ಕೋಲಾರ (ಡಿ.04) :  ಕೆಜಿಎಫ್‌ನಲ್ಲಿ ಮುಚ್ಚಿದ್ದ ಚಿನ್ನದ ಗಣಿಯಹನ್ನು ಪುನರಾರಂಭಿಸಲು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾವು ಸಂಸದರಾಗಿ ಚುನಾಯಿತರಾದ ಮೇಲೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮುಚ್ಚಿರುವ ಬಿಜಿಎಂಎಲ್‌ ಪುನರಾರಂಭಿಸುವಂತೆ ಮನವಿ ಸಲ್ಲಿಸಿದ್ದೆ.

 ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಪ್ರಯತ್ನ, ಗಣಿ ಪುನರಾರಂಭಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಯಥೇಚ್ಛವಾಗಿ ಚಿನ್ನವನ್ನು ಪಡೆಯಬಹುದು ಎಂಬುದನ್ನು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಪ್ರಧಾನಿಗಳು ಗಣಿ ಪುನರ್‌ ಆರಂಭಕ್ಕೆ ಗ್ರೀನ್‌ ಸಿಗ್ನಲ್‌ ನೀಡುವ ಮೂಲಕ ಕೊಟ್ಟಮಾತಿನಂತೆ ನಡೆದುಕೊಂಡಿದ್ದಾರೆ ಎಂದರು.

ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು: ಹುಬ್ಬಳ್ಳಿಯಲ್ಲಿ ಬೃಹತ್‌ ಪ್ರತಿಭಟನೆ

ಪ್ರಧಾನಿಗಳು ಆತ್ಮನಿರ್ಭರ ಭಾರತಕ್ಕೆ ಕರೆ ನೀಡಿರುವುದರಿಂದ ಹೊರ ದೇಶಗಳಿಂದ ಆಮದು ಕಡಿಮೆಗೊಳಿಸಬೇಕಿದೆ. ದೇಶದಲ್ಲಿ ಎಲ್ಲ ಸಂಪತ್ತು ಇದೆ. 

2001ರಲ್ಲಿ ಮುಚ್ಚಿದ್ದ ಜಿಎಂಎಲ್‌ ಅನ್ನು ಪುನರ್‌ ಆರಂಭಿಸುವುದರಿಂದ ಸಾವಿರಾರು ಕೈಗಳಿಗೆ ಕೆಲಸ ಸಿಗುತ್ತದೆ. ಇದು ಕ್ಷೇತ್ರದ ಸೌಭಾಗ್ಯ. ಪ್ರಧಾನಿ ಮೋದಿ, ಸಚಿವ ಪ್ರಹ್ಲಾದ ಜೋಷಿ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.