Asianet Suvarna News Asianet Suvarna News

BBMP ಶಾಕ್.. ಶ್ವಾನ ಸಾಕಲು ಲೈಸೆನ್ಸ್ ಕಡ್ಡಾಯ...ತ್ಯಾಜ್ಯ ನಿರ್ವಹಣೆ ಮಾಲೀಕರ ಹೊಣೆ!

* ಶ್ವಾನ ಪ್ರಿಯರಿಗೆ ಬಿಬಿಎಂಪಿ ಶಾಕ್ ಕೊಟ್ಟಿದೆ
* ಇನ್ಮುಂದೆ ಬೆಂಗಳೂರಿಗರು ನಾಯಿ ಸಾಕವೇಕಂದ್ರೆ  ಪರವಾನಗಿ ಪಡೆದಿರಬೇಕು
* ಬೆಂಗಳೂರಲ್ಲಿ ಮನೆಯಲ್ಲಿ ನಾಯಿ ಸಾಕಬೇಕೆಂದರೆ ಲೈಸೆನ್ಸ್ ಅಗತ್ಯ
* ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿಗೆ ಕಾಯುತ್ತಿರುವ ಪಾಲಿಕೆ‌

Pet registration in Bengaluru to soon be mandatory says BBMP mah
Author
Bengaluru, First Published Oct 12, 2021, 6:22 PM IST
  • Facebook
  • Twitter
  • Whatsapp

ಬೆಂಗಳೂರು(ಅ. 12)  ಶ್ವಾನ ಪ್ರಿಯರಿಗೆ ಬಿಬಿಎಂಪಿ(BBMP) ಶಾಕ್ ನೀಡಿದೆ.  ಇನ್ಮುಂದೆ ಬೆಂಗಳೂರಿಗರು (Bengaluru) ನಾಯಿ (Pet )ಸಾಕಲು ಪರವಾನಗಿ(Pet Licence) ಪಡೆದುಕೊಂಡಿರಬೇಕು.

ಮನೆಯಲ್ಲಿ ನಾಯಿ(Dog) ಸಾಕಬೇಕೆಂದರೆ ಲೈಸೆನ್ಸ್ ಅಗತ್ಯ. ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿಗಾಗಿ ಪಾಲಿಕೆ ಕಾಯುತ್ತಿದೆ.

ಪೆಟ್ ಡಾಗ್ ಲೈಸೆನ್ಸ್.. ಡಾಗ್ ಬ್ರೀಡ್ ಲೈಸೆನ್ಸ್ ಎಂಬ ಎರಡು ರೀತಿಯಲ್ಲಿ ಪರವಾನಗಿ ದೊರೆಯಲಿದೆ. ನಾಯಿಗೆ ಪರವಾನಿಗೆ‌ ಇಲ್ಲದಿದ್ದರೆ ಸಾಕಲು ಅನುಮತಿ ಇಲ್ಲ.  ಪರವಾನಗಿ ಪಡೆಯದೆ ಬ್ರೀಡ್ ಮಾಡಿದರೆ ಕಾನೂನು ಕ್ರಮ  ಜರುಗಿಸಲಾಗುತ್ತದೆ.

ಪರವಾನಗಿ ಸಂಬಂಧಿಸಿದ ರೂಲ್ಸ್ ಗಳನ್ನು ಫಾಲೋ ಮಾಡದಿದ್ರೆ ದಂಡ  ಗ್ಯಾರಂಟಿ. ಮುಂದಿನ 15 ದಿನಗಳಲ್ಲಿ ಲೈಸೆನ್ಸ್ ಸಂಬಂಧಿತ ಆದೇಶ ಹೊರಬೀಳಲಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ವತಿಯಿಂದ 5 ಬಾರಿ ಅಭಿಪ್ರಾಯ ಪಡೆದುಕೊಳ್ಳಲಾಗಿದೆ.

ರಾಟ್ ವಿಲ್ಲರ್ ಗೆ ರಕ್ತ  ಕೊಟ್ಟ ಜರ್ಮನ್ ಶಫರ್ಡ್ ಶ್ವಾನ

ಸರ್ಕಾರದಿಂದ ಗ್ರೀನ್ ಸಿಗ್ನಲ್ ಬಂದ ಬಳಿಕ ಬಿಬಿಎಂಪಿ ಅಂತಿಮವಾಗಿ ಲೈಸೆನ್ಸ್ ಶುಲ್ಕ ನಿಗದಿ ಮಾಡಲಿದೆ. ಮನೆಯಲ್ಲಿ ಸಾಕುವ ನಾಯಿಗೆ ಒಂದೇ ಒಂದು ಬಾರಿ ಲೈಸೆನ್ಸ್ ಪಡೆಯಬೇಕು. ಅದೇ ನೀವು ನಾಯಿಗಳ ಸಾಕಿ ಮಾರಾಟ ಮಾಡುವ ಬ್ರೀಡ್ ಆಗಿದ್ರೆ ವರ್ಷಕ್ಕೊಮ್ಮೆ ಲೈಸೆನ್ಸ್ ರಿನಿವಲ್ ಮಾಡಿಸಿಕೊಳ್ಳಬೇಕಾಗುತ್ತದೆ. 

