ಚಾಮರಾಜನಗರ : ಮುಸ್ಲಿಂ ಯುವಕರಿಂದ 18 ಮಂದಿ ಶವಸಂಸ್ಕಾರ
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ಸೇರಿದ್ದ 24 ಮಂದಿ ಆಕ್ಸಿಜನ್ ಕೊರತೆ ಉಂಟಾಗಿ ಆಸ್ಪತ್ರೆಗೆ ಸೇರಿದ್ದು 18 ಮಂದಿ ಅಂತ್ಯಕ್ರಿಯೆಯನ್ನು ಪಿಎಫ್‌ಐ ಕಾರ್ಯಕರ್ತರು ನೆರವೇರಿಸಿದ್ದಾರೆ.
ಚಾಮರಾಜನಗರ(ಮೇ.04): ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ 24 ಮಂದಿ ಕೋವಿಡ್ ಸೋಂಕಿತರ ಪೈಕಿ 18 ಮಂದಿಯ ಅಂತ್ಯ ಸಂಸ್ಕಾರವನ್ನು ಪಿಎಫ್‌ಐ ಸಂಘಟನೆಯ ಯುವ ಕಾರ್ಯಕರ್ತರು ನೆರವೇರಿಸಿದ್ದಾರೆ.
ಈ ಮೂಲಕ ರಂಜಾನ್ ಉಪವಾಸ ಸಂದರ್ಭದಲ್ಲೂ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ. ಒಂದು ತಂಡದಲ್ಲಿ ಐವರು ಯುವಕರಂತೆ ಗುಂಪುಗಳನ್ನು ರೂಪಿಸಿಕೊಂಡು ಬೆಳಗ್ಗೆಯಿಂದ ಮಧ್ಯಾಹ್ನ 2ರ ಹೊತ್ತಿಗೆ 18 ಮಂದಿ ಮೃತ ಸೋಂಕಿತರ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ. ಎಲ್ಲಾ ಮೃತದೇಹಗಳನ್ನು ಹೂಳಲಾಗಿದೆ.
ಚಾಮರಾಜನಗರ: ನಾಪತ್ತೆಯಾಗಿದ್ದ ಸೋಂಕಿತ ಜಿಲ್ಲಾಸ್ಪತ್ರೆ ಮುಂದಿನ ರಸ್ತೆಯಲ್ಲಿ ಶವವಾಗಿ ಪತ್ತೆ ..
ಭಾನುವಾರ ಮಧ್ಯರಾತ್ರಿಯೇ ವೈದ್ಯರು ಕರೆ ಮಾಡಿ ಹೆಚ್ಚು ಸೋಂಕಿತರು ಮೃತಪಟ್ಟಿದ್ದು ಹೆಚ್ಚಿನ ಯುವಕರ ಅಗತ್ಯವಿದೆ ಎಂದು ತಿಳಿಸಿದರು. ಅದರಂತೆ, ಸಂಘಟನೆಯ ಕಾರ್ಯಕರ್ತರನ್ನು ಕರೆ ತಂದು ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದೇವೆ. ಹೆಚ್ಚಿನ ಮಂದಿ ಯುವಕರೇ ಆಗಿದ್ದು ನಮಗೆ ಹೃದಯ ಭಾರವಾಗುತ್ತದೆ. ದೇಶ ಸೇವೆಗೆ ಇದಕ್ಕಿಂತ ಅವಕಾಶ ಸಿಗುವುದಿಲ್ಲ ಎಂದು ಈ ರೀತಿ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ ಎಂದು ಸಂಘಟನೆಯ ಮುಖ್ಯಸ್ಥರಾದ ಕಫಿಲ್ ಅಹಮ್ಮದ್, ಶೋಯೆಬ್ ತಿಳಿಸಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona