Asianet Suvarna News

52 ದಿನಗಳಿಂದ ಸೀಲ್‌ಡೌನ್ ಆಗಿದ್ದ ಈದ್ಗಾ ಮೊಹಲ್ಲಾ ಈಗ ಮುಕ್ತ

ಮಳವಳ್ಳಿಯಲ್ಲಿ ಕೊರೋನಾ ಸೋಂಕಿನ ಶಾಪಕ್ಕೆ ಒಳಗಾಗಿ ಸುಮಾರು 51 ದಿನಗಳ ವನವಾಸ ಅನುಭವಿಸಿದ ಪಟ್ಟಣದ ಈದ್ಗಾ ಮೊಹಲ್ಲಾ ಬುಧವಾರ ಸೀಲ್‌ಡೌನ್‌ನಿಂದ ಮುಕ್ತವಾಯಿತು.

Place in mandya is open after 52 days which was sealed down earlier
Author
Bangalore, First Published May 29, 2020, 3:30 PM IST
  • Facebook
  • Twitter
  • Whatsapp

ಮಳವಳ್ಳಿ(ಮೇ29): ಮಳವಳ್ಳಿಯಲ್ಲಿ ಕೊರೋನಾ ಸೋಂಕಿನ ಶಾಪಕ್ಕೆ ಒಳಗಾಗಿ ಸುಮಾರು 51 ದಿನಗಳ ವನವಾಸ ಅನುಭವಿಸಿದ ಪಟ್ಟಣದ ಈದ್ಗಾ ಮೊಹಲ್ಲಾ ಬುಧವಾರ ಸೀಲ್‌ಡೌನ್‌ನಿಂದ ಮುಕ್ತವಾಯಿತು.

ತಾಲೂಕು ಆಡಳಿತವು ಸೀಲ್‌ಡೌನ್‌ ಮುಕ್ತ ಮಾಡುತಿದ್ದಂತೆ ಈ ಪ್ರದೇಶದ ಜನ ಸ್ವಾತಂತ್ರ್ಯ ಸಿಕ್ಕಷ್ಟುಸಂತೋಷ ಅನುಭವಿಸಿದರು. ಪಟ್ಟಣದ ಕೊರೋನಾ ಹಾಟ್‌ಸ್ಪಾಟ್‌ ಎಂದೇ ಖ್ಯಾತಿಯಾಗಿದ್ದ ಈದ್ಗಾ ಮೊಹಲ್ಲಾ ಪ್ರದೇಶವನ್ನು ಕೊರೋನಾ ಸೋಂಕಿನ ಹರಡುವಿಕೆಯನ್ನು ತಡೆಯಲು ಏ. 6 ರಂದು ಜಿಲ್ಲಾಡಳಿತ ಸೀಲ…ಡೌನ… ಮಾಡಿತು. ಅಕ್ಷರಶಃ 51 ದಿನಗಳ ಕಾಲ ಈ ಪ್ರದೇಶ ಜನರು ಬೌದ್ಧಿಕ ಹಾಗೂ ಮಾನಸಿಕವಾಗಿ ಸೀಲ…ಡೌನ್‌ ಎಂಬ ಕಂಬಿಯ ಹಿಂದೆ ಬಂಧಿಯಾಗಿದ್ದರು.

ಈ ಸೀಲ್‌ಡೌನ್‌ ಪ್ರದೇಶದಿಂದ ಯಾರೂ ಹೊರ ಹೋಗುವಂತಿಲ್ಲ ಮತ್ತು ಯಾರೂ ಒಳಗೆ ಬರದಂತಹ ಪರಿಸ್ಥಿತಿ ಎದುರಾಗಿತ್ತು. ಮನೆಯಲ್ಲಿಯೇ ಕ್ವಾರಂಟೈನ್‌ ರೀತಿಯಲ್ಲೇ ಇದ್ದ ನಿವಾಸಿಗಳು ಬುಧವಾರ ಸ್ವಾತಂÜತ್ರ್ಯ ರುಚಿ ಕಂಡರು ಸಂಭ್ರಮಿಸಿದರು. ತಹಶೀಲ್ದಾರ್‌ ಕೆ.ಚಂದ್ರಮೌಳಿ ಸೀಲ…ಡೌನ್‌ ತೆರವುಗೊಳಿಸುತ್ತಿದೆಯೇ ಎಲ್ಲರೂ ಭಾವುಕರಾದರು. ಚಿಕ್ಕ ಚಿಕ್ಕ ಮಕ್ಕಳು ಕುಣಿದು ಕುಪ್ಪಳಿಸಿದರು.

