Asianet Suvarna News Asianet Suvarna News

ವಿದೇಶದಿಂದ ಬಂದ ಮೇಸೇಜ್‌ಗಳಿಂದ ಮಂಗಳೂರಲ್ಲಿ ಗಲಭೆ..?

ಮಂಗಳೂರು ಗಲಭೆಗೆ ಸಂಬಂಧಿಸಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಇದೀಗ ಆತಂಕಕಾರಿ ವಿಚಾರವೊಂದು ತನಿಖೆಯಿಂದ ತಿಳಿದು ಬಂದಿದೆ. ವಿದೇಶದಿಂದಲೂ ಕೋಮು ಪ್ರಚೋದಿತ ಸಂದೇಶಗಳನ್ನು ಕಳುಹಿಸಿರುವ ಬಗ್ಗೆ ಇತ್ತೀಚೆಗೆ ಬೆಳಕಿಗೆ ಬಂದಿದೆ.

provoking messages from foreign countries  leads to mangalore violence
Author
Bangalore, First Published Jan 2, 2020, 8:16 AM IST
  • Facebook
  • Twitter
  • Whatsapp

ಮಂಗಳೂರು(ಜ.02): ಮಂಗಳೂರು ಗೋಲಿಬಾರ್‌ ಘಟನೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಯಿಂದ ಮ್ಯಾಜಿಸ್ಪ್ರೇಟ್‌ ತನಿಖೆ ಹಾಗೂ ಸಿಐಡಿ ತನಿಖೆ ಮುಂದುವರಿದಿದ್ದು, ಈ ನಡುವೆ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯ ಸಂದೇಶ ಹಾಕಿದವರ ವಿರುದ್ಧ ಮಂಗಳೂರು ಸೈಬರ್‌ ಸೆಲ್‌ ಪೊಲೀಸರು ಕ್ರಮ ಜರುಗಿಸತೊಡಗಿದ್ದಾರೆ.

ಪ್ರಮುಖವಾಗಿ, ವಿದೇಶದಿಂದ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಸಂದೇಶ ಹಾಕುವವರ ವಿರುದ್ಧ ‘ಲೆಟ​ರ್ಸ್‌ ರೊಗೇಟರಿ’ ಅಸ್ತ್ರ ಬಳಕೆಗೆ ಪೊಲೀಸ್‌ ಇಲಾಖೆ ಮುಂದಾಗಿದೆ.

ಏನಿದು ಲೆಟರ್ಸ್‌ ರೊಗೇಟರಿ:

ವಿದೇಶದಲ್ಲಿ ಇದ್ದುಕೊಂಡು ಶಾಂತಿ ಕದಡುವವರ ವಿರುದ್ಧ ಜಿಲ್ಲಾ ನ್ಯಾಯಾಲಯದಿಂದ ಆಯಾ ದೇಶದ ರಾಯಭಾರ ಕಚೇರಿಗೆ ‘ಲೆಟ​ರ್ಸ್‌ ರೊಗೇಟರಿ’ ಕಳುಹಿಸಲಾಗುತ್ತದೆ. ನಂತರ ವ್ಯಕ್ತಿಯ ಪಾಸ್‌ಪೋರ್ಟ್‌ನ್ನು ರಾಯಭಾರ ಕಚೇರಿಯು ಮುಟ್ಟುಗೋಲು ಹಾಕಲಿದೆ.

ಕಾಮಗಾರಿಯೇ ಮುಗಿಯದ ಪಂಪ್‌ವೆಲ್‌ ಫ್ಲೈಓವರ್‌ಗೆ ಕೊನೆಗೂ ಉದ್ಘಾಟನೆ ಭಾಗ್ಯ..?

ಬಳಿಕ ಭಾರತೀಯ ನ್ಯಾಯಾಲಯದ ಲೆಟರ್ಸ್‌ ರೊಗೇಟರಿಯನ್ನು ಆಯಾ ದೇಶದ ಕೋರ್ಟ್‌ಗೂ ಸಲ್ಲಿಸಲಾಗುತ್ತದೆ. ಇದರಿಂದ ಪಾಸ್‌ಪೊರ್ಟ್‌ ಕಳೆದುಕೊಂಡ ವ್ಯಕ್ತಿಯನ್ನು ಬಂಧಿಸುವುದು ಸುಲಭವಾಗುತ್ತದೆ. ಪಾಸ್‌ಪೋರ್ಟ್‌ ಮರಳಿ ಪಡೆಯಲು ನಿರಪರಾಧಿ ಎಂದು ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಾಗುತ್ತದೆ.

23 ಮಂದಿಗೆ ನೋಟಿಸ್‌:

ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಹರಿಯಬಿಟ್ಟಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 23 ಮಂದಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ವಾಟ್ಸಪ್‌ ಗ್ರೂಪ್‌ಗಳ ಎಡ್ಮಿನ್‌ಗಳಿಗೂ ನೋಟಿಸ್‌ ಜಾರಿಯಾಗಿದೆ. ಐದು ಮಂದಿಯ ವಿರುದ್ಧ ಎಫ್‌ಐಆರ್‌ನ್ನೂ ಸೈಬರ್‌ ಸೆಲ್‌ ಪೊಲೀಸರು ದಾಖಲಿಸಿದ್ದಾರೆ.

Follow Us:
Download App:
  • android
  • ios