ಮಂಡ್ಯ[ ಅ.03]:  ಚಿತ್ರನಟ ಅಭಿಷೇಕ್‌ ಅಂಬರೀಷ್‌ ಹುಟ್ಟುಹಬ್ಬ ಪ್ರಯುಕ್ತ  ಇಂದು 15,000 ಸಸಿಗಳ ವಿತರಿಸಲಾಗುವುದು ಅಖಿಲ ಕರ್ನಾಟಕ ಅಂಬರೀಷ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಟ್ಟುಹಬ್ಬಕ್ಕೆ ಕೇಕ್‌ ತರುವುದು ಹಾಗೂ ಬೆಂಗಳೂರಿಗೆ ಬಂದು ಶುಭಾಶಯ ಕೋರುವುದು ಬೇಡ. ಅದರ ಬದಲಿಗೆ ನಿಮ್ಮೂರಲ್ಲೇ ಒಂದೊಂದು ಗಿಡ ನೆಟ್ಟು ಅದರ ಫೋಟೋವನ್ನು ನನಗೆ ಕಳುಹಿಸಿಕೊಡಿ. ಆ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿ ಎಂದು ಸ್ವತಃ ಅಭಿಷೇಕ್‌ ಮನವಿ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೀಗಾಗಿ  ಹುಟ್ಟುಹಬ್ಬ ದಿನದಂದು ಸಸಿಗಳನ್ನು ನೆಡಲು ಮತ್ತು ವಿತರಿಸಲು ನಿರ್ಧರಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ನಯೀಂ, ಟಿ.ಕೆ.ರಾಮಲಿಂಗಯ್ಯ, ಶಶಿಕುಮಾರ್‌, ಮಲ್ಲನಾಯಕನಕಟ್ಟೆಶಂಕರ್‌, ಹೊಂಬೇಗೌಡ, ಕಾರ್ತಿಕ್‌ ಇದ್ದರು.