ಕೃಷಿಕರಲ್ಲಿ ಆತಂಕ ಹುಟ್ಟಿಸಿದ ಮಿಡತೆಗಳು: ಕೇಂದ್ರ ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳ ನಿರಂತರ ಪರಿಶ್ರಮದಿಂದ ಸದ್ಯದಲ್ಲೇಯೇ ಪಟ್ಟಣ ಕೊರೋನಾ ಮುಕ್ತವಾಗಲಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ಪಿ. ಮಂಚೇಗೌಡ, ತಹಸೀಲ್ದಾರ್‌ ಕೆ.ಚಂದ್ರಮೌಳಿ, ತಾಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಹಾಗೂ ಮತ್ತವರ ತಂಡ ಹಗಲಿರುಳು ಎನ್ನದೇ ಕರ್ತವ್ಯ ನಿರ್ವಹಿಸಿ ಸೋಂಕು ಗ್ರಾಮೀಣ ಪ್ರದೇಶಕ್ಕೆ ವ್ಯಾಪಿಸದಂತೆ ತೆಗೆದುಕೊಂಡ ಮುಂಜಾಗೃತಾ ಕ್ರಮಕ್ಕೆ ತಾಲೂಕಿನ ಜನರಿಂದ ಶ್ಲಾಘನೀಯವೂ ವ್ಯಕ್ತವಾಗಿದೆ.

ಪೊಲೀಸರ ಸೇವೆ ಶ್ಲಾಘನೀಯ

ಪಟ್ಟಣದಲ್ಲಿ ಕೊರೋನಾ ಸೋಂಕು ವ್ಯಾಪಿಸುತ್ತಿದ್ದಂತೆ ಎಚ್ಚೆತ್ತಿಕೊಂಡ ಪಟ್ಟಣದ ಪೊಲೀಸರು ಡಿವೈಎಸ್ಪಿ ಎಂ.ಜೆ.ಪೃಥ್ವಿ ನೇತೃತ್ವದ ತಂಡ ಪಟ್ಟಣದಲ್ಲಿ ಎಲ್ಲ ಪ್ರವೇಶ ದ್ವಾರಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ ಪ್ರತಿ ವಾಹನಗಳನ್ನು ತಪಾಸಣೆ ಮಾಡಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರು. ಇದರ ಪರಿಣಾಮ ಸೋಂಕು ಪಟ್ಟಣದಿಂದ ಬೇರೆಯಡೆ ಹಡರದಂತಾಯಿತು.

ಅಧಿಕಾರಿಗಳು ಸದ್ಯಕ್ಕೆ ನಿರಾಳ

ತಾಲೂಕು ಮಟ್ಟದ ಅಧಿಕಾರಿಯೊಬ್ಬರಿಗೆ ಕೋವಿಡ್‌- 19 ಸೋಂಕು ಪಾಸಿಟಿವ್‌ ಬಂದಿದೆ. ಆ ಅಧಿಕಾರಿಯನ್ನು ಈದ್ಗಾ ಮೊಹಲ್ಲಾ ಪ್ರದೇಶದ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ಜಿಲ್ಲಾಡಳಿತ ನೇಮಿಸಿತು. ಅಧಿಕಾರಿಗೆ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ತಹಸೀಲ್ದಾರ್‌ ಸೇರಿದಂತೆ ಹಲವು ಅಧಿಕಾರಿಗಳಲ್ಲಿ ಕೊರೋನಾ ಭಯ ಕಾಡಿತು. ಆದರೆ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದ ಅಧಿಕಾರಿಗಳ ಸೇರಿದಂತೆ ಎಲ್ಲ ಸಿಬ್ಬಂದಿ ವರದಿ ನೆಗೆಟಿವ್‌ ಬಂದ ಪರಿಣಾಮ ಸದ್ಯಕ್ಕೆ ನಿರಾಳರಾಗಿದ್ದಾರೆ.

