ರಾಯಚೂರು(ಮಾ.11): ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೋರ್ವನನ್ನ ಕೊಲೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಕಜ್ಜಿ ಬಂಡಿ ಗ್ರಾಮದ ಬಳಿ ಇಂದು(ಬುಧವಾರ) ನಡೆದಿದೆ. ಶೇಖರ್ ನಿಲೋಗಲ್ ಗಲಗ್ (35) ಹತ್ಯೆಯಾದ ವ್ಯಕ್ತಿಯಾಗಿದ್ದಾರೆ.

ಮೃತ ಶೇಖರ್ ನಿಲೋಗಲ್ ಗಲಗ್ ಗ್ರಾಮದವರಾಗಿದ್ದಾರೆ. ಶೇಖರ್ ನಿಲೋಗಲ್ ಕ್ರೂಸರ್ ಚಾಲಕನಾಗಿದ್ದ ಎಂದು ತಿಳಿದು ಬಂದಿದೆ. ಹಾಡಹಗಲೇ ಕೊಲೆಯಾಗಿದ್ದರಿಂದ ಗ್ರಾಮದ ಜನತೆ ಆತಂಕಕ್ಕೊಳಗಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದುಷ್ಕರ್ಮಿಗಳು ಶೇಖರ್ ನಿಲೋಗಲ್ ಅವರನ್ನ ನಡುರಸ್ತೆಯಲ್ಲಿ ಬರ್ಬರ ಹತ್ಯೆಗೈದಿದ್ದಾರೆ. ಕೊಲೆಗೆ ಹಳೆ ವೈಷಮ್ಯ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.