Asianet Suvarna News Asianet Suvarna News

ಬೆಳಗಾವಿ: ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಸಾವು, ಗ್ರಾಮಸ್ಥರಲ್ಲಿ ಅತಂಕ

ಮುಂಬೈನಿಂದ ಗ್ರಾಮಕ್ಕೆ ಮರಳಿ ಬಂದಿದ್ದ 50 ವರ್ಷದ ವ್ಯಕ್ತಿ ಸಾವು| ಮೃತನಿಗೆ ಯಾವುದೇ ರೀತಿಯ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿರಲಿಲ್ಲ|ಕೋವಿಡ್‌ ವರದಿ ಬಂದ ನಂತರವಷ್ಟೇ ಈ ವ್ಯಕ್ತಿಯ ಸಾವಿನ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ|

Person dies at  Quarantine Center in Belagavi district
Author
Bengaluru, First Published Jun 7, 2020, 10:38 AM IST

ಬೆಳಗಾವಿ(ಜೂ.07): ಮುಂಬೈನಿಂದ ಬೆಳಗಾವಿ ತಾಲೂಕಿನ ಕಟ್ಟನಬಾಂವಿ ಗ್ರಾಮಕ್ಕೆ ಆಗಮಿಸಿ, ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬ ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. 

ಶುಕ್ರವಾರವಷ್ಟೇ ಕಟ್ಟನಬಾಂವಿ ಗ್ರಾಮದ ಐವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ಆತಂಕದ ನಡುವೆಯೇ ಮುಂಬೈನಿಂದ ಗ್ರಾಮಕ್ಕೆ ಮರಳಿ ಬಂದಿದ್ದ 50 ವರ್ಷದ ವ್ಯಕ್ತಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

ಬೆಳಗಾವಿ: ಆಹಾರ ಕಿಟ್‌ ಪಡೆಯಲು ಬಂದ ಮಹಿಳೆಯರಿಗೆ ಲಾಠಿ ಏಟು

ಮೃತ ವ್ಯಕ್ತಿ ಏಳು ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದ. ಜೂನ್‌ 4 ರಂದು ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಈತನ ಗಂಟಲು ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೋವಿಡ್‌ ಪ್ರಕರಣದ ವರದಿ ಬರುವುದಕ್ಕಿಂತ ಮುಂಚೆಯೇ ಈತ ಸಾವನ್ನಪ್ಪಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಈತನಿಗೆ ಯಾವುದೇ ರೀತಿಯ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿರಲಿಲ್ಲ. ಹೃದಾಯಾಘಾತದಿಂದ ಸಾವನ್ನಪ್ಪಿದ್ದಾನೆ. ಕೋವಿಡ್‌ ವರದಿ ಬಂದ ನಂತರವಷ್ಟೇ ಈ ವ್ಯಕ್ತಿಯ ಸಾವಿನ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios