ಬೀದರ್(ಜ.01): ಹೊಸ ವರ್ಷಾಚರಣೆ ವೇಳೆ ಗುಂಪು ಘರ್ಷಣೆಯಾಗಿ ವ್ಯಕ್ತಿಯೋರ್ವ ಬಲಿಯಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಸಿಕಿಂದ್ರಾಬಾದ್ ವಾಡಿಯಲ್ಲಿ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನ ಝರೆಪ್ಪೆ(30) ಎಂದು ಗುರುತಿಸಲಾಗಿದೆ. 

ಸಿಕಿಂದ್ರಾಬಾದ್ ವಾಡಿಯ ರಸ್ತೆಯಲ್ಲೇ ಯುವಕರ ತಂಡವೊಂದು ಡಿಜೆ ಹಾಕಿಕೊಂಡು ನ್ಯೂ ಇಯರ್ ಸೆಲೆಬ್ರೆಷನ್ ಮಾಡುತ್ತಿತ್ತು. ಈ ವೇಳೆ ಝರೆಪ್ಪ ಮತ್ತು ಸ್ನೇಹಿತರು ರಸ್ತೆಯ ಪಕ್ಕದಲ್ಲಿ ಸೆಲೆಬ್ರೆಷನ್ ಮಾಡಲು ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕರ ತಂಡವೊಂದು ಜಗಳಕ್ಕೆ ಇಳಿದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ಯುವಕರ ಗುಂಪು ಝರೆಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಝರೆಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನಪ್ಪಿದಾರೆ. ಈ ಸಂಬಂಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.