Asianet Suvarna News Asianet Suvarna News

Mysuru : ರಿಕ್ರಿಯೇಷನ್‌ ಕ್ಲಬ್‌ಗಳಲ್ಲಿ ಪ್ಲೇಯಿಂಗ್‌ ಕಾರ್ಡ್‌ ಆಡದಂತೆ ಪೊಲೀಸರ ಕಟ್ಟಪ್ಪಣೆ

ಪಟ್ಟಣದಲ್ಲಿರುವ ಕ್ಲಬ್‌ಗಳು ಮತ್ತು ರಿಕ್ರಿಯೇಷನ್‌ ಕ್ಲಬ್‌ಗಳಲ್ಲಿ ಪ್ಲೇಯಿಂಗ್‌ ಕಾರ್ಡ್‌ ಆಡದಂತೆ ಪೊಲೀಸರು ಕಟ್ಟಪ್ಪಣೆ ವಿಧಿಸಿದ್ದಾರೆ.

Playing Card Ban in Recreation Clubs snr
Author
First Published Dec 5, 2022, 5:51 AM IST

  ಕೆ.ಆರ್‌.ನಗರ (ಡಿ.05):  ಪಟ್ಟಣದಲ್ಲಿರುವ ಕ್ಲಬ್‌ಗಳು ಮತ್ತು ರಿಕ್ರಿಯೇಷನ್‌ ಕ್ಲಬ್‌ಗಳಲ್ಲಿ ಪ್ಲೇಯಿಂಗ್‌ ಕಾರ್ಡ್‌ ಆಡದಂತೆ ಪೊಲೀಸರು ಕಟ್ಟಪ್ಪಣೆ ವಿಧಿಸಿದ್ದಾರೆ.

ಕಳೆದ ವಾರ ಕ್ಲಬ್‌ಗಳ ಪದಾಧಿಕಾರಿಗಳನ್ನು ಠಾಣೆಗೆ (Police Station)  ಕರೆಸಿ ತಿಳಿ ಹೇಳಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ.ಆರ್‌. ಲವ ಒಂದು ವೇಳೆ ಆಟವಾಡುವುದು ಕಂಡು ಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಇದರಿಂದ ಇಲ್ಲಿರುವ 8 ಕ್ಲಬ್‌ಗಳಲ್ಲಿ ನೀರವ ಮೌನ ಆವರಿಸಿದ್ದು ಸದಸ್ಯರಾಗಿದ್ದವರು ಮತ್ತು ಅತಿಥಿಗಳಾಗಿ ಹೋಗಿ ಪ್ಲೇಯಿಂಗ್‌ ಕಾರ್ಡ್‌ (Playing Card)  ಆಡುತ್ತಿದ್ದವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಂಘದ ಸದಸ್ಯರ ಸಹಕಾರದಿಂದ ಸಮಾಜಮುಖಿ ಕೆಲಸ ಮಾಡುತ್ತಿದ್ದ ಸಿಲ್ವರ್‌ ಜ್ಯುಬಿಲಿ ಕ್ಲಬ್‌ ಮತ್ತು ಸುಕೃತಾ ಕ್ರೀಡಾ ಸಂಸ್ಥೆಯವರು ಪೊಲೀಸರ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಇತರೆ ತಾಲೂಕುಗಳ ಎಲ್ಲಾ ಕ್ಲಬ್‌ಗಳು ಮತ್ತು ಕ್ರೀಡಾ ಸಂಸ್ಥೆಗಳಲ್ಲಿ ಪ್ಲೇಯಿಂಗ್‌ ಕಾರ್ಡ್‌ ಆಡುತ್ತಿದ್ದರೂ ಕೆ.ಆರ್‌.ನಗರದಲ್ಲಿ ಮಾತ್ರ ಇದಕ್ಕೆ ನಿಷೇಧ ಹೇರಿರುವುದು ಯಾಕೆ ಎಂದು ಸದಸ್ಯರು ಪ್ರಶ್ನಿಸಿದ್ದಾರೆ.

ಸರ್ಕಾರದ ನಿಯಮ ಮೀರಿ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡರೆ ಅದಕ್ಕೆ ನಮ್ಮ ಬೆಂಬಲವಿದೆ ಆದರೆ ಸಮಯ ಕಳೆಯಲು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಡೆಸುತ್ತಿರುವ ನಮ್ಮ ಕ್ಲಬ್‌ಗಳಲ್ಲಿ ಎಂದಿನಂತೆ ಪ್ಲೇಯಿಂಗ್‌ ಕಾರ್ಡ್‌ ಆಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಕ್ಲಬ್‌ಗಳಲ್ಲಿ ಪ್ಲೇಯಿಂಗ್‌ ಕಾರ್ಡ್‌ ಆಡದಂತೆ ನಿರ್ಬಂಧ ಹೇರಿರುವುದರಿದ ಪಟ್ಟಣದ ಹೊರವಲಯದ ನಿರ್ಜನ ಪ್ರದೇಶಗಳು ಮತ್ತು ಇತರೆಡೆಗಳಲ್ಲಿ ಅಕ್ರಮವಾಗಿ ಜೂಜು ನಡೆಯುವ ಸಂಭವವಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿನ ಸುಕೃತಾ ಕ್ರೀಡಾ ಸಂಸ್ಥೆ ಮತ್ತು ಸಿಲ್ವರ್‌ ಕ್ಲಬ್‌ ಕಳೆದ 40 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಸದಸ್ಯರು ಸಂಜೆ ವೇಳೆ ಸಮಯ ಕಳೆಯಲು ಪ್ಲೇಯಿಂಗ್‌ ಕಾರ್ಡ್‌ ಆಡುವುದರ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇವೆ. ಇದರ ಜತೆಗೆ ಕೊರೋನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಔಷಝ ಸೇರಿದಂತೆ ಇತರ ಸಹಾಯ ಹಸ್ತ ಚಾಚಿದ್ದು ಪೊಲೀಸರು ನಮ್ಮ ಜನಪರ ಕೆಲಸಗಳನ್ನು ಪರಿಗಣಿಸಿ ಮತ್ತೆ ಪ್ಲೇಯಿಂಗ್‌ ಕಾರ್ಡ್‌ ಆಡಲು ಅವಕಾಶ ಕಲ್ಪಿಸಬೇಕು.

- ವೈ.ಆರ್‌. ಶಿವಕುಮಾರ್‌, ಅಧ್ಯಕ್ಷರು. ಸುಕೃತಾ ಕ್ರೀಡಾ ಸಂಸ್ಥೆ, ಕೆ.ಆರ್‌. ನಗರ.

ಸರ್ಕಾರದಿಂದ ಅನುಮತಿ ಪಡೆದು ನಿಯಮಾನುಸಾರ ನೋಂದಣಿ ಮಾಡಿಸಿ ಕಳೆದ 20 ವರ್ಷಗಳಿಂದ ಸ್ಪೋರ್ಚ್‌್ಸ ಕ್ಲಬ್‌ ನಡೆಸುತ್ತಿದ್ದು, ಇದರ ಜತೆಗೆ ಕೆಲವು ಸಮಾಜಮುಖಿ ಕೆಲಸ ಮಾಡುತ್ತಿದ್ದೇವೆ. ಆದರೆ ಈಗ ಪ್ಲೇಯಿಂಗ್‌ ಕಾರ್ಡ್‌ ಆಡದಂತೆ ನಿರ್ಬಂಧಿಸಿರುವುದು ಸದಸ್ಯರಿಗೆ ತೊಂದರೆಯಾಗುತ್ತಿದ್ದು ಪೊಲೀಸರು ಮತ್ತೆ ಅವಕಾಶ ಕಲ್ಪಿಸಬೇಕಾಗಿದೆ.

- ಬಿ.ಪಿ. ಮಂಜುನಾಥ್‌, ಅಧ್ಯಕ್ಷರು, ಮಹದೇಶ್ವರ ಸ್ಪೋಟ್ಸ್‌ ಕ್ಲಬ್‌

ಸಮಾಜ ಮುಖಿ ಕೆಲಸಗಳ ಜತೆಗೆ ಸದಸ್ಯರು ಸಮಯ ಕಳೆಯಲು ನಡೆಸುತ್ತಿರುವ ಕ್ಲಬ್‌ಗಳಲ್ಲಿ ಪ್ಲೇಯಿಂಗ್‌ ಕಾರ್ಡ್‌ ಆಡದಂತೆ ನಿರ್ಬಂಧ ಹೇರಿರುವ ಪೊಲೀಸರು ಇದನ್ನು ಪುನರ್‌ ಪರಿಶೀಲಿಸಿ ಮತ್ತೆ ಅವಕಾಶ ನೀಡಬೇಕು.