ಸೋಂಕಿನ ಇತಿಹಾಸ, ಮಾಯವಾದ ಕಳಂಕ

*ದೆಹಲಿ ಮೂಲದ ಧರ್ಮಗುರುಗಳು ಹಾಗೂ ದೆಹಲಿ ನಿಜಾಮುದ್ದೀನ್‌ ತಬ್ಲಿಘಿ ಜಮಾತ್‌ ಸಭೆಗೆ ಹೋಗಿ ಬಂದವರಿಂದ ಕೊರೋನಾ ಸೋಂಕು ಹರಡಿ ಆತಂಕದ ಪರಿಸ್ಥಿತಿಯನ್ನು ತಂದು ಒಡ್ಡಿತ್ತು.

*ಪಟ್ಟಣದ 7ನೇ ವಾರ್ಡಿನ ಈದ್ಗಾ ಮೊಹಲ್ಲಾದಲ್ಲಿನ ಮಸೀದಿಯಲ್ಲಿ ಧರ್ಮ ಪ್ರಚಾರಕ್ಕಾಗಿ ಮಾಚರ್‌ ತಿಂಗಳಲ್ಲಿ ದೆಹಲಿಯಿಂದ ಬಂದಿದ್ದ 10 ಮೌಲ್ವಿಗÜಳಲ್ಲಿ ಐವರಿಗೆ ಮೈಸೂರಿನಲ್ಲಿ ಕೊರೋನಾ ದೃಢಪಟ್ಟಿತು. ನಂತರ ಪಟ್ಟಣದ 7 ಮಂದಿಗೆ ಕೋವಿಡ್‌-19 ಸೋಂಕು ತಗುಲಿ ಜಿಲ್ಲೆಯಲ್ಲಿ ಆತಂಕದ ವಾತಾವರಣ ತಕ್ಷಣವೇ ಎಚ್ಚೆತ್ತ ಜಿಲ್ಲಾಡಳಿತ ಸಾಗರೋಪಾದಿಯಲ್ಲಿ ಕ್ರಮ ತೆಗೆದುಕೊಂಡು ಮೊದಲಿಗೆ ಈದ್ಗಾ ಮೊಹಲ್ಲಾ ಪ್ರದೇಶವನ್ನು ಸೀಲ…ಡೌನ್‌ ಮಾಡಿತು.

* ನಂತರ ಕೋಟೆ ಕಾಳಮ್ಮನ ಬೀದಿ ಮತ್ತು ಪೇಟೆ ಮುಸ್ಲಿಂ ಬೀದಿಯಲ್ಲಿ ನಿವಾಸಿಗಳಿಗೆ ಸೋಂಕು ಹರಡಿದ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ 22ಕ್ಕೆ ಏರಿತು. ಕೂಡಲೇ ಈ ಪ್ರದೇಶಗಳನ್ನೂ ಸಹ ಸೀಲ…ಡೌನ್‌ ಮಾಡಿ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಜನರಿಗೆ ವೈರಸ್‌ನ ಬಗ್ಗೆ ಅರಿವು ಮೂಡಿಸಲಾಯಿತು.

*ಸೋಂಕಿತರ ಜೊತೆ ನಿಕಟ ಸಂಪರ್ಕದಲ್ಲಿದ್ದವರನ್ನು ತಕ್ಷಣವೇ ಗುರುತಿಸಿ ಹಾಸ್ಟೆಲ್ ಕ್ವಾರಂಟೈನ್‌ ಮಾಡಲಾಯಿತು. ಅಲ್ಲದೇ ಸೋಂಕಿತರ ಜೊತೆ ದ್ವೀತಿಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ಹೋಂ ಕ್ವಾರಂಟೈನ್‌ ಮಾಡಿ ಸುಮಾರು 3500 ಮಂದಿಯ ಮೂಗಿನ ಮತ್ತು ಗಂಟಲ ದ್ರವವನ್ನು 3 ಬಾರಿ ಪರೀಕ್ಷೆಗೆ ಒಳಪಡಿಸಲಾಗಿತು. ಎಲ್ಲರೂ ನೆಗಿಟಿವ್ ವರದಿಯಿಂದ ಜಿಲ್ಲಾಡಳಿತ ನಿಟ್ಟಿಸಿರು ಬಿಟ್ಟಿತು.