ಎರಡು ವಿಭಾಗದಲ್ಲೂ ಪ್ರತ್ಯೇಕವಾದ ನಿಯಮಗಳ ರೂಪಿಸಿ ಸಿದ್ಧಪಡಿಸಲಾಗಿದೆ. ಪಾಲಿಕೆ ಪಶು ಸಂಗೋಪನೆ ವಿಭಾಗ ಈ ಸಂಬಂಧ ಸರ್ಕಾರಕ್ಕೆ ಶಿಪಾರಸ್ಸು ಮಾಡಿತ್ತು. ಒಂದು ಅಪಾರ್ಟ್ ಮೆಂಟ್ ಅಥವಾ ಒಂದ್ ಪ್ಲಾಟ್ ಗೆ ಒಂದೇ ನಾಯಿ ಎಂಬ ನಿಯಮ ಜಾರಿಗೂ ಚಿಂತನೆ ಮಾಡಲಾಗಿದೆ. 

ಸರ್ಕಾರಕ್ಕೆ ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಏನಿದೆ.!?

* ನಾಯಿ ಸಾಕಲು ಪರವಾನಿಗೆ ಕಡ್ಡಾಯ

*  ಪೆಟ್ ಡಾಗ್ ಲೈಸೆನ್ಸಿಂಗ್ ಎಂಬ ಹೆಸರಿನಡಿಯಲ್ಲೇ ಪರವಾನಗಿ

* ಅನಿಮಲ್ ವೆಲ್ ಫೇರ್ ಇಂಡಿಯಾ ವತಿಯಿಂದ ಲೈಸೆನ್ಸ್ ಪಡೆಯಬೇಕು

* ಶ್ವಾನ ತ್ಯಾಜ್ಯ ಮಾಡದಂತೆ ಮಾಲೀಕರ ಗಮನ ಇಡಬೇಕು - ಕ್ಲಿನಿಂಗ್ ವ್ಯವಸ್ಥೆ ಮಾಲೀಕರದೇ ಹೊಣೆ 

* ಪೆಟ್ ಪೇರೆಂಟ್ಸ್ ಅಂತ ಲೈಸೆನ್ಸ್ ನೀಡಿ ಶ್ವಾನ ಸಾಕಲು ಅವಕಾಶ ನೀಡುವುದು 

* ಶ್ವಾನಗಳ ವ್ಯಾಕ್ಸಿನ್, ಲೈಸೆನ್ಸ್, ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಿ ಸಲ್ಲಿಸುವುದು

* ಶ್ವಾನಗಳ ದೇಹದಲ್ಲಿ ಮೈಕ್ರೋ ಚಿಪ್ ಅಳವಡಿಸಿ ಅದನ್ನು‌ ಟ್ರ್ಯಾಕ್ ಮಾಡುವುದು  

* ಶ್ವಾನಗಳ ಗುರುತಿಗಾಗಿ Face Recognize ಮಾಡಿಸುವುದು

* ಅನಿಮಲ್ ವೆಲ್ ಫೇರ್ ಬೋರ್ಡ್ ಆಫ್ ಇಂಡಿಯಾ ವತಿಯಿಂದ ಲೈಸೆನ್ಸ್ ಪಡೆದು ಡಾಗ್ ಬ್ರೀಡಿಂಗ್ ಮಾಡಬೇಕು

* ಈ ಪರವಾನಿಗೆ ಪಡೆಯದೆ ಬ್ರೀಡ್ ಮಾಡಿದರೆ ಕಾನೂನು ಕ್ರಮ 

* ಡಾಗ್ ಬ್ರೀಡಿಂಗ್ ರೂಲ್ಸ್ ತಪ್ಪದೇ ಫಾಲೋ ಆಗಲೇಬೇಕು

* ಪ್ರತಿ ನಾಯಿ ವಾಸಿಸಲು ನಿಗದಿತ ಸ್ಥಳ ಹೊಂದಿರಬೇಕು

-*ಶ್ವಾನಗಳಿಗೆ ಆಹಾರ ಪದ್ಧತಿ ರೂಪಿಸಿ, ಅದರಂತೆಯೇ ಆಹಾರ ನೀಡಬೇಕು

* ಇಷ್ಟೆಲ್ಲ ಅನುಕೂಲ‌ ಇದ್ದರೆ ಮಾತ್ರ ಪಕ್ಕಾ ಲೈಸೆನ್ಸ್

 

 

Follow Us:
Download App:
  • android
  • ios