ಕ್ವಾರಂಟೈನ್‌ನಲ್ಲಿ ಇರಬೇಕಾದ ವ್ಯಕ್ತಿ ಹೋಟೆಲ್‌ ತೆರೆದಿದ್ದ..!

ಚಿಕ್ಕಬಳ್ಳಾಪುರ ನಗರದ ಹೋಟೆಲ್‌ ಮಾಲೀಕರೊಬ್ಬರ ಮಗನಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಶನಿವಾರವೇ ಸೋಂಕಿತನನ್ನು ನಗರದ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Person who was quarantined opens hotel in Chikkaballapur

ಚಿಕ್ಕಬಳ್ಳಾಪುರ(ಜು.19): ನಗರದ ಹೋಟೆಲ್‌ ಮಾಲೀಕರೊಬ್ಬರ ಮಗನಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಶನಿವಾರವೇ ಸೋಂಕಿತನನ್ನು ನಗರದ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಹಾಗಾಗಿ ಸೋಂಕಿತ ವ್ಯಕ್ತಿಯೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದ ಪ್ರಥಮ ಸಂಪರ್ಕಿಗಳಾದ ಸೋಂಕಿತನ ತಂದೆ, ತಾಯಿ ಸೇರಿದಂತೆ ಇತರೆ ಕುಟುಂಬಸ್ಥರು ಸ್ವಯಂ ಪ್ರೇರಿತವಾಗಿ ಹೋಂ ಕ್ವಾರಂಟೈನ್‌ ಆಗಲು ಅಧಿಕಾರಿಗಳು ಸೂಚಿಸಿದ್ದರು.

‘ಲಾಕ್‌ಡೌನ್‌’ ಎಂಬ ಮನಸ್ಥಿತಿ!

ಆದರೆ, ಸೋಂಕಿತ ವ್ಯಕ್ತಿಯ ತಂದೆ ರಾಜಾರೋಷವಾಗಿ ಅವರದೇ ಮಾಲೀಕತ್ವದ ಹೋಟೆಲ್‌ ತೆರೆದು ಗ್ರಾಹಕರಿಗೆ ತಿಂಡಿ ಸರಬರಾಜು ಮಾಡಿತ್ತಿದ್ದು, ಈ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಕೂಡಲೇ ಹೋಟೆಲ್‌ ಬಳಿ ಬಂದು ಪರಿಶೀಲನೆ ನಡೆಸುವ ಜೂತೆಗೆ ಕೂಡಲೇ ಹೋಟೆಲ್‌ನ್ನು ಸೀಲ್‌ಡೌನ್‌ ಮಾಡುವ ಜೊತೆಗೆ ಸೋಂಕಿತನ ಮನೆಯನ್ನೂ ಸೀಲ್‌ಡೌನ್‌ ಮಾಡಿ, ಕುಟುಂಬಸ್ಥರನ್ನು ಹೋಂ ಕ್ವಾರಂಟೈನ್‌ ಆಗುವಂತೆ ಸೂಚಿಸಿದರು.

'ಕೊರೋನಾದಂತಹ ಸಂದರ್ಭದಲ್ಲೂ ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿರುವ ಬಿಜೆಪಿಗರು'

ಅಲ್ಲದೇ, ಕುಟಂಬದ ಎಲ್ಲ ಸದಸ್ಯರಿಗೆ ಕೋವಿಡ್‌ ಪರೀಕ್ಷೆ ಮಾಡಿಸಲು ಸೂಚಿಸಿ, ಮನೆಯಿಂದ ಹೊರ ಬಂದಲ್ಲಿ ಪ್ರಕರಣ ದಾಖಲಿಸುವ ಜೊತೆಗೆ ಇನ್ಸ್‌ಟ್ಯೂಷನ್‌ ಕ್ವಾರಂಟೈನ್‌ ಮಾಡುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದರು.

Latest Videos
Follow Us:
Download App:
  • android
  • ios