ದೂರದ ಊರಿಂದ ಉದ್ಯೋಗ ಅರಸಿ ಬಂದು ಪಿಜಿಗಳಲ್ಲಿ ತಂಗುವ ಮಂದಿ, ಇಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಪಿಜಿಗಳಿರುವ ಗಲ್ಲಿಯ ಇಡೀ ಏರಿಯಾ ಈಗ ಯುವಕರು ಮತ್ತು ಯುವತಿಯರ ಅಡ್ಡೆಯಾಗಿ ಪರಿವರ್ತನೆಯಾಗುತ್ತಿದೆ.

ಬೆಂಗಳೂರು (ಜೂ.1): ರಾಜ್ಯದ ಐಟಿ ಹಬ್‌, ಸಿಲಿಕಾನ್ ಸಿಟಿ ಎಂದೆಲ್ಲ ಕರೆಸಿಕೊಳ್ಳುವ ರಾಜಧಾನಿಗೆ ಉದ್ಯೋಗ ಅರಸಿ ಬರುವ ಅನೇಕ ಯುವ ಜನಾಂಗಕ್ಕೆ ಹಾಸ್ಟೆಲ್‌, ಪಿಜಿಗಳು ಉದ್ಯೋಗದಷ್ಟೇ ಮುಖ್ಯವಾಗಿದೆ. ಬ್ಯಾಚುಲರ್‌ ಗಳು ಹೆಚ್ಚಾಗಿ ಪಿಜಿಗಳಲ್ಲೇ ತಂಗುತ್ತಾರೆ. ಹೀಗಾಗಿ ರಾಜಧಾನಿಯ ಏರಿಯಾದ ಗಲ್ಲಿ ಗಲ್ಲಿಯಲ್ಲಿ ಸಾಲು ಸಾಲು ಪಿಜಿಗಳಿವೆ. ಆದರೆ ಇದೇ ಈಗ ನಿವಾಸಿಗಳಿಗೆ ಸಂಕಷ್ಟ ತಂದೊಡ್ಡಿದೆ. 

Add Asianetnews Kannada as a Preferred SourcegooglePreferred

ದೂರದ ಊರಿಂದ ಉದ್ಯೋಗ ಅರಸಿ ಬಂದು ಪಿಜಿಗಳಲ್ಲಿ ತಂಗುವ ಮಂದಿ, ಇಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಪಿಜಿಗಳಿರುವ ಗಲ್ಲಿಯ ಇಡೀ ಏರಿಯಾ ಈಗ ಯುವಕರು ಮತ್ತು ಯುವತಿಯರ ಅಡ್ಡೆಯಾಗಿ ಪರಿವರ್ತನೆಯಾಗುತ್ತಿದೆ. ಮಧ್ಯ ರಾತ್ರಿ 2 ಗಂಟೆ ಆದ್ರೂ ಯುವಕ ಯುವತಿಯರ ಗಲಾಟೆ, ಅಸಭ್ಯ ವರ್ತನೆಗಳು, ಪಾಟೀ ಮೋಜು ಮಸ್ತಿ ಹೆಚ್ಚಾಗುತ್ತಿದೆ.

ನೀಲಿ ಚಿತ್ರ ತಾರೆ ಜತೆ ಲೈಂಗಿಕ ಸಂಬಂಧ, ಅಮೆರಿಕ ಅಧ್ಯಕ್ಷ ಚುನಾವಣೆಗೂ ಮುನ್ನ ಟ್ರಂಪ್‌ಗೆ ಕೋರ್ಟ್ ಶಾಕ್‌!

ಪಿಜಿಯಲ್ಲಿರುವ ಬಾಯ್ಸ್ ಮತ್ತು ಗರ್ಲ್ಸ್ ನಿಂದ ವೈಟ್ ಫೀಲ್ಡ್ ನಿವಾಸಿಗಳಿಗೆ ತಲೆ ನೋವು ಆರಂಭವಾಗಿದೆ. ವೈಟ್ ಫೀಲ್ಡ್ ಏರಿಯಾದಲ್ಲಿ ಸಾವಿರಾರು ಅನಧಿಕೃತ ಪಿಜಿಗಳು ಓಪನ್ ಆಗಿದದ್ದು, ಪ್ರಶಾಂತ್ ಲೇಔಟ್, ವೈಟ್ ರೋಸ್ ಲೇಔಟ್, ಡಿಸಿಲ್ವ ಲೇಔಟ್, ಉಪ್ಕಾರ್ ಲೇಔಟ್ ನಲ್ಲಿ ಪಿಜಿಗಳದ್ದೇ ಕಾರುಬಾರು. ಯುವಕ ಯುವತಿಯರೇ ರಾಜ್ಯಭಾರ ಎಂಬಂತಾಗಿದೆ.

Goa EOLC : ದೇಶದಲ್ಲೇ ಮೊದಲ ಬಾರಿ ಮರಣಕ್ಕೆ ‘ಫ್ರೀವಿಲ್’ ಜಾರಿ

ಪಿಜಿಗಳಲ್ಲಿ ಲಕ್ಷಾಂತರ ಯುವಕ ಯುವತಿಯರು ಬಾಡಿಗೆಗೆ ವಾಸವಿದ್ದು, ಕೆಲಸ ಮುಗಿಸಿ ಬಂದ್ರೆ ಸಾಕು ರಾತ್ರಿ ಆಗ್ತಿದಂತೆ ಪಿಜಿ ಅಕ್ಕಪಕ್ಕದ ಏರಿಯಾಗಳಿಗೆ ಅವರ ದಂಡೇ ಎಂಟ್ರಿ ಕೊಡುತ್ತೆ. ರಸ್ತೆಯಲ್ಲೆ ಮದ್ಯಪಾನ, ಧೂಮಪಾನ, ಬರ್ತಡೇ ಪಾರ್ಟಿ ದಿನಾಲು ನಡೆಯುತ್ತಲೇ ಇರುತ್ತೆ. ಅಕ್ಕಪಕ್ಕದ ನಿವಾಸಿಗಳ ಮನೆಯ ಮುಂಭಾಗದಲ್ಲಿ ಕೇಕ್ ಕಟ್ ಮಾಡಿ ನಿತ್ಯವೂ ಗಲಾಟೆ ಮಾಡಲಾಗುತ್ತಿದ್ದು, ಎಲ್ಲೆಂದರಲ್ಲಿ ಯುವಕ ಯುವತಿಯರು ಕುಳಿತು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ. ಪರಿಣಾಮವಾಗಿ ಸುತ್ತ ಮುತ್ತ ಮನೆಯ ಹೆಣ್ಣುಮಕ್ಕಳು ಮುಜುಗರಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಮುಖ್ಯಮಂತ್ರೊ, ಹೋಂ ಮಿನಿಸ್ಟರ್, ಪೋಲಿಸ್ ಕಮಿಷನರ್ ಗೆ ದೂರು ಕೊಟ್ರೂ ಏನೂ ಪ್ರಯೋಜನವಾಗಿಲ್ಲ. ಎಕ್ಸ್ ಖಾತೆ ಮೂಲಕ ದೂರು ನೀಡಿದ್ದು ಕೂಡಲೇ ಈ ಸಮಸ್ಯೆ ಬಗಹರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.