ಬಳ್ಳಾರಿ(ಮೇ.10): ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತನ್ನ ಮನೆಗೆ ತಾನೇ ಬೆಂಕಿ ಇಟ್ಟಿರುವ ಘಟನೆ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮದ್ಯ ವ್ಯಸನಿ ಚಿದಾನಂದ ಎಂಬಾತ ಈ ಕೃತ್ಯ ಎಸಗಿದ್ದು, ಮನೆಯೊಳಗಿನ ವಸ್ತು ಸುಟ್ಟು ಕರಲಾಗುತ್ತಿದ್ದಂತೆಯೇ ಅಲ್ಲಿಂದ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮದ್ಯದಂಗಡಿಯಲ್ಲಿ ಕೆಲಸ ಮಾಡುತ್ತಿರುವ ಚಿದಾನಂದ ಶುಕ್ರವಾರ ರಾತ್ರಿ ಕುಡಿದು ಮನೆಗೆ ಬಂದಿದ್ದಾನಲ್ಲದೆ, ಕುಡಿದ ಮತ್ತಿನಲ್ಲಿ ಬೆಂಕಿ ಕಡ್ಡಿ ಗೀರಿ ಮನೆಯಲ್ಲಿದ್ದ ಬಟ್ಟೆಗಳಿಗೆ ಹಚ್ಚಿದ್ದಾನೆ. ಇದರಿಂದ ಮನೆಯೊಳಗಿನ ಆಹಾರಧಾನ್ಯಗಳು ಸೇರಿದಂತೆ ಎಲ್ಲ ವಸ್ತುಗಳಿಗೆ ಬೆಂಕಿ ವ್ಯಾಪಿಸಿಕೊಂಡಿದೆ.

ಒಂದ್ಕಡೆ ಕೊರೋನಾ ಕಾಟ, ಇನ್ನೊಂದ್ಕಡೆ ಸುಡು ಬಿಸಿಲಿಗೆ ಬಸವಳಿದ ಜನ: ಗ್ರಾಹಕರಿಗೆ SBIನಿಂದ ವಿನೂತನ ಸೇವೆ..!

ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದಂತೆಯೇ ಪತ್ನಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾಳೆ. ಪತಿ ಅಲ್ಲಿಂದ ಪರಾರಿಯಾಗಿದ್ದಾನೆ. ಚಿದಾನಂದನು ಮಡಿವಾಳ ಸಮುದಾಯದವರಾಗಿದ್ದು ಬಟ್ಟೆತೊಳೆದುಕೊಡಲು ನೀಡಿದ್ದ ಹಲವರ ಬಟ್ಟೆಗಳು ಸುಟ್ಟು ಕರಕಲಾಗಿವೆ. ಪತಿಯ ಕೃತ್ಯದಿಂದ ಪತ್ನಿ ಕಣ್ಣೀರಿಡುತ್ತಿದ್ದಾಳೆ. ಈ ಘಟನೆಯಲ್ಲಿ ಸುಮಾರು .2.5 ಲಕ್ಷ ಹಾನಿಯಾಗಿದೆ ಎನ್ನಲಾಗಿದೆ.