ಬಾಗಲಕೋಟೆ(ಆ.06): ಅಯೋಧ್ಯೆ ರಾಮಮಂದಿರ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ಬೆನ್ನಲ್ಲೆ ಪ್ರಚೋದನಕಾರಿ ವಾಟ್ಸಾಪ್‌ ಸ್ಟೇಟಸ್‌ ಹಾಕಿ ಕೋಮು ಸೌಹಾರ್ದತೆ ಹಾಳು ಮಾಡುತ್ತಿದ್ದಾನೆಂದು ಅನ್ಯಕೋಮಿನ ಯುವಕನನ್ನು ಬಂಧಿಸಿದ ಘಟನೆ ಜಿಲ್ಲೆಯ ಕೆರೂರು ಪಟ್ಟಣದಲ್ಲಿ ಬುಧವಾರ ನಡೆದಿದೆ.

ಕೆರೂರು ಗ್ರಾಮ ಅಬ್ದುಲ್‌ ಬಂಧಿತ ಯುವಕ. ಏಯಿ ವಿಶ್ವ ಹಿಂದೂ ಪರಿಷದ್‌ ವಾಲೋ ಎಂದು ಹಸಿರು ಧ್ವಜ, ಮುಖಕ್ಕೆ ಅರ್ಧ ಹಸಿರು ಬಟ್ಟೆ ಕಟ್ಟಿಕೊಂಡ ಫೋಟೋವನ್ನು ಸ್ಟೇಟಸ್‌ ಹಾಕಿದ್ದ. 

ಸಿದ್ದರಾಮಯ್ಯ ಗುಣಮುಖರಾಗಲು 5 ವರ್ಷದ ಬಾಲಕಿಯಿಂದ ವಿಶೇಷ ಪೂಜೆ!

ಈ ಕಾರಣಕ್ಕೆ ಯುವಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಲೋಕೇಶ ಜಗಲಾಸರ ತಿಳಿಸಿದ್ದಾರೆ. ಈ ಸಂಬಂಧ ಕೆರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.