ತುಮಕೂರು: ಬಾಜಿ ಕಟ್ಟಿ ಗುಬ್ಬಿಯ ನಿಟ್ಟೂರುಪುರ ಐತಿಹಾಸಿಕ ತೇರಿಗೆ ಬೆಂಕಿ ಇಟ್ಟ ಪಾಪಿ..!
ಸುಮಾರು 800 ವರ್ಷಗಳ ಇತಿಹಾಸ ಇರುವಂತಹ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತಾದಿಗಳು ಲಕ್ಷಾಂತರ ರು. ಖರ್ಚು ಮಾಡಿ ವಿಶೇಷ ರಥ ಸಿದ್ಧಪಡಿಸಿದ್ದರು. ಶ್ರೀ ಕಲ್ಲೇಶ್ವರ ಸ್ವಾಮಿಯ ಅನ್ನಪೂರ್ಣೇಶ್ವರಿ ರಥೋತ್ಸವಕ್ಕೆ ಕೇವಲ ಹತ್ತು ದಿನಗಳ ಬಾಜಿಯಿದೆ. ಸೋಮವಾರ ಮಧ್ಯಾಹ್ನ ವೇಳೆ ಕಿಡಿಗೇಡಿ ಒಬ್ಬ ಬೆಂಕಿ ಇಟ್ಟಿದ್ದಾನೆ.
ಗುಬ್ಬಿ(ಮಾ.12): ತಾಲೂಕಿನ ನಿಟ್ಟೂರುಪುರ ಗ್ರಾಮದ ಐತಿಹಾಸಿಕ ಶ್ರೀ ಕಲ್ಲೇಶ್ವರ ಸ್ವಾಮಿ ಅವರ ರಥಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವಂತಹ ಘಟನೆ ನಡೆದಿದೆ.
ಸುಮಾರು 800 ವರ್ಷಗಳ ಇತಿಹಾಸ ಇರುವಂತಹ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತಾದಿಗಳು ಲಕ್ಷಾಂತರ ರು. ಖರ್ಚು ಮಾಡಿ ವಿಶೇಷ ರಥ ಸಿದ್ಧಪಡಿಸಿದ್ದರು. ಶ್ರೀ ಕಲ್ಲೇಶ್ವರ ಸ್ವಾಮಿಯ ಅನ್ನಪೂರ್ಣೇಶ್ವರಿ ರಥೋತ್ಸವಕ್ಕೆ ಕೇವಲ ಹತ್ತು ದಿನಗಳ ಬಾಜಿಯಿದೆ. ಸೋಮವಾರ ಮಧ್ಯಾಹ್ನ ವೇಳೆ ಕಿಡಿಗೇಡಿ ಒಬ್ಬ ಬೆಂಕಿ ಇಟ್ಟಿದ್ದಾನೆ.
ತುಮಕೂರಲ್ಲಿ ವಿ.ಸೋಮಣ್ಣ ಸ್ಪರ್ಧೆಗೆ ವಿರೋಧ ಇಲ್ವೇನ್ರಿ?: ಸಚಿವ ರಾಮಲಿಂಗಾರೆಡ್ಡಿ
ಕನ್ನಡ ಮಾತನಾಡದ ಬಿಹಾರಿ ಮೂಲದ ವ್ಯಕ್ತಿ ತೇರಿಗೆ ಬೆಂಕಿ ಇಟ್ಟಿದ್ದಾನೆ ಎಂಬ ಮಾಹಿತಿ ಇದ್ದು ಸ್ಥಳದಲ್ಲಿಯೇ ಸಿಕ್ಕಿದ್ದಾನೆ. ಕೂಡಲೇ ಅವನನ್ನು ಗುಬ್ಬಿ ಆ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ನಾಡ ಕಚೇರಿಯ ತಹಸೀಲ್ದಾರ್ ಉಪ ತಹಸೀಲ್ದಾರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಇನ್ನು ಹತ್ತು ದಿನಗಳಲ್ಲಿ ಜಾತ್ರೆ ಇದ್ದು, ಸಿದ್ದಲಿಂಗೇಶ್ವರರ ತೇರಿನಲ್ಲಿಯೇ ಕಲ್ಲೇಶ್ವರ ಸ್ವಾಮಿಯ ತೇರನ್ನು ಎಳೆಯುತ್ತೇವೆ. ಸರ್ಕಾರ ಕೂಡಲೇ ಅನುದಾನ ನೀಡಿ, ಮುಂದಿನ ವರ್ಷದ ಒಳಗೆ ತೇರು ತಯಾರಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.