- ಆರ್‌.ಎ. ದಿನೇಶ್‌, ಕ್ಲಬ್‌ ಸದಸ್ಯರು.

ರಾಜಾರೋಷವಾಗಿ ದಂಧೆ

ತುಮಕೂರು,  ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದ್ದು, ಸೋಮವಾರ  ಪಾವಗಡ ಪಟ್ಟಣದ ಹಳೆಸಂತೆ ಮೈದಾನದ ಹತ್ತಿರ ಹೇರ್ ಕಟಿಂಗ್ ಸೆಲೂನ್‌ನಲ್ಲಿ  ಮಟ್ಕಾ ಬರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಇಲ್ಲಿನ ಬಡಬಗ್ಗರು , ಕೂಲಿ ಕಾರ್ಮಿಕರು , ಮಧ್ಯಮ ವರ್ಗದ ಜನರು ಹಾಗೂ ರೈತಾಪಿ ವರ್ಗದ ಜನತೆ ಮಟ್ಕಾ ಮತ್ತು ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದಾರೆ . ಹಾಗಾಗಿ ಇವರುಗಳ ಹೆಂಡತಿ - ಮಕ್ಕಳು ಉಪವಾಸ ಅನುಭವಿಸುವ ದುಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ .

ಆಫ್ ಹೆಲ್ಮೆಟ್, ಶೋಕಿ ಸೈಲೆನ್ಸರ್: ಪುಡಿ-ಪುಡಿ ಮಾಡಿದ ರೋಡ್‌‌ ರೋಲರ್

ಸೋಮವಾರ ಮಟ್ಕಾ ಬರೆಯುತ್ತಿದ್ದ ಬೀಟರ್ ಮಾತನಾಡಿ , ತಾನು ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದು , ತನಗೆ ದುಡಿಯಲು ಸಾಧ್ಯವಾಗುತ್ತಿಲ್ಲ . ಮಟ್ಕಾ ಬರೆದು ಜೀವನ ಮಾಡುತ್ತಿದ್ದೇನೆ . ದಿನ ಒಂದಕ್ಕೆ 3 ರಿಂದ 5 ಸಾವಿರ ಕಲೆಕ್ಷನ್ ಆಗುತ್ತದೆ . ಈ ಮೊತ್ತವನ್ನು ಮಟ್ಕಾ ಅಶ್ವತ್ಥಪ್ಪನಿಗೆ ನೀಡಿ , ತನ್ನ ಕಮಿಷನ್ ( ದಲ್ಲಾಲಿ ) ಹಣ ಪಡೆಯುತ್ತೇನೆ ಎಂದರು .

ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ ಪಟ್ಟಣದ ನಡೆಯುತ್ತಿದ್ದು , ಬಡಾವಣೆ , ನಾಗರಕಟ್ಟೆ , ಭರ್ಜರಿಯಾಗಿ ಕುಮಾರಸ್ವಾಮಿ ನಲಿಗಾನಹಳ್ಳಿ , ಬಾಲಮ್ಮನಹಳ್ಳಿ , ಪಳವಳ್ಳಿ , ಕ್ಯಾತಗಾನಚೆರ್ಲು ,ತಿರುಮಣಿ , ವೆಂಕಟಮ್ಮನಹಳ್ಳಿ , ಪಿ.ರೊಪ್ಪ , ಹೊಸ ಬಸ್ಟ್ಯಾಂಡ್ , ಹಳೆ ಬಸ್ಟ್ಯಾಂಡ್ , ಹಳಸಂತೆ - ಮಾರುಕಟ್ಟೆಯ ಹತ್ತಿರದ ಟೀ ಸ್ಟಾಲ್ ಮಧ್ಯೆ , ಮಂಗಳವಾಡದ ರೈನ್ ಗೇಜ್ ಬಡಾವಣೆ , ಪಳವಳ್ಳಿ ಈ ಎಲ್ಲಾ ಪ್ರದೇಶಗಳಿಂದ ಮಟ್ಟಾ ಬೀಟರ್‌ಗಳು ಲಕ್ಷಾಂತರ ಹಣ ವಸೂಲ ಮಾಡುತ್ತಿದ್ದಾರೆ . 

Follow Us:
Download App:
  • android
  • ios