Asianet Suvarna News Asianet Suvarna News

ಮೂಲ್ಕಿ: ನಾಗರಹಾವಿಗೆ ಡೀಸೆಲ್‌ ಎರಚಿದವನಿಗೆ ಮೈ ಉರಿ..!

ಒಂದು ವಾರ ಕಳೆಯುವಷ್ಟರಲ್ಲಿ ಡೀಸೆಲ್ ಎರಚಿದ ಕಾರ್ಮಿಕ ಕೂಡ ನಾಗರ ಹಾವಿನಂತೆ ಮೈ ಉರಿಯಿಂದ ಬಳಲಲು ಪ್ರಾರಂಭಿಸಿದ್ದು, ಆತನ ಸಂಬಂಧಿಕರು ಕಾವಲುಗಾರನ ಊರು ಉತ್ತರ ಕರ್ನಾಟಕಕ್ಕೆ ಕರೆದೊಯ್ಯಿದಿದ್ದು ಇದೀಗ ಅಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. 
 

Person Sick who Poured Diesel on the Cobra at Mulki in Dakshina Kannada grg
Author
First Published Sep 16, 2023, 7:49 AM IST

ಮೂಲ್ಕಿ(ಸೆ.16):  ನಾಗರಹಾವಿಗೆ ಡೀಸೆಲ್‌ ಎರಚಿದಾಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ.

ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ಕಳೆದ ವಾರ ನಾಗರ ಹಾವೊಂದು ಕಂಡು ಬಂದಿದ್ದು ಇದನ್ನು ಕಂಡ ಕಟ್ಟಡದ ಕಾವಲುಗಾರ ನಾಗರ ಹಾವಿಗೆ ಡೀಸೆಲ್ ಎರಚಿದ. ಬಳಿಕ ಮೈ ಉರಿಯಿಂದ ನಾಗರ ಹಾವು ಒದ್ದಾಡತೊಡಗಿದಾಗ, ಸ್ಥಳೀಯರು ಇದನ್ನು ಕಂಡು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ತಿಳಿಸಿದರು. 

ಮಂಗ್ಳೂರಲ್ಲಿ ದೇಶದ ಅತೀ ದೊಡ್ಡ ಭೂಗತ ಗ್ಯಾಸ್‌ ಸಂಗ್ರಹಾಗಾರ..!

ಯತೀಶ್ ಕಟೀಲು ಅವರು ಸ್ಥಳಕ್ಕೆ ಆಗಮಿಸಿ ಶ್ಯಾಂಪು ಮೂಲಕ ಅದನ್ನು ತೊಳೆದು ಸಹಜ ಸ್ಥಿತಿಗೆ ಬಂದ ನಂತರ ಕಾಡಿಗೆ ಬಿಟ್ಟಿದ್ದಾರೆ, ಒಂದು ವಾರ ಕಳೆಯುವಷ್ಟರಲ್ಲಿ ಡೀಸೆಲ್ ಎರಚಿದ ಕಾರ್ಮಿಕ ಕೂಡ ನಾಗರ ಹಾವಿನಂತೆ ಮೈ ಉರಿಯಿಂದ ಬಳಲಲು ಪ್ರಾರಂಭಿಸಿದ್ದು, ಆತನ ಸಂಬಂಧಿಕರು ಕಾವಲುಗಾರನ ಊರು ಉತ್ತರ ಕರ್ನಾಟಕಕ್ಕೆ ಕರೆದೊಯ್ಯಿದಿದ್ದು ಇದೀಗ ಅಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ಉರಗ ರಕ್ಷಕ ಯತೀಶ್ ಕಟೀಲು ತಿಳಿಸಿದ್ದಾರೆ.

Follow Us:
Download App:
  • android
  • ios