯಕ್ಕೆ ಎರಡು-ಮೂರು ಬಾರಿ ವಿವಿಧ ಕಾರ್ಯಕ್ರಮಗಳಿಗಾಗಿ ಆಗಮಿಸಲಿದ್ದಾರೆ. ಆದರೂ ಜನವರಿ 1 ರಂದು ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ. ಈ ಸಂದರ್ಭದಲ್ಲಿ ಶಾಸಕ ಅಮೃತ ದೇಸಾಯಿ, ಜಿಕ್ಲಾಧಿಕಾರಿ ಗುರುದತ್ತ ಹೆಗಡೆ, ಧಾರವಾಡ ಐಐಟಿ ನೂತನ ನಿರ್ದೇಶಕ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ತಹಸಿಲ್ದಾರ ಸಂತೋಷ ಹಿರೇಮಠ,ಧಾರವಾಡ ಐಐಟಿ ಪ್ರಾಧ್ಯಾಪಕರು, ಕಟ್ಟಡ ಗುತ್ತಿಗೆದಾರರು ಉಪಸ್ಥಿತರಿದ್ದರು.
ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ, ಕರ್ನಾಟಕದಲ್ಲಿ ಪ್ರಥಮ ಆದ್ಯತೆ ಕನ್ನಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ: ಐಐಟಿ ಕಾಲೇಜು ಕಟ್ಟಡ ಪರಿಶೀಲನೆ ವೇಳೆ ಮುಂದಿನ ವರ್ಷದ ಮೊದಲ ದಿನವೇ ಕಟ್ಟಡ ಉದ್ಘಾಟನೆ ಮಾಡುವ ಉದ್ದೇಶವಿದೆ. ಇದನ್ನು ಸ್ವತಃ ನರೇಂದ್ರ ಮೋದಿ ಅವರು ಉದ್ಘಾಟಿಸುವ ಭರವಸೆಯನ್ನೂ ನಿಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಕಿ ಕಾಮಗಾರಿಯನ್ನು ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಬೇಕು. ಈ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳಿಗೆ, ಗುತ್ತಿಗೆದಾರರು ಮುಂದೆ ನಿಂತುಕೊಂಡು ಕೆಲಸ ಮಾಡಿಸಬೇಕು. ಮತ್ತೊಮ್ಮೆ ಬಂದು ಕಾಮಗಾರಿ ವೀಕ್ಷಿಸಿ ಉದ್ಘಾಟನೆ ದಿನಾಂಕ ಫೈನಲ್ ಮಾಡಲಾಗುತ್ತದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.