*ಕೋಟೆ ಕಾಳಮ್ಮ ಬೀದಿಯ ಒಂದೇ ಕುಟುಂಬದ 10 ಮಂದಿಗೆ ಸೋಂಕು ತಗುಲಿತು. ವೈದ್ಯರ ಸತತ ಪರಿಶ್ರಮದಿಂದ ಸೋಂಕಿತರಲ್ಲಿ 20 ಮಂದಿಗೆ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ವಾಪಾಸು ಬಂದಿದ್ದಾರೆ. ಇನ್ನುಳಿದ ಇಬ್ಬರಲ್ಲಿ ಒಬ್ಬರ ವರದಿ ನೆಗೆಟಿವ್ ಬಂದಿದ್ದು, ಇನ್ನೊಂದು ಬಾರಿ ಪರೀಕ್ಷೆಗೆ ಒಳಪಡಿಸಿ ಬಿಡುಗಡೆ ಮಾಡಲಾಗುವುದು ಎನ್ನುತ್ತಿದೆ ಜಿಲ್ಲಾಡಳಿತ.

ಪಟ್ಟಣದ ಈದ್ಗಾ ಮೊಹಲ್ಲಾ ಪ್ರದೇಶದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಸೀಲ್ಡೌನ್‌ ಮಾಡಲಾಗಿತು. 28 ದಿನಗಳಿಂದ ಯಾವುದೇ ವ್ಯಕ್ತಿಗೆ ಸೋಂಕು ಹರಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಸೀಲ್ ಡೌನ್‌ ತೆರವುಗೊಳಿಸಲಾಗಿದೆ. ಇಲ್ಲಿನ ಜನರು ತಾಲೂಕು ಆಡಳಿತ ಜೊತೆ ಸಹಕರಿಸಿದ ಪರಿಣಾಮ ಈ ಪ್ರದೇಶ ಇಂದು ಕೊರೊನಾ ಮುಕ್ತವಾಗಿದೆ ಎಂದು ತಹಸೀಲ್ದಾರ್‌ ಕೆ. ಚಂದ್ರಮೌಳಿ ತಿಳಿಸಿದ್ದಾರೆ.

ಆರಂಭದಲ್ಲಿ ನಮ್ಮ ಏರಿಯಾದಲ್ಲಿ ಕೊರೋನಾ ಕಾಣಿಸಿಕೊಂಡಾಗ ಭಯವಾಗಿತು. ಪುರ ಜನರನ್ನು ನಮ್ಮ ಬಡಾವಣೆಯನ್ನು ಕಂಡ ರೀತಿಯೇ ಬೇರೆಯಾಗಿತ್ತು. ಆದರೂ ಬಡಾವಣೆಯ ಜನರೂ ಕೂಡ ಧೈರ್ಯವಾಗಿ ಸಮಸ್ಯೆಯನ್ನು ಎದುರಿಸಿದರು. ಆರೋಗ್ಯ ಇಲಾಖೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ತಾಲೂಕು ಆಡಳಿತ ಸೋಂಕು ವ್ಯಾಪಿಸದಂತೆ ಹಾ ಗೂ ನಮ್ಮ ದಿನನಿತ್ಯ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದಕ್ಕೆ ಧನ್ಯವಾದಗಳು ಎಂದು ಸ್ಥಳೀಯ ನಿವಾಸಿಯೊಬ್ಬರ ಅಭಿಪ್ರಾಯ

-ಸಿ. ಸಿದ್ದರಾಜು ಮಾದಹಳ್ಳಿ

Follow Us:
Download App:
  • android
  • ios